ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳ ದಿನ: ಒನ್ ಲೈನ್ ಕನವರಿಕೆಗಳು

By * ಮಲೆನಾಡಿಗ
|
Google Oneindia Kannada News

Valentine's Day , Kannada messages
ಪ್ರೇಮಿಗಳ ಸುಪ್ತ ಹೃದಯದಲ್ಲಿ ಬೆಚ್ಚಗೆ ಕುಳಿತ ಪ್ರೇಮ ಹಕ್ಕಿಗಳು ಇಂದು ಗರಿಗೆದರಿ ಹಾಡಿ ನಲಿಯಲು ಮುಕ್ತವಾದ ದಿನ. ಪ್ರೇಮಿಗಳಿಗೆ ಒಂದೇ ಒಂದು ದಿನ ಸಾಕು ಎಂದು ಮೀಸಲಿಡುವುದು ಯಾಕೋ ಸರಿ ಎನಿಸುವುದಿಲ್ಲ. ಏಕೆಂದರೆ ಪ್ರೇಮ ನಿರಂತರ. ಆದಿ ಅಂತ್ಯ ಇಲ್ಲವಿಲ್ಲದ ಅವಿರತವಾಗಿ ಭಾವನೆಗಳ ಜೊತೆಗಿನ ಆಟವೇ ಪ್ರೀತಿ ಪ್ರೇಮ. ಒಲವಿನ ಹಾದಿಯಲ್ಲಿ ಸಾಗುವ ಉತ್ಸಾಹಿಗಳಿಗೆ ಎಲ್ಲವೂ ಸತ್ಯ ಸುಂದರ, ನಿತ್ಯ ನೂತನ. ಪ್ರೇಮಿಗಳ ಹುಚ್ಚು ಮನಸ್ಸು ಎಚ್ಚರವಿಲ್ಲದೆಯೇ ಪ್ರೀತಿಯ ಪ್ರವಾಹದಲಿ ಕೊಚ್ಚಿಹೋಗದೆ ಒಲವೇ ಜೀವನ ಸಾಕ್ಷತ್ಕಾರ ಪಡೆಯಲಿ. ಪ್ರೇಮಿಗಳ ದಿನದ ಅಂಗವಾಗಿ ನಾಲ್ಕಾರು ಹಿತವಾದ ಸಾಲುಗಳು ನಿಜ ಪ್ರೇಮಿಗಳಿಗೆ. ...

* ತಂಗಾಳಿಯ ಪಿಸುಮಾತಿಗೆ ಮೈಮನ ಪುಳಕ, ಸಂತಸದ ಕ್ಷಣಕ್ಕೆ ಪ್ರೀತಿಯೇ ಪೂರಕ
* ಭಾವನೆಗಳ ಮೋಡಗಳು ಘರ್ಷಿಸಿದಾಗ ಕವಿ ಹೃದಯದಿ ಕಂಪನ, ಕಂಗಳಲ್ಲಿ ಪ್ರತಿಫಲನ
* ಏಕಾಂತದಿ ನಿನ್ನ ಧ್ಯಾನ, ಎದುರಾದರೆ ಮನಸಲ್ಲಿ ನೂರೆಂಟು ಸವಿಗಾನ, ಪ್ರೀತಿಲಿ ಹೀಗೇನಾ
* ಪ್ರೇಮ ನಿವೇದನೆಗೆ ಮಾತಿ ಹಂಗೇಕೆ, ಹೃದಯದ ಮೇಲೆ ಕೈಯಿರಿಸಿ ಕಂಗಳಲ್ಲೇ ಹೇಳಿಬಿಡು
* ಜೊತೆಯಿರುವಾಗ ನಿನ್ನ ಸಖ, ಕಾಣು ನೀ ಸ್ವರ್ಗಸುಖ, ಪ್ರೀತಿಯಲ್ಲಿರಲಿ ನಂಬಿಕೆ ಕೊನೆತನಕ
* ಪ್ರೀತಿಯ ಮಾಡದೆ, ಕನಸಾ ಕಾಣದೆ, ಸಂತಸವ ಹಂಚದವ ನಂದನವನದಿ ಕಳೆಯಿದ್ದಂತೆ.
* ಜೀವನದ ಕೊನೆ ಕ್ಷಣದಲ್ಲೂ ನಿನ್ನದೇ ಕನವರಿಕೆ, ಯಾಕೆ ಆಗಿಲ್ಲ ನಿನಗಿನ್ನೂ ಮನವರಿಕೆ

