ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಲ್ಲಿ ಬೇಜಾನ್ ಸೀನ್ ನಲ್ಲಿ ಮಾಡಿವ್ನಿ!

By * ಭಾಷ ಪ್ರಿಯ ಲಕ್ಷ್ಮಣ್, ಬೆಂಗಳೂರು
|
Google Oneindia Kannada News

Laxman Shivashankar, Bangalore
ಪರಪ್ಪನ ಅಗ್ರಹಾರದಲ್ಲಿ ಸಂಭ್ರಮ, ಖೈದಿಗಳು ಜೈಲಿನ ಸಿಬ್ಬಂದಿ ಎಲ್ಲಾರು ಖುಷಿಯಿಂದ ಇರೋ ವಾತಾವರಣ. ಇದಕ್ಕೆಲ್ಲ ಕಾರಣ ಜೈಲಿನಲ್ಲಿ ಕನ್ನಡ ಫಿಲ್ಮ್ ಶೂಟಿಂಗ್.

ಹೊಸ ಖೈದಿ : ಗುರೂ ಇವತ್ತು ಸೂಟಿಂಗ್ ಅಂತೆ?
ಹಳೇ ಖೈದಿ : ನೀನು ಓಸ್ಬ ಅದಿಕ್ಕೆ ಎಗರಾಡತಾ ಇದ್ಯಾ. ಇವೆಲ್ಲ ಮಾಮೂಲ್. ನಾನೇ ಸುಮಾರ್ ಫಿಲ್ಮ್ ನಲ್ಲಿ ಜೈಲ್ ಸೀನ್ ನಲ್ಲಿ ಕಾಣಿಸ್ ಕೊಂಡಿವ್ನಿ.
ಹೊಸ ಖೈದಿ : ಅಂಗಾ!
ಹಳೇ ಖೈದಿ : ಜೈಲ್ ನಲ್ಲಿ ಊಟಕ್ಕೆ ಒಡೆದಾಡೋದು, ಈರೋ ಕೈನಲ್ಲಿ ವದೆ ತಿನ್ನೋದು, ಜೈಲ್ ಪಂಟ್ರುಗಳಿಗೆ ಮೈಕೈ ಒತ್ತೋದು, ಹೀಗೆ! ಬೇಜಾನ್ ಸೀನ್ ನಲ್ಲಿ ಮಾಡಿವ್ನಿ. ಈ escape ಆಗೋ ಸೀನಲ್ಲಿ ಮಾತ್ರ ಈರೋ ಇರ್ತಾನೆ, ಚಾನ್ಸ್ ಸಿಕ್ಕಿದ್ರೆ ಜೈಲ್ನಿಂದ escape ಆಗೋಣ ಅಂತ ಸ್ಕೆಚ್ ಹಾಕ್ತೀವ್ನಿ.
ಹೊಸ ಖೈದಿ : ಸೂಪರ್ ಸ್ಕೆಚ್! ನೀನು ಎಷ್ಟು ಪಿಲಂನಾಗೆ ಮಾಡಿದ್ಯ? ಮಾಡಿರೋ ಎಲ್ಲಾ ಪಿಲಂ ನೋಡಿದ್ಯಾ?
ಹಳೇ ಖೈದಿ : ಸುಮಾರು 15 - 20 ಪಿಲಂ ಇರಬಹುದು, ಎಲ್ಲಾ ನೋಡಿದ್ದೀನಿ, ಟೇಟ್ರುನಲ್ಲಿ ಅಲ್ಲ. ಟಿವಿನಲ್ಲಿ.
ಹೊಸ ಖೈದಿ : ಅದೆಂಗೆ ಗುರೂ , ಹೊಸ ಪಿಲಂ ಯೆಂಗೆ ಟಿವಿನಲ್ಲಿ ಬತ್ತದೆ.
ಹಳೇ ಖೈದಿ : ಲೇ ಲೂಜು ... ಏನ್ ಎಲ್ಲಾ ಪಿಲಂ ಬಂಗಾರದ ಮನ್ಸ, ಕಸ್ತೂರಿ ನಿವಾಸ ಟೈಪ್ ಇರ್ತದಾ? ಕನ್ನಡ ಫಿಲ್ಮ್ ಜಾಸ್ತಿ ಮಚ್ಚು, ಲಾಂಗ್ ಕತೆಗಳೇ. ಆತರ ಪಿಲಂ ನೋಡೋವ್ರೆಲ್ಲ ಜೈಲ್ನಲ್ಲೇ ಇರೋವಾಗ, ಇನ್ಯಾವ್ ನನ್ಮಗ ಟೇಟ್ರುನಲ್ಲಿ ನೋಡ್ತಾನೆ, ತೋಪ್ ಆಗಿದ್ದ ಪಿಲಂ ಎಲ್ಲಾ ಟಿವಿನಲ್ಲಿ ಬೇಗ ಬಂದಿಡ್ತದೆ.

ಅಷ್ಟರಲ್ಲಿ ಫಿಲಿಂ ಯುನಿಟ್ ನವರು ಬಂದ್ರು. ಜೈಲರ್ ಎಲ್ಲಾ technicians, ಲೈಟ್ ಬಾಯ್ಸ್ ಗೆ ..
ಜೈಲರ್ : ನೋಡಿ ಸರ್ ಎಲ್ಲರ್ಗೂ id ಕಾರ್ಡ್ ಕೊಡ್ತೀವಿ ಕಳೆದುಕೊಳ್ಳದೇ ಇಟ್ಟಬೇಕು, ಕಳಕೊಂಡರೆ ನಿಮ್ಮನ್ನ ನಾವ್ ಇಟ್ಗೊಬೆಕಾಗೊತ್ತೆ, ಹುಷಾರ್.

