•  

ಪೂರ್ಣಚಂದ್ರ ತೇಜಸ್ವಿ (08.09.1938 -- 05.04.2007)

ಗುರುವಾರ, ಫೆಬ್ರವರಿ 28, 2002, 5:30 [IST]

ಹೆಸರು : ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ

ಜನ್ಮ ದಿನಾಂಕ : ಸೆ.8.1938

ಜನ್ಮ ಸ್ಥಳ : ಕುಪ್ಪಳ್ಳಿ, ಶಿವಮೊಗ್ಗ ಜಿಲ್ಲೆ.

ವೃತ್ತಿ : ಬರಹಗಾರ, ಕಾದಂಬರಿಗಾರ, ಕೃಷಿಕ, ಪರಿಸರ ಪ್ರೇಮಿ, ವಿಜ್ಞಾನಿ, ಸಂಶೋಧಕ ಇತ್ಯಾದಿ ಇತ್ಯಾದಿ.
ಸಾಹಿತ್ಯ ಸಂದರ್ಭ : ನವೋದಯ ಕಾಲ

ಓದುಗರಿಗೆ ನೀಡಿದ್ದು : ಬೆರಗು, ಹೊಸ ಲೋಕ, ಹೊಸ ವಿಚಾರ, ಹೊಸ ಅನುಭವ.

ವೈಶಿಷ್ಟ್ಯತೆ : ತನ್ನ ಅಪ್ಪ ಕುವೆಂಪು ಛಾಯೆಯಿಂದ ಹೊರಬಂದದ್ದು... ತಮ್ಮದೇ ವ್ಯಕ್ತಿತ್ವ ಕಟ್ಟಿಕೊಂಡದ್ದು.

ವಿದ್ಯಾಭ್ಯಾಸ : ಮಹಾರಾಜ ಕಾಲೇಜು, ಮೈಸೂರು. ಓದು ಮುಗಿದ ಮೇಲೆ ಚಿಕ್ಕಮಗಳೂರಿಗೆ ಪಯಣ. ಕಾಫಿ ತೋಟದಲ್ಲಿ ಲೀನ. ತಲ್ಲೀನ.

ಹವ್ಯಾಸ : ಪರಿಸರದೊಂಡಿಗೆ ಒಡನಾಟ, ಪೆಯಿಂಟಿಂಗ್‌,ಪೋಟೋಗ್ರಫಿ, ಫಿಲಾಸಫಿ, ಬರವಣಿಗೆ, ಪ್ರಚಲಿತ ಘಟನೆಗಳಿಗೆ ಪ್ರತಿಸ್ಪಂದನ ಇತ್ಯಾದಿ.

ಬರೆದದ್ದು : ಪದ್ಯ, ಕತೆ, ಕಾದಂಬರಿ, ಪ್ರವಾಸ ಕಥನ, ನಾಟಕ, ಸೈನ್ಸ್‌ ಫಿಕ್ಷನ್‌ ಸಾಹಿತ್ಯ, ಪರಿಸರ ಇತ್ಯಾದಿ.

ಕುವೆಂಪು ಬಗ್ಗೆ ಬರೆದದ್ದು : ಅಣ್ಣನ ನೆನಪು

ಪ್ರಶಸ್ತಿಗಳು : ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1987), ಪಂಪ ಪ್ರಶಸ್ತಿ (2001), ರಾಜ್ಯೋತ್ಸವ ಪ್ರಶಸ್ತಿ

ಕವನ ಸಂಕಲನ : ಸೋಮುವಿನ ಸ್ವಗತಲಹರಿ ಮತ್ತು ಇತರ ಕವನಗಳು, ಬೃಹನ್ನಳೆ

ಕಾದಂಬರಿ : ಮಾಯಾಲೋಕ, ರುದ್ರಪ್ರಯಾಗದ ಭಯಾನಕ ನರಭಕ್ಷಕ, ಚಿದಂಬರ ರಹಸ್ಯ, ಕರ್ವಾಲೋ, ಅಣ್ಣನ ನೆನಪು, ಜುಗಾರಿ ಕ್ರಾಸ್‌, ಸ್ವರೂಪ, ನಿಗೂಢ ಮನುಷ್ಯರು.

