ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರೆಗುಳಿ ಸುಬ್ಬು ತನ್ನ ಬಾಸ್‌ಗೆ ಮರುದಿನ ಫೊನ್ ಮಾಡಿದ್ದು ಏಕೆ?

By Staff
|
Google Oneindia Kannada News

ಮರುಗುಳಿ ಸುಬ್ಬ ಬೆಳಗಿನ ಜಾವ ಇನ್ನೇನು ಸ್ನಾನಕ್ಕೆ ಹೋಗಬೇಕು ಆಗ ನೆನಪಾಯಿತು. ಎಂಥಾ ಅಚಾತುರ್ಯ ನಡೆದುಹೋಯಿತು ಅಂತ ದಡಬಡಿಸಿ, ಟವಲ್ಲನ್ನು ಅಲ್ಲೇ ಎಸೆದು ತನ್ನ ಬಾಸ್‌ಗೆ ಫೋನಾಯಿಸಿದ.

"ಸಾರ್ ದಯವಿಟ್ಟು ಕ್ಷಮಿಸಿ. ನಿನ್ನೆ ನಿಮಗೊಂದು ವಿಷಯ ಹೇಳಬೇಕೆಂದುಕೊಂಡಿದ್ದೆ ಮರೆತೇಬಿಟ್ಟೆ" ಅಂತ ಗಾಬರಿಯ ಧ್ವನಿಯಲ್ಲಿ ಹೇಳಿದ.

ಸುಬ್ಬ ಮಹಾನ್ ಮರೆಗುಳಿ ಅಂತ ತಿಳಿದಿದ್ದ ಬಾಸ್, "ಪರವಾಗಿಲ್ಲ ಹೇಳಿ ಸುಬ್ಬು, ಏನು ತೊಂದರೆಯಿಲ್ಲ" ಅಂತ ಹೇಳಿದರು.

"ನೀವು ಮದ್ಯಾಹ್ನ ಊಟವಾದ ಮೇಲೆ ಟಾಯ್ಲೆಟ್‌ಗೆ ಹೋಗಿ ಬಂದಿರಲ್ಲ ಆವಾಗಲೇ ಹೇಳೋಣ ಅಂದ್ಕೊಂಡೆ, ಹಾಳಾದ್ದು ಮರೆವು. ಸಾರ್... ಈಗ ಹೇಳ್ತಿದ್ದೀನಂತ ಬೇಜಾರು ಮಾಡಿಕೋಬೇಡಿ" ಅಂತ ಭಿನ್ನವಿಸಿಕೊಂಡ.

ಬಾಸ್‌ಗೆ ನಗುವೋ ನಗು. "ಏನು ಹೇಳ್ಬೇಕನ್ಕೊಂಡಿದ್ರೋ ಹೇಳಿ" ಅಂದರು.

"ಸಾರ್ ನೀವು ಟಾಯ್ಲೆಟ್‌ಗೆ ಹೋಗಿ ಬಂದ್ರಲ್ಲ ಪ್ಯಾಂಟಿನ ಜಿಪ್ ಹಾಕುವುದನ್ನೇ ಮರೆತಿದ್ದಿರಿ. ಸಾಯಂಕಾಲ ನೋಡಿದಾಗಲೂ ಹಾಗೇ ಇತ್ತು, ಆವಾಗ್ಲೂ ಮರೆತುಬಿಟ್ಟೆ. ದಯವಿಟ್ಟು ಕ್ಷಮಿಸಿ ಸಾರ್..." ಅಂದ ಹೆದರಿಕೆಯ ಧ್ವನಿಯಲ್ಲಿ.

ಫೋನಿನಲ್ಲಿ ಧಬಾರ್ ಅಂತ ಏನೋ ಬಿದ್ದ ಸದ್ದಾಯಿತು!

*

ಪುಟಾಣಿ ಪುಟ್ಟಿ ಶಾಲೆಯಿಂದ ಬಂದದ್ದೇ ನಿನ್ನ ನಾಲಿಗೆ ತೆಗೆಯಮ್ಮಾ, ನಾಲಿಗೆ ತೆಗೆಯಮ್ಮ ಅಂತ ಒಂದೇ ಸವನೆ ಕಾಡಹತ್ತಿದಳು.

ಯಾಕೆ ಏನಾಯ್ತು ಹೇಳು ಅಂದಳು ಅಮ್ಮ.ಮೊದಲು ತೆಗಿ ನಂತರ ಹೇಳ್ತೀನಿ ಅಂದಳು ಪುಟ್ಟಿ.ಅಮ್ಮ ನಾಲಿಗೆ ತೆಗೆದು ತೋರಿಸಿ, ಯಾಕೆ ಪುಟ್ಟಿ ಏನಾಗಿದೆ ನನ್ನ ನಾಲಿಗೆಗೆ ಅಂದಳು.

ಏನಿಲ್ಲಮ್ಮ, ಇವತ್ತು ನಮ್ಮ ಮಿಸ್ಸು ನಿನ್ನ ಮದರ್ ಟಂಗ್ ಯಾವ್ದೆಂದು ಕೇಳಿದರು. ಅದಕ್ಕೇ ನಾಲಿಗೆ ತೆಗೆಯೆಂದು ಹೇಳಿದೆ ಅಂದಳು.

(ಜೋಕ್ ಕತ್ತರಿಸಿದ್ದು : ಯಶ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X