ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನೇ ಆಗ್ಲಿ ಈ ವರ್ಷ ಎಂಕಾಂ ಮಾಡ್ಲೇಬೇಕು

By * ಪ್ರಸನ್ನ ಕುಮಾರ್
|
Google Oneindia Kannada News

My dream is to do MCom
ಬುದ್ದಿ ಬರುವ ಮುನ್ನ ಪಿತೃವಿಯೋಗ, ಬುದ್ದಿ ಬಂದ ನಂತರ ಕೆಲವೊಂದಕ್ಕೆ ವಿಯೋಗ. ಜೀವನ ಎನ್ನುವ ಪಯಣದ ಪ್ರತಿ ಸ್ಟೇಶನ್ ದಾಟಿದಾಗಲೂ ನಿರಾಳದ ನಿಟ್ಟುಸಿರು. ಯಾವ ದೋಣಿಯಲ್ಲಿ ಕಾಲಿಡಬೇಕೆನ್ನುವ ಚಂಚಲ ಮನಸಿನಲ್ಲೇ ಗೃಹಸ್ಥಾಶ್ರಮಕ್ಕೆ ಸೇರಿದ್ದಾಯಿತು. ಪ್ರಯತ್ನ ನಮ್ಮದು ಫಲಿತಾಂಶ ದೇವರದ್ದು ಎನ್ನುವ orthodox ಕುಟುಂಬದವನು, ನನಗೆ ಒಬ್ಬಳು ಹೆಣ್ಣು ಮಗಳು.

ಪ್ರತಿ ಯುಗಾದಿಗೆ ನಿರ್ದಿಷ್ಟ ಗುರಿ ಇಟ್ಟುಕೊಂಡು ಜೀವನ ನಡೆಸುವ ಪಕ್ಕಾ planned ಪಂಗಡಕ್ಕೆ ಸೇರಿದವನು ನಾನಲ್ಲ. ಆದರೆ ಈ ಯುಗಾದಿಗೆ ಒಂದು resolution ತೆಗೆದುಕೊಂಡು ಅದನ್ನು ಮುಂದಿನ ಯುಗಾದಿಯ ಒಳಗೆ ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಇಡಬೇಕೆನ್ನುವುದು ನನ್ನ ಸದ್ಯದ ಈಗಿನ ಮನಸ್ಥಿತಿ.

ಜೀವನದಲ್ಲಿ ಮೊದಲಬಾರಿಗೆ ಒಂದು ನಿರ್ದಿಷ್ಟ ಟಾರ್ಗೆಟ್ ಇಟ್ಟುಕೊಂಡವನು. ಹಾಗಾಗಿ ನನ್ನ ಪ್ರಯತ್ನದಲ್ಲಿ ತಕ್ಕ ಮಟ್ಟಿನ ಯಶಸ್ಸು ಹೊಂದುತ್ತೇನೆ ಎನ್ನುವ ಅಪಾರ ನಂಬಿಕೆಯಲ್ಲಿದ್ದೇನೆ. ನಾನು ಬಿಕಾಂ ಪಧವೀಧರ. ನನ್ನ ಈ ವರ್ಷದ resolution ಏನೆಂದರೆ ಎಂಕಾಂ ಮಾಡಬೇಕು. ಅಲ್ಲದೆ ಪತ್ರಿಕೋದ್ಯಮದಲ್ಲಿ ಕೂಡಾ ಕೋರ್ಸ್ ಮಾಡಬೇಕೆಂದು ಇದ್ದೇನೆ.

ನಲವತ್ತು ವರ್ಷವಾಯಿತು ಯಾಕಪ್ಪ ಹೈಯರ್ education ಎನ್ನುವ ಹಿತಶತ್ರುಗಳಿಗೆ ನನ್ನಲ್ಲಿ ಏನೂ ಕೊರತೆ ಇಲ್ಲ. ಆದರೆ ವಿದ್ಯೆಗೆ ವಯಸ್ಸಿನ ಕಟ್ಟುಪಾಡು ಸರಿಯಲ್ಲ ಎಂದು ಒಂದು ಹೆಜ್ಜೆ ಮುಂದೆ ಇಟ್ಟೇ ಬಿಡೋಣ ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದೇನೆ. ಪತ್ರಿಕೋದ್ಯಮದಲ್ಲಿ ಯಾವ ಕೋರ್ಸ್ ಮಾಡಿದರೆ ಒಳ್ಳೇದು ಎಂದು, ಅಂತರ್ಜಾಲದಲ್ಲಿ ಕನ್ನಡವನ್ನು ಯಾವ ರೀತಿಯಲ್ಲಿ ಪೋಣಿಸಬೇಕು ಎಂದು ಪ್ರತಿದಿನ ನನಗೆ ತಿದ್ದಿಬುದ್ದಿ ಹೇಳುತ್ತಿರುವ ಶಾಮ ಸುಂದರ ಅವರ ಬಳಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕೂಂತ ಇದ್ದೀನಿ.

ಶ್ರೀನಂದನ ಸಂವತ್ಸರದಲ್ಲಿ ನಾನು ನಂಬಿದ ಕುಲದೇವರು, ಗ್ರಾಮದೇವರು, ಶ್ರೀವಾದಿರಾಜ ಗುರುಗಳು ನನ್ನ ಇಷ್ತಾರ್ಥವನ್ನು ಸಿದ್ದಿಸುತ್ತಾರೆ ಎನ್ನುವ ನಂಬಿಕೆಯೊಂದಿಗೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. [ನಿಮ್ಮ ಕನಸುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ]

English summary
Ugadi and my dream. Though I am now 40+ my life has never been a planned one. I never wished it to be so. But, this Ugadi I have decided to pursue M.Com and a course in journalism. Hope, with blessing of Sri Vadiraja my dreams will come true.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X