ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಗಿಗುಡ್ಡ ಹನುಮಜಯಂತಿ ಉತ್ಸವಕ್ಕೆ ಸ್ವಾಗತ

By Mahesh
|
Google Oneindia Kannada News

Ragigudda Lord Anjaneya
ಬೆಂಗಳೂರು ಜಯನಗರ 9ನೇ ಬ್ಲಾಕ್ ಬಳಿ ಇರುವ ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ 42ನೇ ಹನುಮಜ್ಜಯಂತಿ ಉತ್ಸವಕ್ಕೆ ಸಂಭ್ರಮದ ಚಾಲನೆ ದೊರಕಿದೆ. ಡಿಸೆಂಬರ್ 15ರಿಂದ ಡಿಸೆಂಬರ್ 26ರ ವರೆಗೆ 12 ದಿನಗಳ ಕಾಲ ವಿಜೃಂಭಣೆಯಿಂದ ಈ ಉತ್ಸವ ನಡೆಯಲಿದೆ.

1969ರಲ್ಲಿ ಸ್ಥಳೀಯ ಯುವಕರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಬೆಟ್ಟದ ಮೇಲೆ ಸಣ್ಣ ದೇವಾಲಯವಾಗಿದ್ದ ರಾಗಿಗುಡ್ಡ ಇಂದಿಗೆ ನಗರದ ಪ್ರಮುಖ ದೇವಾಲಯಗಳಲ್ಲೊಂದಾಗಿದೆ. ಆಂಜನೇಯನ ದೇವಾಲಯದೊಂದಿಗೆ ಸೀತಾಲಕ್ಷ್ಮಣ ಸಹಿತ ಪ್ರಭು ಶ್ರೀರಾಮಚಂದ್ರ ಮತ್ತು ದಕ್ಷಿಣೇಶ್ವರಸ್ವಾಮಿ ಗುಡಿಗಳಿವೆ. ಬೆಟ್ಟದ ಕೆಳಗೆ ಮಹಾಗಣಪತಿ, ರಾಜರಾಜೇಶ್ವರಿ ಮತ್ತು ನವಗ್ರಹ ಗುಡಿಯಿದೆ.

ಹನುಮಜ್ಜಯಂತಿ ಉತ್ಸವದ ಪಟ್ಟಿಯಿಂತಿದೆ:

ಡಿ15: ಗಣಪತಿ ಹೋಮ, ಏಕಾದಶಾವರ ರುದ್ರಾಭಿಷೇಕ, ಸ್ವಾಮಿಗೆ ನವನೀತ ಅಲಂಕಾರ,
ಡಿ16: ಚಂಡಿಕಾಹೋಮ, ಅಷ್ಟಗಂಧಾಭಿಷೇಕ, ಮಂತ್ರಾಕ್ಷತೆ ಅಲಂಕಾರ
ಡಿ17: ಶ್ರೀಲಕ್ಶ್ಮೀನಾರಾಯಣಹೃದಯ ಹೋಮ, ಮಂಗಳದ್ರವ್ಯ ಅಭಿಷೇಕ, ದ್ರಾಕ್ಷಿ, ಗೋಡಂಬಿ, ಬಾದಾಮಿ ಅಲಂಕಾರ
ಡಿ 18: ನವಗ್ರಹ ಮತ್ತು ಸುದರ್ಶನಹೋಮ, ತೋಮಾಲಾಸೇವೆ, ಸ್ವರ್ಣಕವಚ
ಡಿ 19: ಪವಮಾನ ಹೋಮ, ಲಕ್ಶಾರ್ಚನೆ, ವಜ್ರಕವಚ
ಡಿ 20: ಲಲಿತಸಹಸ್ರನಾಮ ಹೋಮ, ಸಪ್ತ ಮಾತೃಕಾ ಮತ್ತು ರಾಜರಾಜೇಶ್ವರಿ ಪೂಜಾ, ಶಾಖಾಲಂಕಾರ
ಡಿ 21: ಚಂಡಿಕಾಹೋಮ, ವಿವಿಧ ಪುಷ್ಪಾಭಿಷೇಕ, ಲಕಷ ತುಳಸಿ ಅರ್ಚನೆ, ಸ್ವರ್ಣಕವಚ
ಡಿ 22: ನವಗ್ರಹ ಮತ್ತು ಸುದರ್ಷನ ಹೋಮ, ನವಧ್ಯಾನ್ಯ ಅಲಂಕಾರ
ಡಿ 23: ಸಾಮೂಹಿಕ ಧನ್ವಂತ್ರಿ ಹೋಮ, ವನಸ್ಪತಿ ಅಲಂಕಾರ
ಡಿ 24: ಸಾಮೂಹಿಕ ಶ್ರೀ ಗಣಪತಿ ಮತ್ತು ಚಂಡಿಕಾ ಹೋಮ, ಸಂಕಷ್ಠಗಣಪತಿ ವ್ರುತ, ಮಂಗಳದ್ರವ್ಯ ಅಲಂಕಾರ
ಡಿ 25: ಶ್ರೀನವಗೃಹ ಹೋಮ, ಮಹಾಮ್ರುತ್ಯುಂಜ ಹೋಮ, ರಜತ ಮತ್ತು ಪುಷ್ಪಾಲಂಕಾರ
ಡಿ 26: ಶತರುದ್ರಾಭಿಷೇಕ, ವಜ್ರಕಿರೀಟ ಮತ್ತು ವಜ್ರಾಲಂಕಾರ

ಹನುಮಜ್ಜಯಂತಿ ಸಮಯದಲ್ಲಿ ಪ್ರತಿದಿನ ಮಧ್ಯಾಹ್ನ ಮಹಾಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆಯನ್ನು ದೇವಾಲಯ ಮಂಡಳಿ ಆಯೋಜಿಸಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ರಾಗಿಗುಡ್ಡಶ್ರೀಪ್ರಸನ್ನ ಅಂಜನೇಯಸ್ವಾಮಿ ದೇವಸ್ಥಾನ
9 ನೇ ಬ್ಲಾಕ್, ಜಯನಗರ, ಬೆಂಗಳೂರು -560 069
ದೂರವಾಣಿ: (080)2658 0500, 2659 4255
ಇಮೇಲ್ : [email protected]
ವೆಬ್ : www.ragigudda.org

English summary
On the auspicious occasion of Hanumanjayyanthi Ragigudda Sri Prasanna Anjaneya Temple is organizing many Homas and rituals Here is the complete itinerary of temple’s event. This temple built in 1969 near Jayanagar 9th block with the primary deity Lord Hanuman, Now has Lord Shiva linga, Rama, Sita, Rajarajeshwari in the premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X