ಪ್ರೀತಿಪಾತ್ರರಿಗೆ ವ್ಯಾಲೆಂಟೈನ್ ಡೇ ಗಿಫ್ಟ್ ಕಳಿಸಿ

* ಕದ್ದುಮುಚ್ಚಿ ಪ್ರೀತಿ ಮಾಡಿ, ಸಂಗಮಿಸಿ, ಕಣ್ಣು ಒದ್ದೆಯಾಗಿ ಕಾರಣ ಹುಡುಕೋ ಮೊದಲು ನನ್ನನುಳಿಸು
* ಕೋಟಿ ತಾರೆಗಳು ಬೆಳಗುತ್ತಿದ್ದರೂ, ಚಂದ್ರಮುಖಿ ನಿನ್ನಕಾಣದೆ ನನ್ನ ಕಂಗಳು ಮಂಕಾಗಿ ಹೋಯ್ತು
* ಮುಖವೆಂಬ ಕನ್ನಡಿಯಲ್ಲಿ ಹುದುಗಿಸಿದ ಆ ನಗು, ಮನಸ ಅನುಮತಿಯಿಲ್ಲದೆ ಹೊರಬಂತು
* ಪ್ರೀತಿಯ ಮಾಯೆಯಲ್ಲಿ ಬಂಧಿಯಾದರೂ, ಜಗತ್ತಿನ ಜಂಜಾಟದಿಂದ ಮುಕ್ತ ನಾನು.
* ಕಣ್ಣಂಚಿನ ನೋಟವ ಮನಸಾರೆ ನೋಡಿಬಿಡು. ರೆಪ್ಪೆ ಮುಚ್ಚಿದ ಮೇಲೆ ಆ ಭಾವ ಮರೆಯಾದೀತು.
* ನಿನ್ನ ಪ್ರೀತಿಯಲ್ಲಿ ನಾ ಗಳಿಸಿದ್ದೇನು. ಹೃದಯ ಕೊಟ್ಟೆ ವಿರಹ ಪಡೆದೆ. ನೆನಪು ಪಡೆದು ಮರೆತು ಬಿಟ್ಟೆ
* ಕೋಲ್ಮಿಂಚಿನಂತಹ ನಿನ್ನ ನೋಟವ ಬಣ್ಣಿಸ ಹೊರಟ ನಾನು ಬಾಯಿ ತೆರೆದು ಮೂಕನಾಗಿ ಹೋದೆ.
* ಎಲ್ಲಾ ಕನಸಾ ನನಸು ಮಾಡೋ ಪ್ರೀತಿ. ಜೀವನಾನ ಹಸನು ಮಾಡೋ ಪ್ರೀತಿ. ಹಲವು ರೂಪ ಏಕ ರೀತಿ
* ತಂಗಾಳಿ ಬೀಸಲು ಮಳೆಯೇ ಬರಬೇಕಿಲ್ಲ. ನನ್ನ ಪ್ರೀತಿಯ ಗಂಧ ನಿನ್ನ ತಲುಪಲು ನನ್ನುಸಿರು ಬಿಟ್ಟು ಬೇರೆ ಬೇಕಿಲ್ಲ
* ಪ್ರತಿ ಕ್ಷಣ ಬದಲಾಗೋ ಈ ಭೂಮಿಯಲ್ಲಿ ಎಂದಿಗೂ ಬದಲಾಗದೇ ಉಳಿಯುವುದೇ ನನ್ನ ಪ್ರೀತಿ
* ತನುಮನದಲ್ಲಿ ಒಂದಾಗಿ ಬೆರೆತ ನಿನ್ನ ಹೇಗೆ ಮರೆಯಲಿ ಚಿನ್ನ. ಹಾಕಿರುವೆ ಹೃದಯಕ್ಕೆ ನೀ ಕನ್ನ

