ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲವೀನಾಳ ಟೆನ್ಷನ್ ಕಡಿಮೆ ಮಾಡಿದ ಮಾಲೀಕ

|
Google Oneindia Kannada News

ಇಪ್ಪತ್ತೆರಡರ ಹರೆಯಕ್ಕೆ ಧುಮುಕಿ ಯೌವನದಿಂದ ಕಂಗೊಳಿಸುತ್ತಿದ್ದ ಲವೀನಾ ಸೇಲ್ಸ್ ಗರ್ಲ್ ಆಗಿ ಯತೀಶ್ ಮೆಡಿಕಲ್ ಶಾಪ್ ನಲ್ಲಿ ಕೆಲಸಕ್ಕೆ ಸೇರಿದ್ದಳು. ಒಂದು ದಿನ ಏನಾಯಿತೆಂದರೆ, ಯತೀಶನ ಸಂಬಂಧಿಯೊಬ್ಬರು ತೀರಿಕೊಂಡಿದ್ದರಿಂದ ಆತ ಪರ ಊರಿಗೆ ಹೋಗಬೇಕಾಗಿ ಬಂದಿತ್ತು ಮತ್ತು ಎಲ್ಲ ಜವಾಬ್ದಾರಿಯನ್ನು ಲವೀನಾಳ ಮೇಲೆ ಹೇರಿದ್ದ.

ಕಾಲೇಜು ಜೀವನದಲ್ಲಿ ಭಲೇ ಕಿಲಾಡಿ ಎಂದು ಹೆಸರು ಪಡೆದಿದ್ದ ಲವೀನಾ ಗಂಡಸರನ್ನು ಪಳಗಿಸುವುದನ್ನು ಒಂದು ಹಂತದವರೆಗೆ ಕರತಲಾಮಲಕ ಮಾಡಿಕೊಂಡಿದ್ದಳು. ಆದರೆ, ಔಷಧಿ ಮಾರಾಟದ ವಿಷಯದಲ್ಲಿ ಆಕೆ ಇನ್ನೂ ಪಳಗಬೇಕಾಗಿತ್ತು. ಮಾಲೀಕ ಊರಿಗೆ ಹೋಗುತ್ತಿದ್ದುದು ಆಕೆಗೆ ಭಾರೀ ತಲೆನೋವು ತಂದಿತ್ತು.

ಹೆಚ್ಚು ಅನುಭವವಿಲ್ಲದ ಲವೀನಾ ಇದರಿಂದ ಕಕ್ಕಾಬಿಕ್ಕಿಯಾಗಿದ್ದಳು. ಒಬ್ಬಳೇ ಹೇಗೆ ನಿಭಾಯಿಸಬೇಕೆಂದು ಚಟಪಡಿಸಹತ್ತಿದಳು. ಇದನ್ನು ತನ್ನ ಮಾಲಿಕ ಯತೀಶನ ಮುಂದೆ ಅರುಹಿಕೊಂಡಳು. ಕಾಂಡೋಮ್ ಮಾರುವುದಕ್ಕೆ ಆಕೆ ಮುಜುಗರ ಪಟ್ಟುಕೊಳ್ಳುತ್ತಿರಬಹುದು ಎಂದು ಆತ ಆಕೆಗೆ ಒಂದು ಐಡ್ಯಾ ಹೇಳಿದ.

ಅದೇನೆಂದರೆ, ಆಗಿಂದಾಗ್ಗೆ ಬರುವ ಗ್ರಾಹಕರು 410, 420, 430 ಎಂದು ಸೈಜನ್ನು ಹೇಳುತ್ತಾರೆ. ಹೀಗಾಗಿ ಏನೂ ತೊಂದರೆಯಾಗುವುದಿಲ್ಲ ಎಂದು ಹೇಳಿ ತನ್ನ ಊರಿಗೆ ಪಯಣ ಬೆಳೆಸಿದ್ದ. ಸೈಜು ಹೇಳಿದ್ದನೇ ಹೊರತು ಅದಾವುದೆಂದು ತೋರಿಸಿರಲಿಲ್ಲ. ಇನ್ನಷ್ಟು ಗೊಂದಲಕ್ಕೀಡಾದ ಲವೀನಾ ತನ್ನ ಕಾಲೇಜು ದಿನಗಳನ್ನು ನೆನೆಸಿಕೊಂಡು ತನ್ನದೇ ರೀತಿಯಲ್ಲಿ ಕಾಂಡೋಮ್ ಮಾರಾಟ ಮಾಡಬೇಕೆಂದು ನಿರ್ಧರಿಸಿದಳು.

ಎರಡು ದಿನ ಲವೀನಾಗೆ ಏನೂ ತೊಂದರೆಯಾಗಲಿಲ್ಲ. ಲವಲವಿಕೆಯಿಂದಲೇ ಮೂರು ಸೈಜಿನ ಕಾಂಡೋಮ್ಗಳನ್ನು ಮಾರಾಟ ಮಾಡಿದಳು. ಮೂರನೇ ದಿನ ಮತ್ತೋರ್ವ ಅಂಗಡಿಗೆ ಬಂದ. ಆತ, ತನಗೆ 450 ನೀಡಬೇಕೆಂದು ಕೇಳಿದ. ಲವೀನಾ ಗರಬಡಿದವಳಂತಾಗಿಬಿಟ್ಟಳು. ಕೂಡಲೆ ಯತೀಶನಿಗೆ ಲವೀನಾ ಫೋನಾಯಿಸಿದಳು.

ಆತ, ಬಂದವ ಕೈಯಲ್ಲಿ ಬಕೆಟ್ ಹಿಡಿದಿದ್ದಾನೆಯೆ ಎಂದು ಕೇಳಿದ. ಈಕೆ, ಬಗ್ಗಿ ನೋಡಿ, ಹೌದು ಒಂದು ಹಸಿರು ಬಣ್ಣದ ಬಕೆಟ್ ಕೈಯಲ್ಲಿ ಹಿಡಿದ್ದಾನೆ ಎಂದು ಬೆವರುತ್ತಲೇ ಹೇಳಿದಳು.

ಆತ, ಐಸೀ, ಆತನಿಗೆ 450 ರು. ಕೊಟ್ಟು ಕಳಿಸು. ಅವನು ಬಣ್ಣ ಬಳಿಯುವವ ಎಂದು ಹೇಳಿ ಲವೀನಾಳ ಟೆನ್ಷನ್ ಕಡಿಮೆ ಮಾಡಿದ್ದ.

English summary
Joke for the day : Medical shop sales girl Laveena in dilemma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X