ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೀ ಸ್ವಾಮಿ, ಈ ಅಶ್ಲೀಲ ಚಿತ್ರ ಬರೆದವರು ಯಾರು?

|
Google Oneindia Kannada News

ಒಬ್ಬ ವಿಚಿತ್ರ ಮನಸ್ಥಿತಿಯಲ್ಲಿರುತ್ತಾನೆ. ಓದುವಾಗ ಓದಿನತ್ತ ಗಮನವಿರುವುದಿಲ್ಲ, ತಿನ್ನುವಾಗ ತಿನ್ನುವತ್ತ ಲಕ್ಷ್ಯವಿರುವುದಿಲ್ಲ. ಯಾವಾಗಲೂ ಒಂದೇ ಗುಂಗಿನಲ್ಲಿ ಇರುತ್ತಾನೆ. ಒಂಥರಾ ಅನ್ಯಮನಸ್ಕನಾಗಿರುತ್ತಾನೆ. ಇದು ಆತನ ಜೊತೆಯಿರುವವರಿಗೆ, ಅಕ್ಕಪಕ್ಕದವರಿಗೆ ಮಾತ್ರವಲ್ಲ ಆತನ ಗಮನಕ್ಕೂ ಬಂದಿರುತ್ತದೆ.

ಇಂಥ ಮನಸ್ಥಿತಿಯಿಂದ ಹೊರಬರಬೇಕು, ಏನಾದರೂ ಉತ್ತರ ಕಂಡುಕೊಳ್ಳಬೇಕು ಎಂದು ಆತ ಮನಶಾಸ್ತ್ರಜ್ಞನ ಬಳಿಗೆ ಬರುತ್ತಾನೆ. ಮನಶಾಸ್ತ್ರಜ್ಞ ಆತನನ್ನು ತನ್ನ ಬಳಿ ಕೂಡಿಸಿಕೊಂಡು ಸಂವಾದಿಸಲು ಶುರುಹಚ್ಚಿಕೊಳ್ಳುತ್ತಾನೆ.

ಒಂದು ಪೇಪರಿನ ಮೇಲೆ ಚೌಕಾಕಾರ ಬರೆದು "ಇದು ಏನು? ನಿಮಗೆ ಏನನ್ನು ನೆನಪಿಸುತ್ತದೆ? ಮುಚ್ಚುಮರೆಯಿಲ್ಲದೆ ಹೇಳು" ಅಂತ ಕೇಳುತ್ತಾನೆ.

"ಕಾಮ" ಅಂತ ಯಾವುದೇ ಬಿಗುಮಾನ, ಹಿಂಜರಿಕೆ ಇಲ್ಲದೆ ಆತ ಉತ್ತರಿಸುತ್ತಾನೆ.

ಓಹೋ ಹೀಗೋ ಸಮಾಚಾರ, ಅಂತ ಮನಶಾಸ್ತ್ರಜ್ಞ ನಾಯಿ, ನರಿ, ಹೂವು, ಕತ್ತೆ, ಪೆನ್ನು, ಬನ್ನು ಮುಂತಾದ ಚಿತ್ರಗಳನ್ನು ಬಿಡಿಸಿ "ಇವನ್ನಾದರೂ ಕಂಡರೆ ನಿನಗೆ ಏನು ಅನಿಸುತ್ತದೆ" ಎಂದು ಪ್ರಶ್ನೆ ಹಾಕಿದ.

ಅದಕ್ಕೂ ಕೂಡ ಆ ವ್ಯಕ್ತಿ, "ಕಾಮ" ಅಂದ ಯಾವುದೇ ಭಾವನೆಯನ್ನು ತೋರದೆ.

ಆತನನ್ನು ಕೂಲಂಕಷವಾಗಿ ನೋಡಿ ಮನಶಾಸ್ತ್ರಜ್ಞ ಹೇಳಿದ, "ನಿನಗೆ ಲೈಂಗಿಕ ವಿಕೃತಿಯಿದೆ" ಎಂದು ಮುಖಕ್ಕೆ ಬಾರಿಸಿದ ಹಾಗೆ ಹೇಳಿದ.

"ನನಗೆ?" ಎಂದು ಮನಶಾಸ್ತ್ರಜ್ಞರನ್ನೇ ಕೇಳಿದ ಆ ವ್ಯಕ್ತಿ, "ರೀ ಸ್ವಾಮಿ, ಈ ಎಲ್ಲ ಅಶ್ಲೀಲ ಚಿತ್ರಗಳನ್ನು ಬರೆದದ್ದು ನಾನೋ, ನೀನೋ?" ಎಂದು ರಪ್ಪಂತ ಹೇಳಿ ಎದ್ದು ಹೊರನಡೆದುಬಿಟ್ಟ.

English summary
Adult kannada jokes : Who has written these dirty pictures?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X