ಎಲ್ಲರ್ಗೂ ಮೀಟರ್ ಆಫ್ ಆಯಿತು ಒಂದು ಸಲಿ. ನಿರ್ಮಾಪಕ 'ವೀರ' ಮಾರ್ತಂಡ ಜೈಲ್ ನಲ್ಲಿ ಎಂಟ್ರಿ ಕೊಟ್ಟ (ಶೂಟಿಂಗ್ ರೆಡಿ ಮಾಡೋಕ್ಕೆ). ಅಷ್ಟರಲ್ಲಿ ಒಬ್ಬ ಖೈದಿ.

ಖೈದಿ : ಏನೋ ಮಾಮ ನೀನಾ ಈ ಪಿಲಂ ತೆಗಿತಾಇರೋದು? ಸೀನಂದು ಎಲ್ಲಾ ಸೈಟ್ ಮುಂಡಾಯ್ಸಿ ಬೇಜಾನ್ ದುಡ್ಡು ಮಾಡ್ ಬಿಟ್ಟೆ, ನನ್ನಮಗ ನನ್ಗೆ ಕಮಿಸನ್ ಕೊಡಲಿಲ್ಲ. ಈಗ ದೊಡ್ಡದಾಗಿ ಇಲ್ಲಿ ಪೋಜು, ಆಹಾಹಃ ಕಳ್ನನ್ಮಗ.

ಮಾರ್ತಂಡ ಆ ಕಡೇ ತಲೆ ಕೂಡ ತಿರ್ಗಿಸಲ್ಲಿಲ್ಲ.

ಖೈದಿಗಳು : (ಜೈಲರ್ಗೆ) ಸರ್ ಈರೋ ಆದರ್ಶ್ ಜ್ಯೋತೆ ಫೋಟೋ ತ್ಯಗಿಸ್ಕೊಬೇಕು ಸರ್.
ಜೈಲರ್ : ಆದರ್ಶ್ ಇಲ್ಲೇ ಇರ್ತಾರೆ ಅನ್ನ್ಸೋತ್ತೆ ಕಂಡ್ರೋ, ಅವ್ರಿಗೆ ಬೇಲ್ ಅಷ್ಟೇ ಸಿಕ್ಕಿರೋದು, judgement ಇನ್ನ ಬಂದಿಲ್ಲ.
ಖೈದಿ : ದೇವ್ರೇ ಆದರ್ಶ್ ನಮ್ಮ ಜ್ಯೋತಲೇ ಇರೋ ಹಾಗೆ ಮಾಡಪ್ಪ! ರಿಲೀಸ್ ಆದ್ ಮ್ಯಾಲೆ ನಮ್ಮ ಹಳ್ಳಿನಲ್ಲಿ ನನ್ಗೆ ದೊಡ್ಡ ಗೌರವ ಇರೊತ್ತೆ, ನಾನು ಅವರ ಜ್ಯೋತೆ ಇದ್ದೆ ಅಂತ.
ಇನ್ನೊಬ್ಬ : ಸರ್ photographer ಕರ್ಸಿ ಸರ್, ಒಂದು ಪೋಟೋ ಓಡಿಸ್ಕೊಳ್ಳೋಣ!
ಜೈಲರ್ : ಲೇ ಯಾರ್ ಹೇಳು! ನಮ್ಮ ಜೈಲ್ photographer ಅವನಲ್ಲ ಅವ್ನ? (ಎಲ್ಲಾ ತಲೆ ಆಡಿಸುತಾರೆ), ಆ ನನ್ನ್ಮಗನಿಗೆ ಸ್ಲೇಟು ಇಡುಕೊಂಡರೆ ಮಾತ್ರ ಫೋಟೋ ತಗಿಯೋಕ್ಕೆ ಬರೋದು.
ಅಷ್ಟರಲ್ಲಿ ಇನ್ನೊಬ್ಬ ಖೈದಿ ಬೇಸರದಿಂದ ಓಡಿಬಂದು.
ಓಡಿಬಂದ ಖೈದಿ : ಜೈಲರ್ ಸರ್ ಸೂಟಿಂಗ್ ಕ್ಯಾನ್ಸಲ್ ಅಂತೆ! (ಎಲ್ಲರು ಗಾಬರಿಗೊಂಡರು)
ಜೈಲರ್ : ಯಾಕಂತೆ?
ಓಡಿಬಂದ ಖೈದಿ : ಸರ್ ಈರೋ ಆದರ್ಶ್ ಕುಡಿದುಬಿಟ್ಟು ದಾರಿಬರೋವಾಗ ಯಾವೋನೋ ಬಿಕ್ಸೆ ಬೇಡೋವನಿಗೆ ಹೊಡೆದು ಬಿಟ್ನಂತೆ, ಈಗ ಸಿಂಗಸಂದ್ರ ಲಾಕಪ್ ನಲ್ಲಿ ಅವ್ನಂತೆ!

English summary
Film shooting, having 'darshan' of movie stars is no more a new thing to prisoners at Parappana Agrahara in Bangalore. Here is conversation between two jail inmates about film shooting. A satire by Laxman Shivashankar, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X