ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಹಬ್ಬ ಶುರು, ಗೊಂಬೆ ಹಬ್ಬ ಬಂತು

By ಶ್ವೇತಾ ಮಧುವನಹಳ್ಳಿ
|
Google Oneindia Kannada News

ನಾವು ಮಕ್ಕಳಾಗಿದ್ದ ದಿನಗಳೇ ಎಷ್ಟು ಚಂದ. ನಾನು ಸಣ್ಣವಳಿದ್ದಾಗ ದಸರಾ ಹಬ್ಬಕ್ಕೆಂದೇ ಕಾಯುತ್ತಿದ್ದೆ. ಒಂದು ತಿಂಗಳು ದಸರಾ ರಜೆ, ಶಾಲೆಗೆ ಟಾಟಾ ಹೇಳಿ ಸ್ವಲ್ಪ ಬ್ರೇಕ್ ತೆಗೆದುಕೊಳ್ಳುವ ಉತ್ಸಾಹ. ಮನೆಯಿಂದ ತಯಾರಾಗಿ ಹೊರಗೆ ಹೊರಟರೆ ಸ್ನೇಹಿತರ ದೊಡ್ಡ ಗುಂಪು. ಆಟ ಆಟ ಆಟ!, ಇದನ್ನು ಬಿಟ್ಟು ಬೇರೆ ಚಿಂತೆ ಆಲೋಚನೆಗಳೇ ಇರುತ್ತಿರಲಿಲ್ಲ.

ಅಮ್ಮ ಕರೆದು 'ಮಗಳೇ ನಾಳೆ ಪಾಡ್ಯ ಇದೆ ಗೊಂಬೆ ಹಬ್ಬ ಶುರು, ಎಲ್ಲ ಗೊಂಬೆಗಳನ್ನು ತೊಳೆದು ರೆಡಿ ಮಾಡು' ಎಂದು ಹೇಳುವುದೇ ತಡ, ಎಲ್ಲಿಲ್ಲದ ಉತ್ಸಾಹದಿಂದ ಬೆಕ್ಕಿನಂತೆ ಮನೆಯ ಅಟ್ಟದ ಮೇಲೆ ಹತ್ತಿ ಕಬ್ಬಿಣದ ಟ್ರಂಕ್‌ ತೆಗೆದು, ಅದರಲ್ಲಿ ಬಿಳಿಯ ಬಟ್ಟೆಯಲ್ಲಿ ಮೂಟೆ ಕಟ್ಟಿ ಇರಿಸಲಾಗಿದ್ದ ತಾಮ್ರದ ಹಾಗೂ ಮರದ ಹಳೆ ಗೊಂಬೆಗಳನ್ನು ಒಂದೊಂದು ಚೀಲವಾಗಿ ತಂದು ತುಳಸಿ ಕಟ್ಟೆಯ ಪಕ್ಕದಲ್ಲಿ ಕುಳಿತು ಒಂದೊಂದಾಗಿ ತೊಳೆದು ಗೊಂಬೆ ನೋಡುತ್ತಾ ಕನಸು ಕಾಣುತ್ತಾ ಗೊಂಬೆಗಳ ಲೋಕದಲ್ಲಿ ತೇಲಾಡುತ್ತಿದ್ದೆವು.

Shwetha Maduvanhalli

ಕಪ್ಪು ಟ್ರಂಕಿನಲ್ಲಿದ್ದ ಗೊಂಬೆಗಳಲ್ಲ ತಲೆಮಾರುಗಳಿಂದ ನವರಾತ್ರಿಗಳಲ್ಲಿ ಪೂಜಿಸುತ್ತಾ ಬಂದಿದ್ದಂತವು. ದೇವರ ಗೊಂಬೆ, ಭಜನಾ ಮಂಡಳಿ, ಮದುವೆ ಮಂಟಪ, ಪ್ರಾಣಿಗಳು ಸೇರಿ ಹಲವಾರು ಗೊಂಬೆಗಳಿದ್ದವು. ನಮ್ಮ ಮನೆಯಲ್ಲಿ ಇಷ್ಟು ಪುರಾತನ ಗೊಂಬೆಗಳಿವೆ ಎಂದು ಬೀಗುತ್ತಿದ್ದೆವು. ಜೊತೆಗೆ ಅಪ್ಪ ತೆಗೆದು ಕೊಟ್ಟಿದ್ದ ಎಲ್ಲ ಹೊಸ ಆಟಿಕೆ ಸಾಮಾನುಗಳನ್ನು ಒಟ್ಟು ಹಾಕಿ ಗೊಂಬೆಗಳ ಸಂಖ್ಯೆ ಹೆಚ್ಚಿಸಿ ಸಂತಸಪಡುತ್ತಿದ್ದೆವು. [ಮೈಸೂರು ದಸರಾ ಚಿತ್ರಗಳನ್ನು ನೋಡಿ]

