ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ... ದಿವಾಳಿ... ದೀಪ off ಮಾಡ್ಕೊಳ್ಳಿ!

By * ಚಿತ್ರಾ ಬಡಿಗೇರ್, ಬೆಂಗಳೂರು
|
Google Oneindia Kannada News

Chitra Badiger, Bangalore
ದೀಪಾವಳಿ... ದಿವಾಳಿ... ದೀಪ off ಮಾಡ್ಕೊಳ್ಳಿ ......ಏನಾದ್ರು ಅನ್ಕೊಳ್ಳಿ. ಎಲ್ಲಾ ಸರೀನೆ ಕಾಲಕ್ಕನುಗುಣವಾಗಿ. ನಮ್ಮ ಶೋಭಾ madam ದೀಪಾವಳಿ ಉಡುಗೊರೆಯಾಗಿ ಪವರ್ ಕಟ್ ಕೊಟ್ಟು, ನಮಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದಾರೆ. ಇದನ್ನು ಕೇಳಿ ನಮ್ಮ ಶ್ರೀಸಾಮಾನ್ಯ ಕರೆಂಟ್ ಇಲ್ಲದಿದ್ದರೂ ಕರೆಂಟ್ ಹೊಡೆಸಿಕೊಂಡ ಕಾಗೆಯಂತೆ ಆಗಿದ್ದಾನೆ.

ದಿನಸಿ ಸಾಮಾನುಗಳ ಬೆಲೆ ಹೆಚ್ಚಳದಿಂದ, ನೆಂಟರಿಷ್ಟರನ್ನು ಕರೆದು ದೇವರಿಗೆ ನೈವೇದ್ಯ ತೋರಿಸಿದ ಹಾಗೆ ತೋರಿಸಿ, ಇನ್ನು ಉಳಿದ ಬಾಕಿ ತಿಂಡಿ ತಿನಿಸುಗಳನ್ನು ಇಮೇಲ್ ಮುಖಾಂತರ ಇಲ್ಲವೇ SMS ಮೂಲಕ ಕಳುಹಿಸುವ ಕಾಲ ಬಂದಿದೆ!

ಹೆಣ್ಣು ಕೊಟ್ಟ ಮಾವ, ಕಣ್ಣು ಕೊಟ್ಟ ದೇವರ ಸಮಾನ ಎನ್ನುವ ಗಾದೆ. ಇಗ ಏರುತ್ತಿರುವ ಬಂಗಾರದ ಬೆಲೆಯಿಂದ ಮಾವನ ಕಣ್ಣನ್ನು ಬಂಗಾರವನ್ನು ಕಂಡರೂ ಕಾಣಿಸದಂತೆ ಕುರುಡು ಮಾಡಿದೆ. ಈಕಡೆ ಅತ್ತೆಗೆ ಮಗಳು ಅಳಿಯ ಬರುವ ಸಂಭ್ರಮ ಒಂದೆಡೆಯಾದರೆ, ಅಳಿಯನ ಚಾಕರಿಯ ಖರ್ಚು ಇನ್ನೊಂದೆಡೆ. ಇದಕ್ಕೆ ಅಂದಿರಬೇಕು ಹಿಂದೆ ಅಳಿಯ ಮನೆ ತೊಳಿಯ ಎಂದು... ಗೊಣಗುತ್ತ ಕೆಲಸವನ್ನು ಪ್ರೀತಿಯಿಂದ ಮುಂದುವರೆಸುತ್ತಾರೆ.

ಹೆಂಗಳೆಯರು ಬಂಗಾರವನ್ನು ಬರಿ ಶೋರೂಂನಲ್ಲಿ ನೋಡಿಯೇ ಸಮಾಧಾನ ಪಡುವಂತಾಗಿದೆ. ಹೆಂಗಸರೇ ನಿಮಗೇಕೆ ಈ ಮೋಹ ಎಂದು ಕೇಳಿದರೆ, ಅವರು ಗಂಡಸರಾದ ಅನಂತ ಪದ್ಮನಾಭ ಮತ್ತು ಜನಾರ್ದನ ರೆಡ್ಡಿಯವರಿಗೆ ಚಿನ್ನದ ಮೇಲೆ ಅಷ್ಟೊಂದು ಮೋಹವಿದ್ದಮೇಲೆ, ನಮಗೆ ಹೆಂಗಸರಾಗಿ ಇಷ್ಟೂ ಅಸೆ ಬೇಡವೇ ಎನ್ನುತ್ತಾರೆ? ಇಂಥವರಿಗೆ ಅನಂತ ಪದ್ಮನಾಭನೇ ಪ್ರತ್ಯಕ್ಷವಾಗಿ ಅಥವಾ ಜನಾರ್ದನ ರೆಡ್ಡಿ ಚಂಚಲಗುಡ ಜೈಲಿಂದ ಹೊರಬಂದು ಉತ್ತರಿಸಬೇಕು. ಸದ್ಯಕ್ಕೆ ಅವರು ಬರಲಾರರು ಅಂತೀರಾ?

