ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಕ್ರೀದ್ ಗೆ ಸಕಲ ಸಿದ್ಧತೆ, ಮಟನ್ ಬೆಲೆ ಗಗನಕ್ಕೆ

By Mahesh
|
Google Oneindia Kannada News

Elaborate Arrangements for Bakrid Celebration on Nov 17
ಪವಿತ್ರ ಹಬ್ಬ ಈದುಲ್ ಅಝ್‌ಹಾ (ಬಕ್ರೀದ್)ವನ್ನು ನ.17ರಂದು ರಾಜ್ಯದಾದ್ಯಂತ ಮುಸ್ಲಿಮರು ಆಚರಿಸಲಿದ್ದಾರೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿನ ಎಲ್ಲ ಜುಮಾ ಮಸೀದಿ ಮತ್ತು ಪ್ರಮುಖ ಈದ್ಗಾ ಮೈದಾನಗಳಲ್ಲಿ ಈದ್ ನಮಾಝ್ ಮತ್ತು ಖುತುಬಾಕ್ಕೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಈದ್ಗಾ ಮಸೀದಿಯಲ್ಲಿ ಬೆಳಗ್ಗೆ 8 ಗಂಟೆಗೆ ಸರಿಯಾಗಿ ನಮಾಝ್ ನಡೆಯಲಿದೆ. ಕೆಲವೆಡೆ ಅರ್ಧ ಮುಕ್ಕಾಲು ಗಂಟೆ ಹೆಚ್ಚುಕಮ್ಮಿಯಾದರೂ, ಒಂದೇ ಸಮಯಕ್ಕೆ ಅಲ್ಲಾಹ್ ನಿಗೆ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ವೈ. ಅಬ್ದುಲ್ಲ ಕುಂಞಿ ಹೇಳಿದ್ದಾರೆ.

ಗಗನಕ್ಕೇರಿ ಕೂಂತ ಮಟನ್ ರೇಟ್ :ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್ ಅಥವಾ ಈದ್ ಉಲ್ ಜುಹಾ ಸಂಭ್ರಮಕ್ಕೆ ಕೊಂಚ ಹೊಡೆತ ಬಿದ್ದಿದೆ. ಪ್ರತಿ ಬಾರಿಗಿಂತಲೂ ಈ ಬಾರಿ ಮಟನ್ ದರ ಹೆಚ್ಚಾಗಿದೆ. ಶಿವಾಜಿನಗರದ ಕರ್ನಾಟಕ ಮಟನ್ ಸ್ಟಾಲ್ ನ ಸೋಮವಾರದ ದರದಂತೆ ಕೆ.ಜಿ ಕುರಿ ಮಾಂಸಕ್ಕೆ 240 ರಿಂದ 400 ರು. ತನಕ ಇತ್ತು. ಇದರಲ್ಲಿ ಒಂದು ಅನುಕೂಲವೆಂದರೆ, ಕಾಲು, ತಲೆ ಹೀಗೆ ಅಂಗ ಅಂಗಗಳಿಗೆ ಬೇರೆ ಬೇರೆ ರೇಟ್ ಇದೆ. ಕಾಲಿನ ಮಾಂಸಕ್ಕೆ 40-80 ರು, ತಲೆ ಮಾಂಸಕ್ಕೆ 110-150 ರು, ಬೋಟಿ ಮಾಂಸಕ್ಕೆ 70-100 ರು ಇದೆ.

ಈ ಬಾರಿ ಕುರಿ ವ್ಯಾಪಾರ ಜೋರಾಗಿದ್ದು, ತಮಿಳುನಾಡಿನಿಂದಲೂ ಬೇಡಿಕೆ ಬಂದಿದೆ ಎಂದು ರಾಜ್ಯ ಮಟನ್ ಮರ್ಚೆಂಟ್ ಅಸೋಷಿಯೇಷನ್ ಅಧ್ಯಕ್ಷ ಇಕ್ಬಾಲ್ ಹೇಳುತ್ತಾರೆ. ಬಕ್ರಾಗಳ ಬೆಲೆ 4 ರಿಂದ 5 ಸಾವಿರ ರೂ ದಾಟುವ ನಿರೀಕ್ಷೆಯಿದೆ. ಬನ್ನೂರು, ಬಿಜಾಪುರ ಅಮಿನಗಢ, ಬಳ್ಳಾರಿಯ ಚಿಣ್ಣೂರು ಹಾಗೂ ಹಾವೇರಿ ತಳಿ ಕುರಿಗಳಿಗೆ ಬೇಡಿಕೆ ಬಂದಿದೆಯಂತೆ.

