ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಯ್ಯಾರಿ ಊರ್ವಶಿಯ ಪ್ರೇಮ ಪ್ರಸಂಗಗಳು

By * ಧವಳ
|
Google Oneindia Kannada News

Urvashi, icon of beautiful indian women
ಪ್ರೀತಿಯನ್ನು ವ್ಯಕ್ತಪಡಿಸೋಕೆ ಒಂದು ದಿನಬೇಕಾ? ಅಥವಾ ಒಂದೇ ಒಂದು ದಿನ ಸಾಕಾ? ಎಂದು ಕೇಳುವವರ ಸಂಖ್ಯೆ ಕಡಿಮೆ ಏನಿಲ್ಲ. ಆದರೆ ಅವರ ಸಂಖ್ಯೆ ತುಂಬಾ ಕಡಿಮೆ. ಅಲ್ಪಸಂಖ್ಯಾತರು ಎಂದು ಕರೆದರೂ ಓಕೆ. ಯಾಕೆಂದರೆ, ಬಹುಸಂಖ್ಯಾತ ಯುವ ಜನಾಂಗಕ್ಕೆ ಪ್ರೀತಿಸುವುದಕ್ಕೇ ಟೈಂ ಸಾಕಾಗುತ್ತಿಲ್ಲವಾದ್ದರಿಂದ ಈ ಕೆಲಸಕ್ಕೆ ಬಾರದ ಚರ್ಚೆಗಳು, ಸಿದ್ಧಾಂತಗಳು, ರೆಡ್ಡಿ, ಯಡ್ಡಿ, ಚಡ್ಡಿ, ಪುಟಗೋಸಿಗಳ ಬಗ್ಗೆ ಥಿಂಕ್ ಮಾಡುವುದಕ್ಕೆ ಯಾವನಿಗೆ ಯಾವಳಿಗೆ ಬಿಡುವಿದೆ? ಚರ್ಚೆ ಮಾಡುವವರೇ ಬೇರೆ ಲವ್ ಮಾಡುವವರೇ ಬೇರೆ. ಇದು ಲವ್ ಡಿವೈಡೆಡ್ ಯುಗ ಅಥವಾ ಡಿವೈಡೆಡ್ ಲವ್ವುಗಳ ಕಲಿಗಾಲ.

ಪ್ರೇಮಕ್ಕೇಂತ ಒಂದು ದಿನ ಬೇಕಾಗಿಲ್ಲ. ಆದರೆ ವ್ಯಕ್ತಪಡಿಸುವುದಕ್ಕೆ ಒಂದು ಗಳಿಗೆನಾದರೂ ಬೇಕಲ್ಲವಾ. ಅದಕ್ಕಾಗಿ ಪ್ರೇಮಿಗಳ ದಿನದಂದು ನಾವು ಮನಸ್ಸಿನ ಮಾತನ್ನು ಹೇಳೇ ತೀರೋಣ ಎನ್ನುವ ಜನರು ಸಿಕ್ಕಾಪಟ್ಟೆ ಸಿಕ್ತಾರೆ. ಮೊನ್ನೆ ಅಂಥ ಅನೇಕರನ್ನು ಭೇಟಿಮಾಡಿ ಚರ್ಚೆ ಮಾಡಿದೆ. ಆದರೆ ಏನೂ ಗಿಟ್ಟಲಿಲ್ಲ. ಅನ್ಯಮಾರ್ಗವಿಲ್ಲದೆ ಪುರಾಣಗಳ ಮೊರೆಹೊಕ್ಕೆ. ಪುರಾಣ ಪುಣ್ಯಕಾಲದ ವಿಷಯಕ್ಕೆ ಬಂದಾಗ ನಮಗೆ ಎದುರಾಗುವ ಛಾಲೆಂಜೇ ಬೇರೆ ಟೈಪ್.

ಅಪ್ಸರೆ ಎಂದರೆ ಯಾರು? ಹುಡುಗರ ಕನವರಿಕೆಗಳಲ್ಲಿ ಅತಿಕ್ರಮಪ್ರವೇಶ ಮಾಡುವ ಸಿನಿಮಾ ತಾರೆಯರು ಎಂದು ನೀವು ಪರಿಭಾವಿಸಿಕೊಳ್ಳಬಹುದು. (ಉದಾಹರಣೆಗಳು ಬೇಕಾ:-) ಬೇಡ ಬಿಡಿ. ಭಾರತೀಯ ಪುರಾಣಗಳಲ್ಲಿ ಮಿಂಚಿದರೂ ಮರೆಯಾಗದ ಅಪ್ಸರೆಯರೆಂದರೆ ಇಂದ್ರನ ಆಜ್ಞೆಯಂತೆ ದೇಹ ಹಾಗೂ ಮನಸ್ಸು ಕೊಟ್ಟು ಕೆಲಸವನ್ನು ಪೂರ್ಣ ಮಾಡುತ್ತಿದ್ದ ಹೆಣ್ಣುಮಕ್ಕಳು ಎಂದು ತಿಳಿಯಿರಿ.

