ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾನಿಗಳ ದೇಣಿಗೆಯಿಂದ ನಡೆಯುವ ಮಂಗಳೂರು ದಸರಾ

By * ಚಿದಂಬರ ಬೈಕಂಪಾಡಿ, ಮಂಗಳೂರು
|
Google Oneindia Kannada News

Mangalore Dasara festival
ಮಂಗಳೂರು, ಅ. 7 : ವೈಭವೋಪೇತ ಮಂಗಳೂರು ದಸರಾಕ್ಕೆ ಗುರುವಾರ ಮುಸ್ಸಂಜೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಚಾಲನೆ ನೀಡಿದರು. ಶಾರದೆ ಹಾಗೂ ನವದುರ್ಗೆಯರ ವಿಗ್ರಹಗಳು ಅದ್ದೂರಿ ದಸರಾ ಮೆರವಣಿಗೆಗೆ ಕಳೆ ನೀಡಿದ್ದವು.

ಬ್ರಹ್ಮಶ್ರೀ ನಾರಾಯಣಗುರುಗಳಿಂದ ಸ್ಥಾಪಿತವಾದ ಕುದ್ರೋಳಿ ಕ್ಷೇತ್ರದಿಂದ ಹೊರಟ ಮಂಗಳೂರು ದಸರಾ ಮೆರವಣಿಗೆಯನ್ನು ವೀಕ್ಷಿಸಲು ನಗರದ ಮುಖ್ಯ ರಸ್ತೆಗಳಲ್ಲಿ ಜನರು ಜಮಾಯಿಸಿದ ಪರಿಣಾಮ ವಾಹನ ಸಂಚಾರವನ್ನು ಬದಲಿಸಲಾಗಿತ್ತು. ಕೇರಳದ ಚೆಂಡೆ, ಬಣ್ಣದ ಕೊಡೆಗಳು, ಚಿತ್ತಾಕರ್ಷಕ ಟ್ಯಾಬ್ಲೋಗಳು, ಹುಲಿವೇಷ, ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಜಾನಪದ ತಂಡಗಳ ಕಲಾವೈಭವ ಈ ಸಲದ ದಸರೆಯ ವೈಶಿಷ್ಟ್ಯ.

ಸರ್ಕಾರದ ಅನುದಾನವಿಲ್ಲದೆ ಕೇವಲ ಜನರು, ದಾನಿಗಳು ನೀಡುವ ದೇಣಿಗೆಯಿಂದಲೇ ನಡೆಯುವ ಮಂಗಳೂರು ದಸರಾ ವರ್ಷದಿಂದ ವರ್ಷಕ್ಕೆ ಮೆರುಗು ಹೆಚ್ಚಿಸಿಕೊಳ್ಳುತ್ತಿದೆ. ಗುರುವಾರ ಮುಸ್ಸಂಜೆಯಲ್ಲಿ ಆರಂಭವಾಗಿರುವ ಮಂಗಳೂರು ದಸರಾ ಮೆರವಣಿಗೆ ರಾತ್ರಿಯೆಲ್ಲ್ಲಾಸಂಚರಿಸಿ ಶುಕ್ರವಾರ ಮುಂಜಾನೆ ಮತ್ತೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ತಲುಪಿ ಇಲ್ಲಿನ ಕೆರೆಯಲ್ಲಿ ವಿಗ್ರಹಗಳ ವಿಸರ್ಜನೆಯೊಂದಿಗೆ ದಸರಾ ಸಂಪನ್ನವಾಯಿತು.

ಮಂಗಳೂರು ನಗರ ನವವಧುವಿನಂತೆ ಸಿಂಗಾರಗೊಂಡಿದ್ದು ವಿದ್ಯುತ್ ದೀಪಗಳು ಕಣ್ಣುಕೋರೈಸುತ್ತಿತ್ತು. ರಾತ್ರಿಯಾದರೂ ಮಂಗಳೂರು ನಗರ ಹಗಲಿನಂತೆ ಗೋಚರಿಸುತ್ತಿತ್ತು. ಮೈಸೂರಿನಲ್ಲಿ ನಾಡಹಬ್ಬ ದಸರಾ ತೆರೆಕಾಣುತ್ತಿದ್ದರೆ ಇತ್ತ ಮಂಗಳೂರು ದಸರಾ ಮೆರವಣಿಗೆ ಇರುಳಲ್ಲಿ ಲಕ್ಷಾಂತರ ಮಂದಿಯ ಕಣ್ಣಿಗೆ ಕಟ್ಟುತ್ತಿದೆ.

English summary
Former KPCC president Janardhana Poojari kick started Dasara festivities in Mangalore on Sept 6 at Kudroli Gokarnanath temple. This festival is funded by people and philanthropists and not by govt fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X