ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನಗರದಲ್ಲಿ ಜೆಡಿಎಸ್ ಕಳೆದುಕೊಂಡಿದ್ದೇನು?

By Mahesh
|
Google Oneindia Kannada News

Ramanagara
ರಾಮನಗರ, ಮೇ.12: ರೇಷ್ಮೆ ನಾಡು ರಾಮನಗರ ಅಕ್ಷರಶಃ ಜೆಡಿಎಸ್ ಅಧೀನದಲ್ಲಿದ್ದ ಜಿಲ್ಲೆ. ಆದರೆ, ಈ ಬಾರಿ ಬಿಜೆಪಿ ಮಾಜಿ ಸಚಿವ, ಸಿಪಿ ಯೋಗೇಶ್ವರ್ ಅವರು ನೀಡಿದ ಹೊಡೆತಕ್ಕೆ ಜೆಡಿಎಸ್ ಬೆಚ್ಚಿ ಬಿದ್ದಿದೆ. ನೀರೀಕ್ಷೆಯಂತೆ ಮಾಗಡಿ, ರಾಮನರದಲ್ಲಿ ಗೆದ್ದರೂ ಕನಕಪುರ, ಚನ್ನಪಟ್ಟಣ ಕಳೆದುಕೊಂಡಿದ್ದು ಹೇಗೆ ಎಂಬ ಲೆಕ್ಕಾಚಾರದಲ್ಲಿ ಎಚ್ ಡಿ ಕುಮಾರಸ್ವಾಮಿ ತೊಡಗಿದ್ದಾರೆ.

ಚನ್ನಪಟ್ಟಣದಿಂದ ಸಿಪಿ ಯೋಗೀಶ್ವರ್ ಅವರು ಸೈಕಲ್ ಹತ್ತಿರುವುದು ಸಹಜವಾಗಿ ಕುತೂಹಲ ಮೂಡಿಸಿತ್ತು. ಆದರೆ, ಯೋಗೇಶ್ವರ್ ಗೆಲುವಿನ ಬಗ್ಗೆ ಯಾರಿಗೂ ಹೆಚ್ಚಿನ ನಿರೀಕ್ಷೆಯಿರಲಿಲ್ಲ. ಮಧುಗಿರಿಯಿಂದ ಹಾರಿ ಬಂದಿದ್ದ ಅನಿತಾ ಕುಮಾರಸ್ವಾಮಿ ಅವರ ಕಣ್ಣೀರಿಗೆ ಬೆಲೆ ಸಿಗುತ್ತದೆ ಎಂದೇ ನಂಬಲಾಗಿತ್ತು.

ಚನ್ನಪಟ್ಟಣದಲ್ಲಿ ಜೆಡಿಸ್ ಭರ್ಜರಿ ಪ್ರಚಾರ ಕೂಡಾ ಮಾಡಿತ್ತು. ಆದರೆ, ಅನಿತಾ ಅವರು ಗೆಲ್ಲಲು ಸಾಧ್ಯವಾಗಲೇ ಇಲ್ಲ. ಈ ಬಾರಿಗೆ ಜೆಡಿಎಸ್ ಗೆ ದೊಡ್ಡ ಆಘಾತ ಅಷ್ಟೇ ಅಲ್ಲದೆ, ತಂತ್ರಗಾರಿಕೆ ಉಲ್ಟಾ ಆಗಿತ್ತು ಹಲವು ಕಾಲ ಚುಚ್ಚಲಿದೆ. ಇದೇ ರೀತಿ ಮಾಗಡಿ ಕ್ಷೇತ್ರದಿಂದ ಜೇಡರಹಳ್ಳಿ ಕೃಷ್ಣಪ್ಪ (ಎಚ್ಎಂ ಕೃಷ್ಣ ಮೂರ್ತಿ) ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೂ ಗೆಲ್ಲುವ ನಿರೀಕ್ಷೆಯಂತೂ ಇರಲಿಲ್ಲ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಟಿಕೆ ಪಡೆದು ಕಣಕ್ಕಿಳಿಯಲು ಯತ್ನಿಸಿದ್ದ ಸಿಪಿ ಯೋಗೇಶ್ವರ್ ಅವರು ಕೊನೆ ಕ್ಷಣದಲ್ಲಿ ಸಮಾಜವಾದಿ ಪಕ್ಷದ ಸೈಕಲ್ ಹತ್ತಿದರು. ಪುತ್ರಿ ನಿಶಾ ಜೊತೆ ಚುನಾವಣೆ ಪ್ರಚಾರದ ಜೊತೆಗೆ ಬರೀ ಒಕ್ಕಲಿಗರ ಸಮುದಾಯದ ಓಲೈಕೆ ಅಲ್ಲದೆ ಇತರೆ ಸಮುದಾಯಗಳ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟರು. ಆದರೆ, ಈ ವಿಷಯದಲ್ಲಿ ಜೆಡಿಎಸ್ ಸ್ವಲ್ಪ ಯಾಮಾರಿದ್ದು ಭಾರಿ ಹೊಡೆತ ಕೊಟ್ಟಿತು.

