ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಳ ಗಂಗೆ ವಿಕ್ರಮ ಇವರ ಹಿರಿಯಜ್ಜಿ ಕಾಂತಿ

By * ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

Mysore Dasara elephants
ಸರಳ : ಕಳೆದ ಏಳು ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ 70 ವರ್ಷದ ಸರಳಳನ್ನು 1977ರಲ್ಲಿ ಕಾಕನಕೋಟೆ ಅರಣ್ಯಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆ ಹಿಡಿಯಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುಂಕದಕಟ್ಟೆ ಆನೆ ಶಿಬಿರದಿಂದ ಬಂದಿರುವ ಸರಳ 2.46 ಮೀ. ಎತ್ತರ, 3.34 ಮೀ. ಹಾಗೂ 3250 ಕೆ.ಜಿ. ತೂಕವಿದೆ. ಬಲರಾಮನಿಗೆ ಕುಮ್ಕಿ ಆನೆಯಾಗಿ ದಸರಾದಲ್ಲಿ ಭಾಗವಹಿಸುತ್ತಿದೆ. ಸದ್ಯಕ್ಕೆ ಇದು ಗರ್ಭಿಣಿಯಾಗಿದ್ದು ವಿಶೇಷ ಆರೈಕೆ ಪಡೆಯುತ್ತಿದೆ.

ಗಂಗೆ :
ಗಜಪಡೆಗೆ ನೂತನವಾಗಿ ಸೇರ್ಪಡೆಯಾಗಿರುವ ಗಂಗೆಗೆ 14 ವರ್ಷ ವಯಸ್ಸಾಗಿದ್ದು, ಇದೇ ಪ್ರಥಮಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ. ಹಿರಿಯ ಆನೆ ಸರಳಾಳ ಮಗಳಾದ ಗಂಗೆ 2.02 ಮೀಟರ್ ಎತ್ತರವಿದ್ದು, ತುಂಬಾ ಸಾಧು ಸ್ವಭಾವದಾಗಿದೆ. ಹುಣಸೂರಿನ ಬಳ್ಳೆ ಆನೆಶಿಬಿರದಿಂದ ಬಂದಿದೆ.

ವಿಕ್ರಮ : ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಬಂದಿರುವ ವಿಕ್ರಮನಿಗೆ 39 ವರ್ಷ. 2.60 ಮೀ ಎತ್ತರ, 3.43 ಮೀ ಉದ್ದ ಹಾಗೂ 3820 ಕೆ.ಜಿ. ತೂಕವಿದೆ. ಇದನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿದೆ. ಇದು 11ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.

ಕಾಂತಿ : ಗಜಪಡೆಗಳಿಗೆಲ್ಲಾ ಹಿರಿಯಜ್ಜಿಯಾಗಿರುವ ಕಾಂತಿಗೆ ಈಗ 72 ವರ್ಷ. 2.44 ಮೀ. ಎತ್ತರ 3.48 ಮೀ, 3290 ಕೆ.ಜಿ. ತೂಕವಿದೆ. ಇದು ಚಾಮರಾಜನಗರ ವನ್ಯಜೀವಿ ವಿಭಾಗದ ಕೆ.ಗುಡಿ ಆನೆ ಶಿಬಿರದಿಂದ ಬಂದಿದೆ. 1968ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಖೆಡ್ಡಾದಲ್ಲಿ ಸೆರೆಹಿಡಿಯಲಾಯಿತು. ಮೃದು ಮತ್ತು ಶಾಂತ ಸ್ವಭಾವದ ಕಾಂತಿ ಇದುವರೆಗೆ 17 ಬಾರಿ ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದೆ.

English summary
13 elephants participating in world famous Mysore Dasara 2011 are getting trained in Mysore. Here is brief biodata of the elephants including Balaram, which will carry golden howdah on Vijayadashami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X