ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನಾಯಕನಿಗೆ ವಿಶೇಷ ಅಲಂಕಾರ ಹೀಗಿರಲಿ

|
Google Oneindia Kannada News

Ganesha decoration
ಗುರುವಾರ ವಿನಾಯಕ ಚತುರ್ಥಿ. ಗಣಪನ ಸ್ವಾಗತಕ್ಕೆ ಎಲ್ಲೆಡೆಯೂ ಸಂಭ್ರಮದ ತಯಾರಿ ನಡೀತಿದೆ. ಇಡೀ ಭಾರತದಾದ್ಯಂತ ಆಚರಿಸಲ್ಪಡುವ ಗಣೇಶನ ಹಬ್ಬ ಈ ಬಾರಿ ನಿಮ್ಮ ಮನೆಯಲ್ಲೂ ವಿಶೇಷವಾಗಿ ನಡೆಯಲಿ. ಮನೆಯಲ್ಲಿ ಗಣೇಶನನ್ನು ಕೂರಿಸುವುದಕ್ಕೆ ಮತ್ತು ಅಲಂಕಾರ ಮಾಡುವುದಕ್ಕೆ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ. ಅವುಗಳನ್ನು ಪಾಲಿಸಿ ಗಣೇಶನ ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಬಹುದು.

ಗಣೇಶನ ಹಬ್ಬಕ್ಕೆ ಅಲಂಕಾರ ಹೀಗಿರಲಿ:

1. ಈಶಾನ್ಯ ದಿಕ್ಕು: ಮನೆಯ ಈಶಾನ್ಯ ದಿಕ್ಕು ಏಳಿಗೆ ಮತ್ತು ಸಂತಸದ ಸಂಕೇತ. ಆದ್ದರಿಂದ ಈಶಾನ್ಯದ ಜಾಗದಲ್ಲಿ ಗಣೇಶನನ್ನು ಇಡಲು ಸಿದ್ಧತೆ ಮಾಡಿಕೊಳ್ಳಿ.
2. ಮಂಟಪ: ಮಂಟಪವಿದ್ದರೆ ಅದರಲ್ಲಿ ಕೂರಿಸಬಹುದು, ಇಲ್ಲವೆಂದರೆ ಸ್ಟೂಲ್ ಮೇಲೆ ಕೆಂಪು ಬಟ್ಟೆ ಹೊದಿಸಿ ಕೂಡ ಗಣೇಶನನ್ನು ಕೂರಿಸಬಹುದು.
3. ಬಣ್ಣದ ಪೇಪರ್: ಗಣೇಶನ ಹಿಂಭಾಗದ ಗೋಡೆಯನ್ನು ಬಿಳಿ ಕರ್ಟೇನ್ ಅಥವಾ ಬಟ್ಟೆಯಿಂದ ಮುಚ್ಚಿ ಅದಕ್ಕೆ ಹಸಿರು, ಕೆಂಪು, ಹಳದಿ ಬಣ್ಣದ ಅಲಂಕೃತ ಪೇಪರ್ ಗಳನ್ನು ಅಲಂಕಾರಕ್ಕೆ ಬಳಸಬಹುದು. ಇಲ್ಲವೆಂದರೆ ವಿವಿಧ ರೀತಿಯ ಹೂವುಗಳನ್ನು ತೂಗುಹಾಕಬಹುದು.
4. ಹಸಿರು ತೋರಣ: ಗಣೇಶನ ಅಲಂಕಾರಕ್ಕೆ ಹಸಿರು ಪೂರಕ. ಆದ್ದರಿಂದ ಪೂಜಾ ಕೋಣೆಗೆ, ಮನೆ ಬಾಗಿಲಿಗೆ ಹಸಿರು ತೋರಣ ಹಾಕುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.
5. ಹೂವಿನ ಅಲಂಕಾರ: ಗಣೇಶನ ಮುಂದೆ ರಂಗವಲ್ಲಿ ಬಿಡಿಸಿ ಹೂವಿನ ದಳಗಳಿಂದ ಅಲಂಕಾರ ಮಾಡಿ ಮಧ್ಯೆ ಪುಟ್ಟ ಹಣತೆಯನ್ನು ಇಡಬಹುದು.
6. ದೀಪಗಳು: ಪುಟ್ಟ ಪುಟ್ಟ ದೀಪಗಳನ್ನು ಗಣೇಶನ ಮುಂದೆ ವಿನ್ಯಾಸವಾಗಿ ಇಟ್ಟರೆ ನೋಡಲು ತುಂಬಾ ಚೆನ್ನಾಗಿರುತ್ತದೆ.
7. ಹಣ್ಣು ಮತ್ತು ಸಿಹಿ ತಿಂಡಿ: ಐದು ಬಗೆಯ ಹಣ್ಣುಗಳು, ತಯಾರಾಗಿರುವ ವಿವಿಧ ತಿಂಡಿಗಳನ್ನು ಪ್ರತ್ಯೇಕ ತಟ್ಟೆಗಳಲ್ಲಿ ಗಣೇಶನ ಮುಂದೆ ಇಡಬಹುದು.
8. ಅಕ್ಷತೆ ಮತ್ತು ನೈವೇದ್ಯ: ಗಣೇಶನ ಎರಡೂ ಬದಿಗಳಲ್ಲಿ ದೊಡ್ಡ ದೀಪಗಳನ್ನು ಇಟ್ಟು, ಅರಿಶಿನ ಕುಂಕುಮ, ಅಕ್ಷತೆ, ಹೂವು, ನೈವೇದ್ಯಕ್ಕೆ ಕಡಲೆ ಉಸುಳಿ ಮತ್ತು ಮೋದಕವನ್ನು ಇಡಬೇಕು.
9. ಐದು ಅಥವಾ ಒಂಭತ್ತು ಬಗೆ ಹೂವು ಮತ್ತು ಗರಿಕೆ, ಎಕ್ಕದ ಹೂವು: ಗಣೇಶನ ಅಲಂಕಾರಕ್ಕೆ ಐದು ಅಥವಾ ಒಂಭತ್ತು ಬಗೆಯ ಹೂವನ್ನು ಬಳಸಬಹುದು. ಗಣೇಶನ ಪೂಜೆಗೆ ಅತಿ ಅವಶ್ಯಕವಾದ ಗರಿಕೆ, ಜನಿವಾರ, ಎಕ್ಕದ ಹೂವಿನ ಹಾರ, ಅಕ್ಷತೆಯನ್ನು ಮರೆಯಬೇಡಿ.

ಈ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡ ಮೇಲೆ ಗಣಪನನ್ನು ಭಕ್ತಿಯಿಂದ ನಿರ್ಮಲ ಮನಸ್ಸಿನಿಂದ ಪೂಜಿಸಿ ಒಲಿಸಿಕೊಳ್ಳಿ.

English summary
Ganesh Chaturthi marks the birth of Lord Ganesha and is a grand celebration in the country. For this Ganesh Chaturthi decorate your pooja room or puja ghar with these decoration ideas. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X