ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಂಗಳದಲ್ಲಿ ಹಬ್ಬದ ರಂಗವಲ್ಲಿ ಅರಳಲಿ

|
Google Oneindia Kannada News

Rangoli decoration for festivals
ಗಣೇಶ ಗೌರಿ ಹಬ್ಬಕ್ಕೆ ಎಲ್ಲೆಲ್ಲಿಯೂ ಸಿದ್ಧತೆ ಜೋರಾಗಿಯೇ ನಡೆದಿದೆ. ಆದರೆ ಅಲಂಕಾರಕ್ಕೆ ಮುಖ್ಯವಾಗಿ ಬೇಕಾಗಿರುವ ರಂಗೋಲಿ ಬಗ್ಗೆನೇ ಯಾರೂ ಯೋಚಿಸಿರೋದಿಲ್ಲ. ಮನೆಗೆ ಬರುತ್ತಿದ್ದಂತೆ ಹಬ್ಬದ ಕಳೆ ಜೋರಾಗಿ ಕಾಣಬೇಕೆಂದರೆ ರಂಗೋಲಿಯೂ ಜೋರಾಗಿಯೇ ಇರಬೇಕು.

ಹಬ್ಬದ ದಿನ ಮನೆ ಒಳಗೆ ಮತ್ತು ಹೊರಗೆ ರಂಗೋಲಿಯ ಮೋಡಿ ಎಲ್ಲರನ್ನೂ ಕಣ್ಣರಳಿಸುವಂತೆ ಮಾಡಬೇಕು. ಆದರೆ ಅಲಂಕಾರಕ್ಕೆಂದು ರಾಸಾಯನಿಕ ಬಣ್ಣ ಬಳಸದೆ ಪರಿಸರ ಸ್ನೇಹಿ ವಿಧಾನದಿಂದ ರಂಗೋಲಿ ಅಲಂಕಾರ ಮಾಡಬಹುದು.

ರಂಗೋಲಿ ಅಲಂಕಾರ ಮಾಡುವ ಬಗೆ:

1. ಹೂವಿನ ರಂಗೋಲಿ: ಹೂವಿನ ದಳಗಳು, ಅದರಲ್ಲೂ ಹಳದಿ ಸೇವಂತಿಗೆ ಹೂವು ಮತ್ತು ಗುಲಾಬಿ ದಳಗಳು ರಂಗೋಲಿ ಅಲಂಕಾರಕ್ಕೆ ಚೆಂದ. ರಂಗೋಲಿಯ ಒಳಗೆ ಮಾತ್ರವಲ್ಲದೆ, ಅದನ್ನು ಹೊರಗಿನ ಗೆರೆಯ ಸುತ್ತಲೂ ಅಲಂಕರಿಸಬಹುದು. ರಂಗೋಲಿಯ ಒಳಗೆ ಖಾಲಿ ಜಾಗ ಬಿಡದೆ ವಿವಿಧ ಹೂವಿನ ದಳಗಳಿಂದ ತುಂಬಿಸಿದರೆ ರಂಗೋಲಿಗೆ ಇನ್ನಷ್ಟು ಮೆರುಗು. ರಂಗೋಲಿಯಲ್ಲಿ ಸುವಾಸನೆ ಕೂಡ ಬರಬೇಕು ಎಂದಾದರೆ ವಾಟರ್ ಸೆಂಟ್ ಕೂಡ ಬಳಸಬಹುದು.

2. ಹಣತೆ ರಂಗೋಲಿ: ಹಣತೆ ಮತ್ತು ಪುಟ್ಟ ಪುಟ್ಟ ದೀಪಗಳೂ ಸಹ ರಂಗೋಲಿಗೆ ಒಳ್ಳೆ ಅಲಂಕಾರ. ರಂಗೋಲಿಯ ಮಧ್ಯ, ರಂಗೋಲಿಯ ಹೊರಗೆ ಮತ್ತು ಒಳಗೆ ಎಲ್ಲೆಡೆಯೂ ದೀಪಗಳನ್ನು ಇಡಬಹುದು. ಆದರೆ ಎಣ್ಣೆ ಚೆಲ್ಲದಂತೆ ಜಾಗ್ರತೆ ವಹಿಸಬೇಕು. ಸುವಾಸನೆ ಭರಿತ ದೀಪ ಅಥವಾ ಕ್ಯಾಂಡಲ್ ಗಳೂ ಅಲಂಕಾರಕ್ಕೆ ಬಳಸಬಹುದು. ಕತ್ತಲಿನಲ್ಲಿ ಈ ರಂಗೋಲಿಯ ಅಂದ ದುಪ್ಪಟ್ಟಾಗುತ್ತದೆ.

3. ಡಿಸೈನ್ ಮಣಿಗಳು ಅಥವಾ ಬಟನ್ ಗಳು: ಹಬ್ಬದ ರಂಗೋಲಿ ಅಲಂಕಾರಕ್ಕೆ ಮಣಿಗಳು ಅಥವಾ ಡಿಸೈನ್ ಬಟನ್ ಗಳನ್ನೂ ಬಳಸಬಹುದು. ಸೀರೆಗಳಿಗೆ ಅಲಂಕಾರ ಮಾಡುವ ಡಿಸೈನ್ ಬಟನ್ ಗಳು ಎಲ್ಲ ಬ್ಯಾಂಗಲ್ ಸ್ಟೋರ್ ಗಳಲ್ಲೂ ಲಭ್ಯವಿದೆ. ಅವುಗಳನ್ನು ಬಳಸಿಕೊಂಡು ರಂಗೋಲಿಗೆ ಡಿಫರೆಂಟ್ ಲುಕ್ ಕೊಡಬಹುದು. ಆದರೆ ಮಣಿಗಳು ಹರಡಿಕೊಳ್ಳದಂತಿರಲಿ. ಹಬ್ಬ ಮುಗಿದ ನಂತರ ಮತ್ತೆ ಎತ್ತಿಟ್ಟುಕೊಂಡು ಮುಂದಿನ ಬಾರಿ ಬಳಸಬಹುದು.

4. ಆಹಾರ ಧಾನ್ಯಗಳ ಮೆರುಗು: ಧಾನ್ಯಗಳನ್ನೂ ಸಹ ರಂಗೋಲಿ ಒಳಗೆ ಅಲಂಕಾರಕ್ಕೆಂದು ತುಂಬಬಹುದು. ಅಕ್ಕಿ, ರಾಗಿ, ಬೇಳೆ, ಗೋಧಿ ಮುಂತಾದುವು ರಂಗೋಲಿಯ ಚೆಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಯಾವಾಗಲೂ ಬಣ್ಣ ಬಣ್ಣದ ರಂಗೋಲಿ ನೋಡಿದ್ದವರಿಗೆ ಈ ರೀತಿಯ ರಂಗೋಲಿಗಳು ಕಣ್ಣಿಗೆ ಹಬ್ಬದಂತೆ ಗೋಚರಿಸುತ್ತದೆ.

English summary
If you are planning to celebrate this ganesh chaturthi the most Eco-friendly way then why plan to use chemical colors for rangoli decoration, there are many alternatives that are natural. Take a look to know what type rangoli design alternatives that can be used for the festive decor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X