ಕಥಾ ಸಂಕಲನ : ಪರಿಸರದ ಕತೆ, ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟ್‌ ಆಫೀಸ್‌, ತಬರನ ಕತೆ, ಕಿರಗೂರಿನ ಗಯ್ಯಾಳಿಗಳು, ಕಾಡಿನ ಕತೆಗಳು(ಭಾಗ 1 ಮತ್ತು 2)

ವಿಜ್ಞಾನ ಮತ್ತು ಪರಿಸರ ಬರಹ : ಮಿಸ್ಸಿಂಗ್‌ ಲಿಂಕ್‌, ದಿ ಗ್ರೇಟ್‌ ಎಸ್ಕೇಪ್‌ , ಪೆಪಿಲ್ಲಾನ್‌, ಹಕ್ಕಿ ಪುಕ್ಕ, ದಕ್ಷಿಣ ಭಾರತದ ಹಕ್ಕಿಗಳು, ವಿಸ್ಮಯ(ಭಾಗ 1ಮತ್ತು 2), ಫ್ಲೇಯಿಂಗ್‌ ಸಾಸರ್ಸ್‌(ಭಾಗ 1ಮತ್ತು 2), ಹೆಜ್ಜೆ ಮೂಡದ ಹಾದಿ, ಸಹಜ ಕೃಷಿ, ಮಿಲೇನಿಯಂ ಸೀರೀಸ್‌.

ಸಿನಿಮಾಗಳಾದ ಕಾದಂಬರಿಗಳು : ಅಬಚೂರಿನ ಪೋಸ್ಟ್‌ ಆಫೀಸ್‌ , ತಬರನ ಕತೆ, ಕುಬಿ ಮತ್ತು ಇಯಾಲ, ಕೃಷ್ಮೇಗೌಡನ ಆನೆ(?).

ನಾಟಕಗಳು : ಜುಗಾರೀ ಕ್ರಾಸ್‌, ಚಿದಂಬರ ರಹಸ್ಯ, ಕೃಷ್ಣೇಗೌಡನ ಆನೆ, ಯಮಳ ಪ್ರಶ್ನೆ, ಮಾಯಾಮೃಗ

User Comments
ಐಶ್ವರ್ಯ 12 Jan 2011 11:47 am
ಪೂಜ್ಯ ತೇಜಸ್ವಿಯವರಿಗೆ, ಕನ್ನಡ ಅಭಿಮಾನಿಯಾದ ನನ್ನ ನೂರು ನಮನಗಳು. ಮಹಾಕವಿಯ ಮಗನಾಗಿಯು ಅವರ ವ್ಯಾಪಕ ಸಾಹಿತ್ಯ ಛಾಯೆಯಲ್ಲಿ ಸಿಲುಕದೆ ತಮ್ಮದೇ ಅಪೂರ್ವ ಧಾಟಿಯ ಸೃಜನಶೀಲತೆಯ ಬರಹದಿಂದ ಕನ್ನಡ ಸಾಹಿತ್ಯಕ್ಕೆ ನೀವು ಕೊಟ್ಟ ಕೊಡುಗೆ ಅನರ್ಘ್ಯವಾದುದು:ಅನುಕರಣೀಯ ಬದುಕನ್ನು ಬದುಕಿ ಮಾದರಿಯಾದಿರಿ. ನಿಮಗೆ ನನ್ನ ಪ್ರೀತಿಯ ನಮಸ್ಕಾರಗಳು.ಪ್ರಿಯ ಕರ್ವಾಲೋರವರೆ,ಅಪ್ಪನಿಗೆ ತಕ್ಕ ಮಗನಾದಿರಿ. ಪ್ರಕೃತಿಯ ಮಡಿಲಿನಲ್ಲಿ ಮಗುವಾಗಿ ಯಾವುದೇ ಆಡಂಬರದ ಜೀವನಕೆ ಮರುಳಾಗದೆ ಪ್ರಚಾರವನ್ನು ಬಯಸದೆ ನಿಮ್ಮದೇ ಸರಳ ಬದುಕನ್ನೇ ಮೌನವಾಗಿ ಇಂದಿನ ಜನತೆಯ ಮುಂದಿಟ್ಟು ಅದೇ ಮೌನಧಾರಿಯಾಗಿ ಯಾರಿಗೂ ಸುಳಿವನ್ನೂ ಕೊಡದೆ ನಡೆದಿರಲ್ಲಾ ಸರಿಯೇ..?!
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Kings XI Punjab: 53 / 1, 7.1 Overs
1st Test , Lord's Cricket Ground, St John's Wood
West Indies: 86 / 2, 31.5 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article