ದೀಪಾವಳಿಗೆ, ಮದುವೆಯಾದ ನಂತರ ಮೊದಲ ಬಾರಿಗೆ ಅಳಿಯತನಕ್ಕೆ ಬಂದು ಭರ್ಜರಿ ಅಳಿಯತನ ಮಾಡಿಸಿಕೊಳ್ಳುವ ಕಾಲ ಎಂದೋ ಹೋಯಿತು. ಈ ವರ್ಷವಂತೂ ಇಲ್ಲವೇ ಇಲ್ಲ. ಬಂಗಾರ ಕೊಡ್ತಾರಾ ಇಲ್ವಾ, ಕೇವಲ ಬಟ್ಟೆ ಮೇಲೆ ಆರತಿ ಎತ್ತಿ, ಕಿವಿಗೆ ಹೂ ಇಡತಾರಾ ನಮ್ಮ ಕಂಜುಸ್ ಮಾವಂದಿರು ಅನ್ನೋ ಕಳವಳ ಅಳಿಯಂದಿರಿಗೆ.

ಇನ್ನು ಹುಡುಗ ಹುಡುಗಿಯರ ವಿಷಯಕ್ಕೆ ಬಂದ್ರೆ ಇನ್ನೇನು ಒಳ್ಳೆ ದಿನಗಳು ಶುರುವಾಯ್ತು ಅಂತ ವಧು ವರರ ಅನ್ವೇಷನೆಯಯಲ್ಲಿ ತೊಡಗುತ್ತಾರೆ. ಗಂಡುಗಳಂತೂ ಕಾರ್ ನಲ್ಲಿ ತಂದೆ ತಾಯಿಯ ಜೊತೆ ಬ್ರೋಕರ್ ಹಿಡ್ಕೊಂಡು ಒಂದು ಊರಲ್ಲಿ ಇರೋ ಬರೋ ಹುಡುಗಿಯರನ್ನೆಲ್ಲಾ sight seeing ಥರಾ ನೋಡಿ, ಚೆನ್ನಾಗಿದೆ ಬಟ್ ಹೀಗಿದ್ದರೆ ಇನ್ನು ಚೆನ್ನಾಗಿರುತ್ತಿತ್ತು ಅಂತಾ ಫ್ರೀ ಕಾಮೆಂಟ್ಸ್ ಕೊಟ್ಟು ಬರ್ತಾರೆ. ಇನ್ನು ಹುಡುಗಿಮನೆಯವರೋ ಬಂದವರಿಗೆಲ್ಲ ಮಾಡಿ ಹಾಕಿ ಹಾಕಿ, ಇನ್ನು ಕೊನೆಗೆ ಬಂದವನ ಪಾಡು ನಾಯಿ ಪಾಡು ಅಷ್ಟೇ. ಅಂದ್ರೆ ಸಿಂಪ್ಲಿ, ಚಾ ಬಿಸ್ಕೆಟ್!

ಮಕ್ಕಳ ಖುಷಿ ಅಂತು ಹೇಳತಿರದು, ಹೊಸ ಬಟ್ಟೆ, ಪಟಾಕ್ಷಿ, ದೀಪಗಳ ಅಲಂಕಾರ ವರ್ಣಿಸಲು ಅಸಾದ್ಯ. ಈ ಪಟಾಕ್ಷಿ ಬಾಂಬ್ ಗಳ ಆಟದಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದರೆ ಇದೆ ಕೊನೆ ದೀಪಾವಳಿ ಆಗುವುದು ಖಚಿತ. ಆ ದೇವರು ಫುಲ್ voltage ಪವರ್ ನಿಂದ ನಮ್ಮಲ್ಲಿ ಬಂದು ಇ ಪವರ್ ಕಟ್ ಅನ್ನು ಕಟ್ ಮಾಡಿ, ನಮ್ಮ ಮಂತ್ರಿಗಳಿಗೆ ಜನ ಸೇವೆ ಮಾಡಬೇಕು ಎಂಬುವ ಕರೆಂಟ್ ಶಾಕ್ ಕೊಟ್ಟು ಎಲ್ಲಾ ಜನತೆಗೆ ಸುಖ ಸಮೃದ್ದಿ ಕೊಡಬೇಕೆಂದು ಹಾರೈಸುತ್ತೇನೆ.

English summary
Diwali is undoubted one of the biggest festivals in Karnataka. There is always shadow below the candle light. So, this year people of Karnataka are forced to celebrate the festival of lights without light (power). A satire by Chitra Badiger, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X