ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಲಿ ಗಾಳಿಯದು ಅದೇನು ತುಂಟತನವಂತೀರಿ?

|
Google Oneindia Kannada News

ಮಿಸ್ ಲವೀನಾ ಜಾಲಿಯಾಗಿ ಸೀರೆಯ ನೆರಿಗೆಯನ್ನು ಚಿಮ್ಮಿಕೊಂಡು, ಗೆಜ್ಜೆ ಘಲ್ ಘಲ್ ಸದ್ದು ಮಾಡುತ್ತ ನಡೆದುಕೊಂಡು ಶಾಲೆಯೊಳಗೆ ಬರುತ್ತಿದ್ದರೆ ಪ್ರಿನ್ಸಿ ಪರಮೇಶಿಯ ಹೃದಯವೂ ಲಯ ತಪ್ಪುತ್ತಿತ್ತು. ಆದರೂ, ಲವೀನಾಳ ಗೆಜ್ಜೆಯ ಸದ್ದು ಕೇಳುತ್ತಲೇ, ಏನೋ ನೆನಪು ಮಾಡಿಕೊಳ್ಳುವ ಹಾಗೆ ತನ್ನ ಚೇಂಬರಿನಿಂದ ಹೊರಬರುವುದನ್ನು ಪರಮೇಶಿ ಮರೆಯುತ್ತಿರಲಿಲ್ಲ.

ಇದು ಲವೀನಾಗೂ ಗೊತ್ತಿತ್ತು, ಮೇಷ್ಟ್ರುಗಳಿಗೂ ಗೊತ್ತಿತ್ತು, ಕಳ್ಳ ಹುಡುಗರಿಗೂ ಗೊತ್ತಿತ್ತು. ಆದರೆ, ಅವರಿಗೆಲ್ಲ ಗೊತ್ತಿದೆಯೆಂದು ಪ್ರಿನ್ಸಿ ಪರಮೇಶಿಗೆ ಮಾತ್ರ ಗೊತ್ತಿರಲಿಲ್ಲ.

ಸೀರೆಯುಟ್ಟ ಅಂತಹ ಬ್ಯೂಟಿಫುಲ್ ಟೀಚರ್ ಕ್ಲಾಸೊಳಗೆ ಬಂದಕೂಡಲೆ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತಿತ್ತು. ಪೋಲಿ ಹುಡುಗರು ಪಾಠ ಕೇಳಲು ಅಷ್ಟು ಸೈಲೆಂಟಾಗಿರುತ್ತಿದ್ದರೋ, ಮತ್ತಾವುದಕ್ಕೋ. ಆಗಾಗ ಇತರ ಮೇಷ್ಟ್ರುಗಳು ಕೂಡ ನೆವ ಮಾಡಿಕೊಂಡು ಅತ್ತ ಹಾದು ಹೋಗುತ್ತಿದ್ದರು.

ಒಂದು ದಿನ ಏನಾಯಿತೆಂದರೆ, ಕಿಟಕಿಯ ಬಾಗಿಲುಗಳನ್ನು ಅಲ್ಲೋಲಕಲ್ಲೋಲ ಮಾಡುತ್ತ ಕುಳಿರ್ಗಾಳಿ ಕ್ಲಾಸ್ ರೂಂ ಹೊಕ್ಕು, ಮೇಜಿನ ಮೇಲಿದ್ದ ಚಾಕ್ ಪೀಸುಗಳನ್ನು ಚೆಲ್ಲಾಪಿಲ್ಲಿ ಮಾಡಿತ್ತು. ನೆಲದ ಮೇಲೆ ಬಿದ್ದ ಚಾಕ್ ಪೀಸನ್ನು ಎತ್ತಿಕೊಳ್ಳುವಾಗ, ಲವೀನಾ ತೊಟ್ಟಿದ್ದ ಕೆಂಪು ಕಂಚುಕದ ದರ್ಶನ ವಿದ್ಯಾರ್ಥಿಗಳಿಗೆ ಲಭಿಸಿತು. ತುಂಟ ಸುರೇಸ ಕಿಸಕ್ಕನೆ ನಕ್ಕಿದ್ದ.

"ಯಾಕ್ಲೇ ಸುರೇಸ, ನಗ್ತಿದ್ದಿಯಾ" ಅಂತ ಕೇಳಿದ್ದಕ್ಕೆ ಸುರೇಸನಿಗೆ ನಗು ತಡೆಯಲಾಗಲೇ ಇಲ್ಲ. ಬಾಯಿ ಮುಚ್ಚಿಕೊಂಡು ಇನ್ನೂ ಜೋರಾಗಿ ನಗಲು ಪ್ರಾರಂಭಿಸಿದ. ಆತ ನಕ್ಕಿದ್ದು ಯಾಕೆಂದು ಲವೀನಾಗೆ ಗೊತ್ತಾಯಿತು. ಹೀಗಾಗಬಹುದು ಅಂತ ಬಟ್ಟೆ ತೊಡುವಾಗಲೇ ಆಕೆ ಅಂದುಕೊಂಡಿದ್ದಳು. ಆದರೂ ಅದೇ ದಿರಿಸನ್ನು ಧರಿಸಿ ಬಂದಿದ್ದಳು.

