ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಉಳಿಸುವುದು ಪ್ರತಿಯೊಬ್ಬನ ಕರ್ತವ್ಯ

By * ಪ್ರಸಾದ ನಾಯಿಕ
|
Google Oneindia Kannada News

Manjunath giving final touch to Ganesha idol
ಇಂದು ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸುವ ನೆಪದಲ್ಲಿ ಪ್ರಕೃತಿಗೆ ಸಾಕಷ್ಟು ಹಾನಿಯಾಗುತ್ತಿದೆ. ವಾಯುಮಾಲಿನ್ಯ, ಜಲಮಾಲಿನ್ಯದಿಂದ ಭೂವಾತಾವರಣದ ಸ್ವಾಸ್ಥ್ಯ ಹಾಳಾಗುತ್ತಿದೆ. ನಮ್ಮ ಭೂಮಿಯನ್ನು ಕಾಪಾಡುವುದು ಮತ್ತು ಪರಿಸರ ಹಾಳು ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎಂದು ಕಳಕಳಿಯಿಂದ ಹೇಳುತ್ತಾರೆ ಮಂಜುನಾಥ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ರಾಸಾಯನಿಕಗಳನ್ನು ಬಳಸದಂತೆ ಸೂಚನೆ ನೀಡಿದ್ದರೂ ಹಲವರು ಬಳಸುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.

ಗಣಪನ ಸಂದೇಶ : ಪರಿಸರವೇ ದೇವರು ಎನ್ನುವ ಉದ್ಭವ ಗಣೇಶ, ಅರಣ್ಯ ಸಂರಕ್ಷಿಸಿ ಎನ್ನುವ ಗಣಪತಿ, ಪ್ರಾಣಿ-ಪಕ್ಷಿ ಸಂಕುಲವನ್ನು ಕಾಪಾಡಿ ಎಂದು ಕೋರುವ ವಿನಾಯಕ, ನಿಧಿಯ ಆಸೆಗಾಗಿ ದೇವಸ್ಥಾನ ಹಾಳುಮಾಡಬೇಡಿ ಎನ್ನುವ ಸಾಮಾಜಿಕ ಕಳಕಳಿಯ ವಕ್ರದಂತ, ಕೆಮ್ಮಣ್ಮು-ಅಷ್ಟಗಂಧ-ವಿಭೂತಿ-ಕುಂಕುಮ-ಅರಿಷಿಣಗಳಿಂದಲೇ ಲೇಪಿತನಾದ ಲಂಬೋಧರ ಮಂಜುನಾಥ ಅವರ ಕೈಯಲ್ಲಿ ಅರಳಿ ನಿಂತಿವೆ.

ಕಲಾವಿದರಿಗೆ ತರಬೇತಿ :
ತಾವೇ ಸ್ವತಃ ವಿಘ್ನ ವಿನಾಯಕನನ್ನು ತಯಾರಿಸುವುದರೊಂದಿಗೆ ಆಸಕ್ತಿಯುಳ್ಳವರಿಗೆ ಗಣೇಶನ ಮೂರ್ತಿಗಳನ್ನು ತಯಾರಿಸುವ ಕಾರ್ಯದಲ್ಲೂ ಅವರು ತೊಡಗಿದ್ದಾರೆ. ಮಕ್ಕಳಿಗಾಗಿ ಬೇಸಿಗೆ ಶಿಬಿರದಲ್ಲಿ ಗಜಾನನನ ಮೂರ್ತಿ ತಯಾರಿಸುವ ಕಲೆ ಹೇಳಿಕೊಡುತ್ತಾರೆ. ಇತ್ತೀಚಿನ ದಿನಗಳಲ್ಲಿ ತರಬೇತಿಗಾಗಿ ಬರುತ್ತಿರುವವರು ಕಡಿಮೆಯಾಗುತ್ತಿದ್ದಾರೆ. ಇನ್ನೂ ಹೆಚ್ಚೆಚ್ಚು ಯುವಕ, ಯುವತಿಯರು ಗಣೇಶನ ಮೂರ್ತಿ ತಯಾರಿಸುವ ಕಲೆಗಾರಿಕೆಯನ್ನು ಕಲಿಯಬೇಕು ಎಂದು ಅವರು ಕೋರಿದ್ದಾರೆ.

ಆಸಕ್ತಿಯಿದ್ದವರು ಅವರನ್ನು ಸಂಪರ್ಕಿಸಿ : ಮಂಜುನಾಥ ಮ. ಹಿರೇಮಠ, ಆಂಜನೇಯ ನಗರ, ಕೆಲಗೇರಿ, ಧಾರವಾಡ - 580 007. ಮೊಬೈಲ್ ಸಂಖ್ಯೆ : 98807 87122. ಈಮೇಲ್ ವಿಳಾಸ : [email protected]

English summary
Manjunath Hiremath from Dharwad, Ganesha idol sculptor, stands apart from other artists, as he not only makes Ganesha idols using mud and uses only natural colors, but also spreads a word word to save our nature to others also. He says by worshiping nature Ganesha we worship our earth too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X