ಯಾವುದೇ ಪುರಾಣದ ಕಥೆಗಳನ್ನು ಓದಿದರೂ ನಮಗೆ ಕಾಣ ಸಿಗುವುದು ಈ ಚಂದುಳ್ಳಿ ಚಲುವೆಯರೇ. ಇವರಿಗೆ ದಾಡಿವಾಲ ಋಷಿಗಳು, ಸುರಸುಂದರಾಂಗ ಚಕ್ರವರ್ತಿಗಳು ಎಲ್ಲರೂ ಓಕೆ...! ಇವರ ಗಂಡಂದಿರು ಗಂಧರ್ವರು ಅನ್ನುವ ಮಾತಿದೆ. ಆದರೆ ಅವ್ಯಾವುದು ಈಗ ನಾನು ಹೇಳ ಹೊರಟಿರುವ ವಿಷಯಕ್ಕೆ ಕನೆಕ್ಟ್ ಆಗುವುದಿಲ್ಲ! ಚೆಲುವೆಯರ ಜೀವನ ಇರೋದು ದೇವತೆಗಳ ಶ್ರೇಯಸ್ಸಿಗೆ ಮಾತ್ರ, ಅಕಸ್ಮಾತ್ ನಮ್ಮಂತಹ ಹುಲು ಮಾನವರು ಬೇರೆ ಏನೇನೋ ಅಂದುಕೊಂಡರೂ ಪರವಾಗಿಲ್ಲ, ಅವರಿಗೆ ದೇವಲೋಕದ ಏಳಿಗೆಯೇ ಮುಖ್ಯ.

ಅಪ್ಸರೆಯರ ಕ್ಯಾಟ್ ವಾಕಿನಲ್ಲಿ ಎದ್ದು ಕಾಣುವ ಹುಡುಗಿ ಊರ್ವಶಿ. ಈಕೆ ಎಲ್ಲರಿಗಿಂತ ಅಪಾರವಾದ ಸೌಂದರ್ಯವತಿ ಎಂದು ಪುರಾಣ ಪುರುಷರು ಅವಕಾಶ ಸಿಕ್ಕಾಗಲೆಲ್ಲ ಸಾರಿ ಸಾರಿ ಹೇಳಿದ್ದಾರೆ. ಈಪಾಟಿ ಚೆಲುವೆಯಲ್ಲಿ ರೂಪದ ಜೊತೆ ಮತ್ತೊಂದು ಸಂಗತಿಯು ತುಂಬಾ ವಿಶೇಷವಾಗಿದೆ. ಅದು ಪ್ರೀತಿ ಮಾಡುವುದು. ರಂಭೆ, ಮೇನಕೆ, ತಿಲೋತ್ತಮೆ ಪ್ರೀತಿಯನ್ನು ಡ್ಯುಟಿಯಂತೆ ಮಾಡಿ ಬಂದರೆ ಈ ಊರ್ವಶಿ ಮನುಷ್ಯರಂತೆ ಪ್ರೀತಿಯನ್ನು ಪ್ರೀತಿಯಿಂದ ಮಾಡುತ್ತಿದ್ದಳು. ಮೈ ಕೊಟ್ಟರು ಅದರಲ್ಲಿ ಮನಸ್ಸನ್ನು ಹದವಾಗಿ ಬೆರೆಸಿರುತ್ತಿದ್ದಳು. ತನ್ನ ಕರ್ತವ್ಯ ಮುಗಿದರೆ ಸಾಕೆಂದು ಪ್ರೀತಿಸಿದವನನ್ನು ಕೊಡವಿ ಎದ್ದು ಹೋಗ್ತಾ ಇರಲಿಲ್ಲ. ಈ ಎಲ್ಲ ವಿಶೇಷ ಕಾರಣಗಳಿಂದ ಊರ್ವಶಿ ದೇವೇಂದ್ರನ ಆಸ್ಥಾನದಲ್ಲಿಯು ಸಹ ವಿಶೇಷ ಸ್ಥಾನ ಪಡೆದಿದ್ದಳು.

ಸರಿ, ಈಗ ಊರ್ವಶಿಯ ಬಯೋಡೇಟ ಓದೋಣ »

English summary
Urvashi, arguably the most beautiful woman the Indian mythology ever saw. Read all about the idiosyncrasies of the marvelous damsel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X