ಪ್ರೇಮಿಗಳ ವಿಹಾರಕ್ಕಾಗಿ ನಮ್ಮ ಸಲಹೆ

* ಕಡಲ ಕಿನಾರೆಯ ಉಸುಕಿನ ಹಾದಿಯಲಿ ಮೂಡಿದ ಹೆಜ್ಜೆ ಗುರುತಿನಲ್ಲಿ ನಿನ್ನವೆಷ್ಟು ನನ್ನವೆಷ್ಟು
* ನಿನ್ನ ಕಂಗಳಲ್ಲಿ ತುಂಬಿದ ಹನಿಯು ಹರಿಯುವ ಮುನ್ನ ನನ್ನೊಡಲ ಸೇರಿಕೋ ಬಾ ಚಿನ್ನ
* ನನ್ನ ನಾ ಮರೆತು ನಿನ್ನೊಡನೆ ಬೆರೆತು ಅತಿಮಧುರ ಈ ಅನುರಾಗ ಎನ್ನುವಾಗ ಹೊತ್ತು ಮೀರಿತ್ತು
* ತಾರೆಯರೊಡನೆ ಮಾತಾಡಲು ಕಲಿಸಿಕೊಟ್ಟೆ. ಆದ್ರೆ ನಿನಗೆ ಪ್ರೇಮ ನಿವೇದನೆ ಮಾಡುವುದಾ ಮರೆಸಿಬಿಟ್ಟೆ
* ಯಾರು ಕೂಗಿ ಕೇಳಿದರೂ ಹೇಳುವೇ ನೀ ಇರುವುದೇ ನನಗಾಗಿ ಪ್ರೀತಿ ಇರದ ಜಗ ಇರುವುದು ಏತಕ್ಕಾಗಿ
* ಮೊದಲ ಸ್ಪರ್ಶದ ಪುಳಕ ಮುಂಗಾರು ಮಳೆಯ ಜಳಕ ಇರಲಿ ಸದಾ ಪ್ರೇಮಿ ನೀ ಇರುವ ತನಕ
* ಕವಿಯಲ್ಲ ನಾ ನಿನ್ನ ಸದಾ ಹೊಗಳಲು. ಎಂದೂ ಮುಗಿಯದ ಪ್ರೀತಿಯಿದೆ ಅರಿತಿಕೋ ಮನಸೊಲು
* ಆಷಾಢದ ಗಾಳಿಗೆ ಸಿಕ್ಕ ನಿನ್ನ ಮುಂಗುರಳ ನೃತ್ಯ ಅಹಾ! ಖಂಡಿತವಾಗಿಯೂ ಅದು ರಸಿಕ ವಾಯುವಿನದೇ ಕೃತ್ಯ
* ಚುಂಬನದ ಸವಿಗಿಂತ ಅಂಬರದ ಬೆಳ್ಮುಗಿಲಿಗಿಂತ ನವಿಲಿನ ನೃತ್ಯಕ್ಕಿಂತ ಚೆಂದ ನನ್ನ ಪ್ರೀತಿ

ಸ್ವಲ್ಪ ವಿರಹ, ಹೆಚ್ಚು ಪ್ರೀತಿ:
* ದೂರಾಗು ಮತ್ತೆ ಕಾಡದಿರು ಬೆಳದಿಂಗಳಿನಲ್ಲಿ ಒಂಟಿತನವ ಅಣುಕಿಸದಿರು ಪ್ರೀತಿಗೆ ಬೆಲೆಯುಂಟು
* ನೀ ದೂರಾದರೆ ಕಾಡುತ್ತೆ ನಿನ್ನ ಪ್ರೀತಿಯ ಅಭಾವ. ಪ್ರೀತಿಸುವುದು ನಿನ್ನ ಸ್ವಭಾವ
* ಪ್ರೀತಿ ಮಾಡುವುದು ಸುಲಭ ಆದರೆ ಅದೇ ಪ್ರೀತಿ ಪಡೆಯುವುದು ದುರ್ಲಭ
* ಹೇಗೆ ಹೇಳಲಿ ನೀ ಸಿಗಲಿಲ್ಲವೆಂದು. ಪ್ರತಿದಿನ ನನ್ನ ಕಣ್ಣು ನಿನ್ನ ಸಂಧಿಸಿದರೂ ಮಾತಿಗೆ ಬರ ಬಂದಿತೆಂದು
* ಅದೃಷ್ಟವ ಹಳಿಯದೆ ನಿನ್ನಿಷ್ಟದ ಹಾದಿಯ ನೀ ತುಳಿ. ನಿನಗೆ ಕಷ್ಟವಾದಾಗ ನನ್ನ ನೆನೆ
* ಮರೆತವರನ್ನು ನೆನೆದು ಕೊರಗಬೇಡ. ನಿನ್ನ ಪ್ರೀತಿಯ ಅರಿಯದವರ ಬಗ್ಗೆ ಮರುಕಬೇಡ
* ಕಣ್ಣಿನ ಚಂಚಲತೆ ಮನಸ್ಸಿಗೆ ಬರದಿರಲಿ. ಹೃದಯದಿ ಮೂಡಿರುವ ಚಿತ್ರ ಮರೆಯಾಗದಿರಲಿ
* ನೀರಿಕ್ಷೆಯಿಲ್ಲ...ನೀ ಬರುವೆಯೆಂದು, ನನಗರಿವಿದೆ ನನ್ನೊಡಲಲ್ಲೇ ನೀ ಇರುವಾಗ ಬೇರೆಡೆ ಸಿಗುವುದಿಲ್ಲವೆಂದು
* ಪ್ರೇಮಿ ಜೊತೆಯಿರುವಾಗ ಸಮಯ ಸಾಲದು, ವಿರಹದಿ ಸುರಿವ ಕಂಬನಿಗೆ ಕಡಲು ಸಾಲದು.

English summary
Valentine's Day 2011, Kannada Love Shayaris, short messages, oneliners and romantic messages in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X