ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹ್ಯೂಸ್ಟನ್‌ ಹುಳೀ ಹೆಂಡ

By Staff
|
Google Oneindia Kannada News

*ಡಾ. ಮೈ.ಶ್ರೀ. ನಟರಾಜ್‌

ಡೊಳ್ಳು ಕುಣಿತದ ದೋಂಡೂ ಬಾಯಿ
ಅಮೇರಿಕಾ ನೋಡಿ ಬಿಟ್ಟಳು ಬಾಯಿ
ಟೆಕ್ಸಾಸ್‌ನಲ್ಲೂ ತೆಂಗಿನ ಕಾಯಿ
ಮೆಕ್ಸಿಕೋ ಮಣ್ಣಿನ ಮೆಣಸಿನ ಕಾಯಿ

ಜೋಡಿ ಮರಗಳ ಹೋಟೆಲ್‌ ಸೇರಿ
ಕಾಂಪೌಂಡ್‌ ಆಚೆ ಬೇಲೀ ಹಾರಿ
ಎಲ್ಲಿ ಎತ್ತ ಎನ್ನುತ ಕೋರಿ
ಹುಡುಕಿದರಣ್ಣ ಪಬ್ಬಿನ ದಾರಿ

ಹಿಂದೂ ಮುಂದೂ ನೋಡದೆ ದೋಂಡೂ
ತರಿಸಿದಳಣ್ಣ ಘಂ ಘಂ ಗುಂಡು
ಕುಡಿಯುವ ಇವಳ ವೈಖರಿ ಕಂಡು
ಮುತ್ತಿದರಣ್ಣ ಗಂಡ್ಗಳ ಹಿಂಡು

ತಂಡದ ಭಂಡರ ದೊಡ್ಡ ಮುಖಂಡ
ಕೌಬಾಯಿ ಹ್ಯಾಟಿನ ಮಹಾ ಪ್ರಚಂಡ
ತರಿಸಿದ
ಏರಿದ ಅಮಲಲಿ ಖುಷಿಯನು ಕಂಡ

ಪ್ರೀತಿಯ ತೋರುವ ಮೀಸೆಯ ಮುಖಗಳು
ಕೇಳದೆ ಕೊಡಿಸುವ ಕೊಡುಗೆಯ ಕೈಗಳು
ಮತ್ತಿನ ಕಣ್ಗಳು ಮುತ್ತಿನ ತುಟಿಗಳು
ಎಲ್ಲೂ ಇಲ್ಲದ ಟೆಕ್ಸಾಸ್‌ ಗುಣಗಳು

ಮತ್ತೇರಿದ ಕಣ್ಣಲಿ ಪ್ರೀತಿಯ ಛಾಯೆ
ಕೌಬಾಯ್‌ ಕಂಪೆನಿ ತಂದಿತು ಮಾಯೆ
ಅಲ್ಲೇಕೆ ಹುಟ್ಟಿದೆ ಕನ್ನಡ ತಾಯೆ
ಆಗಬಹುದಿತ್ತು ನಾ ಪಶುಬಾಲಜಾಯೆ

Ball danceಹುಡುಕತ ಬಂದ ದೋಂಡೂ ಗಂಡ
ಹೀರುತ ಕುಳಿತಿಹ ಹೆಂಡಿರ ಕಂಡ
ಪೇಟವ ಬಿಟ್ಟು ಹ್ಯಾಟಿಗೆ ಒಲಿದಳೆ
ಎನ್ನುತ ಚೀರಿ ಕಿರುಚ್ಕೊಂಡ

ಹಬ್ಬದ ದಿನವೂ ಹಳೇ ಗಂಡ
ಸಿಗಬಾರದಿತ್ತೇ ಬಿಳೇ ಗಂಡ
ಕಳೀ ಬಾರದಿತ್ತೇ ಇಡೀ ಜೀವನವ
ಹೀರುತ ಹೂಸ್ಟನ್‌ ಹುಳೀ ಹೆಂಡ

ಉರಿಯುವ ದೋಂಡೂ ಗಂಡನ ಕರೆಸಿ
ಗುಂಪಿಗೆ ಸೇರೋ ಎನ್ನುತ ಒಲಿಸಿ
ಇನ್ನೊಂದು ಸುತ್ತು ಪಾನಕ ತರಿಸಿ
ಘಂ-ಘಂ ಗುಂಡನು ಹಾಕಿದರು

ದ ಮಹಿಮೆ
ಕನ್ನಡ ತಾಯಿಯ ಪ್ರೀತಿಯ ಚಿಲುಮೆ
ಸಮಯ ಸ್ಫೂರ್ತಿಯ ದೋಂಡೂ ಹಿರಿಮೆ
ಕುಣಿತಕೆ ಗೆಜ್ಜೆಯ ಕಟ್ಟಿದರು

ಕೌಬಾಯ್‌ ಗುಂಪನು ಸೇರಿಸಿಕೊಂಡು
ಗಂಡನ ಸೊಂಟವ ಬಳಸಿಕ್ಕೊಂಡು
ಡೊಳ್ಳು ಕುಣಿತವ ಮಾಡಿದರು
ಕನ್ನಡದಲಿ ಕುಣಿದಾಡಿದರು !

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X