ಒಟ್ಟಾರೆ ಜಾತಿವಾರು ಲೆಕ್ಕಾಚಾರದಲ್ಲಿ ಗೆದ್ದಿರುವ 53 ಶಾಸಕರ ಪೈಕಿ ಜೆಡಿಎಸ್ ನ 20 ಶಾಸಕರು ಒಕ್ಕಲಿಗರಾಗಿದ್ದಾರೆ. ಆದರೆ, ಇವರ ಗೆಲುವಿಗೆ ಬರೀ ಒಕ್ಕಲಿಗರ ಮತ ಮಾತ್ರ ಬಿದ್ದಿಲ್ಲ. ಅನಿತಾ ಮೇಡಂ ಅವರಿಗೆ ಇತರೆ ಸಮುದಾಯದ ಮತಗಳು ನೇರವಾಗಿ ಪಡೆಯಲು ಸಾಧ್ಯವಾಗಿರುವುದೇ ಸೋಲಿಗೆ ಕಾರಣವಾಗಿದೆ.

ಯೋಗೇಶ್ವರ್ ಹಾಗೂ ಅನಿತಾ ಅವರ ನಡುವಿನ ಮತಗಳ ವಿಭಜನೆ ಮಾಡಲು ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಸಾಧ್ಯವಾಗಿಲ್ಲ. ಇಬ್ಬರ ಮತಗಳನ್ನು ಸೇರಿಸಿದರೆ 10 ಸಾವಿರ ದಾಟುವುದಿಲ್ಲ. ಹೀಗಾಗಿ ಜೆಡಿಎಸ್ ನಿರ್ಲಕ್ಷ್ಯ ಹಾಗೂ ಯೋಗೇಶ್ವರ್ ರಿವರ್ಸ್ ವೋಟ್ ಬ್ಯಾಂಕ್ ಲೆಕ್ಕಾಚಾರ ಫಲಿಸಿದೆ.

2013 ರಲ್ಲಿ ರಾಮನಗರದಿಂದ ಆಯ್ಕೆಗೊಂಡ ಶಾಸಕರು ಇವರು:

ಕ್ಷೇತ್ರ ಗೆದ್ದವರು ಗಳಿಸಿದ
ಮತಗಳು
ಪಕ್ಷ ಸೋತವರು ಗಳಿಸಿದ
ಮತಗಳು
ಪಕ್ಷ
ಮಾಗಡಿ
ಎಚ್ ಸಿ ಬಾಲಕೃಷ್ಣ 74821 ಜೆಡಿಎಸ್ ಮಂಜುನಾಥ 60462 ಕಾಂಗ್ರೆಸ್
ರಾಮನಗರ
ಎಚ್ ಡಿ ಕುಮಾರಸ್ವಾಮಿ 83447 ಜೆಡಿಎಸ್ ಮರಿದೇವರು 58049 ಕಾಂಗ್ರೆಸ್
ಕನಕಪುರ
ಡಿಕೆ ಶಿವಕುಮಾರ್ 100007 ಕಾಂಗ್ರೆಸ್ ಪಿಜಿಆರ್ ಸಿಂಧ್ಯಾ 68583 ಜೆಡಿಎಸ್
ಚನ್ನಪಟ್ಟಣ ಸಿಪಿ ಯೋಗೇಶ್ವರ್ 80099 ಎಸ್ ಪಿ ಅನಿತಾ ಕುಮಾರಸ್ವಾಮಿ
73635 ಜೆಡಿಎಸ್

ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |

English summary
Karnataka assembly Election 2013 Ramanagara district Results: Get complete information about winners and losers with their constituencies and party. JDS candidate HD Kumaraswamy's wife Anitha's defeat is biggest set back. Former BJP Minister CP Yogeshwar victory with SP ticket surprised many predictors
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X