ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿತಾ ವಿನುತಾ ಸರಿತಾ ಬೇಕಿತ್ತಾ!

By Prasad
|
Google Oneindia Kannada News

Kannada jokes for the day
ಗುಂಡನಿಗೆ ಮೂರು ಜನ ಹೆಣ್ಣು ಮಕ್ಕಳು. ಅವರ ಹೆಸರು ಕವಿತಾ, ವಿನುತಾ ಮತ್ತು ಸರಿತಾ. ಗಂಡು ಮಗುವಿಗಾಗಿ ಆಸೆಪಟ್ಟಿದ್ದರು ಗುಂಡ ಗುಂಡಿಯರಿಬ್ಬರು. ದಂಪತಿಗಳಿಗೆ ನಾಲ್ಕನೇ ಬಾರಿಯೂ ಹೆಣ್ಣು ಮಗುವಾಯಿತು. ಇದರಿಂದ ತುಂಬಾ ಸಿಟ್ಟುಗೊಂಡ ಗುಂಡ ನಾಲ್ಕನೇ ಹೆಣ್ಣು ಮಗುವಿಗೆ 'ಬೇಕಿತ್ತಾ' ಎಂದು ಹೆಸರಿಟ್ಟ.

***
ತುಂಬಾ ಹಸಿದಿದ್ದ ಗುಂಡ ಹೋಟೆಲ್ ಗೆ ಹೋಗಿ ಪಿಜ್ಜಾ ಆರ್ಡರ್ ಮಾಡಿದ. ಬಿಸಿಬಿಸಿ ಪಿಜ್ಜಾ ತೆಗೆದುಕೊಂಡು ಬಂದ ಮಾಣಿ.
ಮಾಣಿ : ಸಾರ್, ಇದನ್ನು ಎಷ್ಟು ಪೀಸ್ ಕಟ್ ಮಾಡ್ಲೀ.. ಆರು ಪೀಸ್ ಮಾಡ್ಲಾ.. ಹನ್ನೆರಡು ಮಾಡ್ಲಾ?
ಗುಂಡ : ಆರು ಪೀಸ್ ಮಾಡಪ್ಪಾ. ಹನ್ನೆರಡು ಪೀಸ್ ನಂಗೆ ತಿನ್ನೋಕ್ಕಾಗಲ್ಲಾ!

***
ಗುಂಡ ಮಗ ಪುಂಡನಿಗೆ ಬೆಂಕಿ ಪೆಟ್ಟಿಗೆ ತರಲು ಹೇಳುತ್ತಾನೆ. ಕಡ್ಡಿ ಹಚ್ಚಿದಾಗ ಒಂದು ಹತ್ತುತ್ತಿರಲಿಲ್ಲ.
ಗುಂಡ : ಥೂ. ಎಂಥಾ ಬೆಂಕಿ ಪೆಟ್ಟಿಗೆ ತಂದಿದ್ದೀಯಾ? ಒಂದು ಹತ್ತುತ್ತಿಲ್ಲಾ.
ಪುಂಡ : ಸುಮ್ನಿರಪ್ಪಾ. ಅಂಗಡಿಯಲ್ಲಿ ಎಲ್ಲಾ ಕಡ್ಡಿಯನ್ನು ಟೆಸ್ಟ್ ಮಾಡಿಯೇ ತೆಗೆದುಕೊಂಡು ಬಂದಿರೋದು!

***
ಗುಂಡ ಓಡೋಡಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ. ಸಾರ್ ಸಾರ್ ನಮ್ಮ ಮನೇಲಿ ಎಲ್ಲಾ ವಸ್ತುಗಳು ಕಳ್ಳತನವಾಗಿದೆ, ಟಿವಿ ಒಂದನ್ನು ಬಿಟ್ಟು. ಪೊಲೀಸಪ್ಪನಿಗೆ ಆಶ್ಚರ್ಯವೋ ಆಶ್ಚರ್ಯ.
ಪೋಲಿಸ್ : ಆ ಮಹಾನ್ ಕಳ್ಳ ಟಿವಿ ಒಂದನ್ನು ಯಾಕೆ ಬಿಟ್ಟ?
ಗುಂಡ : ನಾನು ಟಿವಿ ನೋಡುತ್ತಿದ್ದೆ ಸಾರ್!

English summary
Kannada jokes for the day. Read and enjoy rib tickling joke and have a wonderful day ahead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X