ಸುರೇಸ ಉತ್ತರ ಕೊಡದಿದ್ದಾಗ, ಪಿತ್ತ ನೆತ್ತಿಗೇರಿಸಿಕೊಂಡ ಮಿಸ್ ಲವೀನಾ, "ಗೆಟೌಟ್, ಇನ್ನೊಂದು ವಾರ ಕ್ಲಾಸಿನೊಳಗೆ ಬರಬೇಡ" ಎಂದು ಅಬ್ಬರಿಸಿದಳು ಲವೀನಾ. ಸುರೇಸ ಸದ್ದಿಲ್ಲದೆ ಕ್ಲಾಸಿಂದ ಹೊರಗೆ ನಡೆದ.

ಪಾಠ ಮುಂದುವರಿಯಿತು. ಕಿಟಕಿಯಿಂದ ಜೋರಾಗಿ ಗಾಳಿ ಬೀಸಿ ಚಾಕ್ ಪೀಸುಗಳು ಮೇಜಿನ ಮೇಲಿಂದ ನೆಲಕ್ಕೆ ಬಿದ್ದವು. ಅವನ್ನು ಎತ್ತಿಕೊಳ್ಳಲು ಹೋದಾಗ ಮತ್ತದೇ ದೃಶ್ಯ. ಈ ಬಾರಿ ದಿನೇಸ, ಗುಳಗುಳನೆ ನಕ್ಕಿದ್ದ.

"ಯಾಕ್ಲೇ ದಿನೇಸ, ನಗ್ತಿದ್ದಿಯಾ" ಅಂತ ಕೇಳಿದ್ದಕ್ಕೆ ದಿನೇಸನದು ಅದೇ ದಿವ್ಯ ಮೌನ. "ಗೆಟೌಟ್, ಇನ್ನೊಂದು ತಿಂಗಳು ನೀನು ಕ್ಲಾಸಿನೊಳಗೆ ಬರಬೇಡ" ಎಂದು ಲವೀನಾ ಹೇಳುವುದು ಮುಗಿಸುತ್ತಿದ್ದಂತೆ ದಿನೇಸ ಜಾಗ ಖಾಲಿ ಮಾಡಿದ್ದ.

ಆ ಪೋಲಿ ಗಾಳಿಯದು ಅದೇನು ತುಂಟತನವಂತೀರಿ? ಮತ್ತೆ ಕಿಟಕಿಯಿಂದ ಗಾಳಿ ಬೀಸಿತ್ತು, ಮತ್ತದೇ ಸನ್ನಿವೇಶ ರಿಪೀಟಾಯಿತು. ಈ ಬಾರಿ ಕಂಟ್ರೋಲ್ ಇಲ್ಲದ ಹಾಗೆ ಗಹಗಹಿಸಿ ನಕ್ಕಿದ್ದು, ಯತೀಸ. ಆದರೆ, ಲವೀನಾ ಬಾಯಿಬಿಡುವ ಮೊದಲೇ ಯತೀಸ ಕ್ಲಾಸಿಂದ ಹೊರಗೆ ಕಾಲುಕಿತ್ತಿದ್ದ. ಆತನ ಕಾಲರ್ ಹಿಡಿದೆಳೆದ ಲವೀನಾ, ಯಾಕೋ ಓಡಿ ಹೋಗ್ತಿದ್ದಿಯಾ ಎಂದು ಅಬ್ಬರಿಸಿದಳು.

"ಏನು ಹೇಳ್ತೀರಿ ಮಿಸ್, ನನ್ನ ಶಾಲೆಯಿಂದ್ಲೇ ಡಿಸ್ ಮಿಸ್ ಮಾಡ್ತೀರಿ ಅಂತ ನಾನೇ ಹೊರಟೆ" ಅಂದವನ ಅಂಗಿ ಹಿಡಿದು ಕ್ಲಾಸೊಳಗೆ ಕೂಡಿಸಿದ್ದಳು ಮಿಸ್ ಲವೀನಾ. [ಸ್ಟುಡೆಂಟ್ ಟೀಚರ್ ಜೋಕ್ಸ್]

English summary
Teacher student jokes : Why students laughed at lovely teacher Laveena?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X