ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಹಬ್ಬಕ್ಕೆ ಬಾಗಿನದಲ್ಲಿ ಏನೇನಿರಬೇಕು?

|
Google Oneindia Kannada News

Gowri idol
ಬುಧವಾರ ಗೌರಿ ಹಬ್ಬ. ತವರಿನೊಂದಿಗಿನ ಅವಿನಾಭಾವ ಸಂಬಂಧದ ಸಂಕೇತವಾಗಿರುವ ಗೌರಿ ಹಬ್ಬ ಬಂತೆಂದರೆ ಹೆಣ್ಣು ಮಕ್ಕಳಿಗೆ ಸುಗ್ಗಿ. ಮದುವೆಯಾಗಿರಲಿ, ಆಗಿರದೆ ಇರಲಿ, ಹೆಣ್ಣು ಮಕ್ಕಳಿಗೆ ಗೌರಿ ಹಬ್ಬದಲ್ಲಿ ಹೆತ್ತವರು ಅಥವಾ ಸೋದರ ಸಂಬಂಧಿಗಳು ಉಡುಗೊರೆ ನೀಡಿ ನೂರ್ಕಾಲ ಬಾಳೆಂದು ಹಾರೈಸುವುದು ರೂಢಿ.

ತವರಿನ ಸುಖ ದುಃಖದ ನೆನಪನ್ನು ಮೆಲುಕು ಹಾಕುತ್ತ ಬಳೆ, ಬಾಗಿನವನ್ನು ಉಡುಗೊರೆಯಾಗಿ ಪಡೆಯುವುದು ಮತ್ತು ನೀಡುವುದು ಈ ಗೌರಿ ಹಬ್ಬದಲ್ಲೇ. ತವರಿನಿಂದ ಬರುವ ಪ್ರೀತಿ ತುಂಬಿದ ಉಡುಗೊರೆ ಹೆಣ್ಣಿಗೆ ಬೆಂಬಲದ ಬಲವನ್ನು ನೀಡುತ್ತದೆ. ಹಬ್ಬಗಳ ಹಿಂದಿನ ಭಾವನಾತ್ಮಕ ಸಂದೇಶ ನಿಜಕ್ಕೂ ಕಿರಿಯರಿಗೆ ಹಿರಿಯರ ಕೊಡುಗೆ ಎಂದೇ ಹೇಳಬಹುದು.

ಗೌರಿ ಹಬ್ಬದಲ್ಲಿ ನೀಡುವ ಬಾಗಿನದಲ್ಲಿ ಏನೇನು ಇರಬೇಕು ಎಂದು ತಿಳಿದುಕೊಳ್ಳಿ:
* ಹೊಸದಾದ ಅಕ್ಕಿ ಕೇರುವ ಮರ
* ಅಕ್ಕಿ, ಬೆಲ್ಲ, ನವಧಾನ್ಯಗಳು ಇರಲಿ.
* ಅರಿಶಿನ-ಕುಂಕುಮ, ಬಳೆ, ಬಿಚ್ಚೋಲೆ, ನಿಮ್ಮ ಕೈಲಾದಷ್ಟು ದಕ್ಷಿಣೆ.
* ತೆಂಗಿನ ಕಾಯಿ, ಬಾಳೆ ಹಣ್ಣು, ಹೂವು
* ಸೀರೆ ಅಥವಾ ಬ್ಲೌಸ್ ಪೀಸ್
* ಪ್ಯಾಕೆಟ್ ನಲ್ಲಿ ಲಭ್ಯವಿರುವ ಸಿಂಗಾರದ ವಸ್ತುಗಳು (ಕನ್ನಡಿ, ಕಾಡಿಗೆ, ಬಾಚಣಿಕೆ, ಕುಂಕುಮ, ಕಪ್ಪು ಬಳೆ, ಕಪ್ಪು ಮಣಿ).

ಇವೆಲ್ಲವನ್ನೂ ಹಬ್ಬದ ಹಿಂದಿನ ದಿನವೇ ತಯಾರು ಮಾಡಿಟ್ಟುಕೊಳ್ಳಿ. ಗೌರಿಯ ಮುಂದೆ ಇಟ್ಟು ಬಾಗಿನ ನೀಡಲು ಮರೆಯಬೇಡಿ.

English summary
Gowri Festival is well known that it is an indication of bond between married women and her parents. For this festivals parents or brother gives Baagina as a gift to their married daughter. So here are some tips to tell you what things should be there in Baagina.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X