ರೇಟು ಎಷ್ಟೇ ಹೆಚ್ಚಾದರೂ ವರ್ಷಕ್ಕೆ ಒಮ್ಮೆ ಬರುವ ಹಬ್ಬದ ದಿನ ಸರಿಯಾದ ಹೊಟ್ಟೆ ಪೂಜೆ ಆಗದಿದ್ದರೆ ಹೇಗೆ ಹೇಳಿ. ಜನ ಹಣದುಬ್ಬರದ ನಡುವೆಯೂ ಬಕ್ರಾ ಖರೀದಿಗೆ ಕೆಲವರು ಉತ್ಸುಕರಾಗಿದ್ದರೆ, ಇನ್ನು ಕೆಲವರು ಮಟನ್ ಸ್ಟಾಲ್ ಗಳ ಮುಂದೆ ನಿಂತಿರುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿತ್ತು.

ಕರಾವಳಿಯಲ್ಲಿ ಸಕಲ ಸಿದ್ಧತೆ: ಮಂಗಳೂರು ನಗರದ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮಸೀದಿ, ಉಳ್ಳಾಲ ಕೇಂದ್ರ ಜುಮಾ ಮಸೀದಿ, ಮೂಡಬಿದ್ರೆ ಸಮೀಪದ ಪುತ್ತಿಗೆಯ ಅಲ್ ಫುರ್ಖಾನ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಅಲ್ ಫುರ್ಖಾನ್ ಸೆಂಟರ್‌, ಸುಳ್ಯದ ಗಾಂಧಿ ನಗರದ ಮುಹಿಯುದ್ದೀನ್ ಜುಮಾ ಮಸೀದಿ, ವಿಟ್ಲ ಕೇಂದ್ರ ಜುಮಾ ಮಸೀದಿ, ಪರ್ತಿಪ್ಪಾಡಿ ಜುಮಾ ಮಸೀದಿ, ಹಾಗೂ ಕಡಂಬು ಜುಮಾ ಮಸೀದಿಗಳಲ್ಲಿ ಬೆಳಗ್ಗೆ 8ಗಂಟೆಗೆ ಈದುಲ್ ಅಝ್‌ಹಾ ನಮಾಝ್ ನಡೆಯಲಿದೆ.

ಅಲ್ಲದೆ ಉಡುಪಿಯ ಇಂದ್ರಾಳಿ, ಕಟಪಾಡಿ, ಕಾಪು, ಬೆಳಪು, ಹೆಜಮಾಡಿ, ಮಲ್ಪೆ ಹಾಗೂ ಕಾರ್ಕಳದ ಬಂಗ್ಲೆ ಗುಡ್ಡೆ, ಸಾಣೂರು, ಕಾಬೆಟ್ಟು, ಬೈಲೂರು, ಕುಂದಾಪುರದ ಹಳಗೇರಿ, ನಾಗೂರು, ಗಂಗೊಳ್ಳಿ, ಬಸ್ರೂರು, ಪನಕದಕಟ್ಟೆ, ಕಂಡ್ಲೂರುಗಳಲ್ಲಿ ಪ್ರಾರ್ಥನೆ ಹಾಗೂ ಬಡ ಬಗ್ಗರಿಗೆ ದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಈದ್ಗಾ ಜುಮಾ ಮಸೀದಿ ಪ್ರಕಟಿಸಿದೆ.

English summary
The holy festival of Muslims, Bakrid (Id-ul-zuha), is being celebrated across Karnataka on Wednesday Nov.17. Elaborate arrangements have been made for the Eid Namaz and Khutuba on this occasion. Mean while, Mutton prices in the Bengaluru City have shot up by Rs 240 to 400 per kg in the last two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X