ಅಪ್ಪ ಆಫೀಸ್‌ನಿಂದ ಬರುವುದನ್ನೇ ಎದುರು ನೋಡುತ್ತಾ ಸಂಜೆ ಮನೆಯ ಬಾಗಿಲಲ್ಲ ಕಾದು ಕುಳಿತುಕೊಳ್ಳುತ್ತಿದ್ದೆವು. ಅಪ್ಪ ಬಂದೊಡನೆ 'ಅಪ್ಪ.. ಅಪ್ಪ.. ಮಂಟಪ ರೆಡಿ ಮಾಡೋಣ ಬಾ' ಎಂದು ಅವರ ಹಿಂದೆ ಓಡುತ್ತಿದ್ದೆವು. ಅಪ್ಪ ಒಂದೊಂದಾಗಿ ಏಳು ಹಂತದ ಮಂಟಪವನ್ನು ಸಿದ್ಧ ಪಡಿಸಿದಮೇಲೆ. ಎಲ್ಲ ಗೊಂಬೆಗಳನ್ನು ಜೋಡಿಸುವ ಕಾರ್ಯಕ್ರಮ ಆರಂಭವಾಗುತ್ತಿತ್ತು.

ದಸರಾದ ಒಂಭತ್ತು ದಿನಗಳು ಗೊಂಬೆಗಳಿಗೆ ಪೂಜೆ ಜೊತೆಗೆ ದಿನಾ ಒಂದೊಂದು ಸಿಹಿ ತಿಂಡಿ. ಸಂಜೆ ಆದರೆ ಎಲ್ಲರ ಮನೆಗೆ ಗೊಂಬೆ ನೋಡಲು ಹೋಗುವ ಸಂಭ್ರಮ, ಸಡಗರ. ಗುಂಪು ಸೇರಿ ಒಂದು ಮನೆಗೆ ಹೋಗಿ ಆ ಗೊಂಬೆಗಳ ಮುಂದೆ ನಮಗೆ ಗೊತ್ತಿರುವ ಎಲ್ಲ ಹಾಡುಗಳ ಗಾಯನ. ಶಾಲೆಯ ಪದ್ಯಗಳಿಂದ ಹಿಡಿದು ದೇವರನಾಮದವರೆಗೆ ಎಲ್ಲ ಹಾಡುಗಳು ಒಂದೊಂದಾಗಿ ಗುಂಪಿನಲ್ಲಿ ಹಾಡುತ್ತಿದ್ದೆವು. ಎಲ್ಲರ ಮನೆಯ ಗೊಂಬೆಗಳನ್ನು ಒಂದೊಂದಾಗಿ ನೋಡುತ್ತಾ ಅದು ಚೆನ್ನಾಗಿದೆ ಅಲ್ವಾ, ಇದು ಚೆನ್ನಾಗಿದೆ ಅಲ್ವಾ ಎಂದು ಮಾತುಕತೆಗಳು ಸಾಗುತ್ತಿದ್ದವು.

ಎಷ್ಟು ಚಂದವಾಗಿತ್ತು ಆ ದಿನಗಳು. ಈಗ ನಮ್ಮ ಮಕ್ಕಳಿಗೆ ಕಂಪ್ಯೂಟರ್, ಲ್ಯಾಪ್ ಟಾಪ್ , ಸ್ಮಾರ್ಟ್ ಫೋನ್ ಗಳೇ ಗೊಂಬೆಗಳು. 'ಕಾಲಾಯ ತಸ್ಮೈ ನಮಃ'

English summary
We are remembering Mysore Dasara as Bombe Habba. Dasara is the tradition of displaying dolls as part of the festival. A special article for dasara from Shwetha Maduvanhalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X