ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾಗೆ ಏಳೂವರೆ ಸಾವಿರ ಕೆಂಪು ಬಸ್

By Mahesh
|
Google Oneindia Kannada News

Minister SA Ramdas
ಮೈಸೂರು, ಆ.26: ಈ ಬಾರಿ ಮೈಸೂರು ದಸರಾ ಸರಳವಾಗಿ ಆಚರಿಸಿದರೂ ಹೆಚ್ಚು ಜನರನ್ನು ಆಕರ್ಷಿಸುವಂತೆ ಮಾಡಲಾಗುವುದು. ರಾಜ್ಯದ ವಿವಿಧೆಡೆಗಳಿಂದ ಬರುವ ಪ್ರವಾಸಿಗರ ಅನುಕೂಲಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎ ರಾಮದಾಸ್ ಹೇಳಿದ್ದಾರೆ.

ಸುಮಾರು 7,500 ಬಸ್ ಗಳನ್ನು ದಸರಾ ವಿಶೇಷವಾಗಿ ರಸ್ತೆಗೆ ಬಿಡಲು ಕೆಎಸ್ ಆರ್ ಟಿಸಿ ನಿರ್ಧರಿಸಿದೆ. ರಾಜ್ಯದ ವಿವಿಧೆಡೆಗಳಿಂದ ಹಾಗೂ ನೆರೆ ರಾಜ್ಯಗಳಿಂದಲೂ ದಸರಾ ವಿಶೇಷ ಬಸ್ ಗಳು ಹೊರಡಲಿದೆ.

KSIC ಪ್ರಾಯೋಜಕತ್ವ: ಶತಕದ ಸಂಭ್ರಮದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ, ಮೈಸೂರು ದಸರಾದ ಪ್ರಮುಖ ಪ್ರಾಯೋಜಕನಾಗಿ ಪಾಲ್ಗೊಳ್ಳಲಿದೆ. ಈ ಬಗ್ಗೆ KSIC ಅಧ್ಯಕ್ಷ ಸಚಿವ ಬಚ್ಚೇಗೌಡರೊಡನೆ ದಸರಾ ಸ್ವಾಗತ ಸಮಿತಿ ಮಾತುಕತೆ ನಡೆಸಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತ್ಯೇಕ ಚಲನಚಿತ್ರೋತ್ಸವ ಆಯೋಜನೆ ರೂಪುರೇಷೆಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಮುಖ್ಯಮಂತ್ರಿ ಡಿವಿ ಸದಾನಂದಗೌಡರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಎಂದು ರಾಮದಾಸ್ ಹೇಳಿದರು.

English summary
KSRTC is expected to provide 7,500 buses to ensure hassle-free services to those headed for Mysore Dasara 2011 from any part of the Karnataka and also from the neighboring states said minister SA Ramdas
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X