•  

ಫೆ. 14 ಪ್ರೇಮ ಪಲ್ಲವಿ : ಬಹುಮಾನ ವಿಜೇತರು

ಬುಧವಾರ, ಫೆಬ್ರವರಿ 15, 2012, 16:35 [IST]
Valentine's day contest winners
ಪ್ರೇಮಿಗಳ ದಿನಾಚರಣೆ ನಿಮಿತ್ತ ನಾವು ಹಮ್ಮಿಕೊಂಡಿದ್ದ ಲೇಖನ ಅಥವಾ ಅನುಭವಕಥನ ಅಥವಾ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ನಮಸ್ಕಾರಗಳು. ನಮ್ಮ ಆಹ್ವಾನಕ್ಕೆ ಓಗೊಟ್ಟ ಪ್ರೀತಿಪೀಡಿತ ಹೃದಯಗಳಿಗೆ ಪ್ರೇಮಪೂರ್ವಕ ಧನ್ಯವಾದ!

ಸಾಮಾನ್ಯವಾಗಿ ನಾನು ಇಂಥ ಆಹ್ವಾನಗಳನ್ನು ನಮ್ಮ ವೆಬ್ ಸೈಟಿನಲ್ಲಿ ಪ್ರಕಟಿಸುವುದಿಲ್ಲ. ಏಕೆಂದರೆ, ಕರೆಗೆ ಸ್ಪಂದಿಸಿ ಭೋರ್ಗರೆಯುವ ಲೇಖನಗಳ ಪ್ರವಾಹವನ್ನು ನಿಭಾಯಿಸುವುದು ನನ್ನಿಂದಾಗುವುದಿಲ್ಲ.

ಆದರೆ, ಪ್ರೀತಿ ಪ್ರೇಮ ವಿರಹ ತಾಪ ಅನುತಾಪ ಕುರಿತಂತೆ ಮಾಜಿ ಹಾಗೂ ಹಾಲಿ ಪ್ರೇಮಿಗಳು ಬರೆದುಕೊಂಡ ಸ್ವಗತಗಳನ್ನು ಮತ್ತು ಕಾಲ್ಪನಿಕ ಕಥಾ ಸರಿತ್ಸಾಗರಗಳನ್ನು ಆಮೂಲಾಗ್ರವಾಗಿ ಓದಿದ್ದೇನೆ. ಕೆಲವರ ಕಥಾ ವಸ್ತುಗಳಂತೂ ಸಖತ್ ಆಗಿವೆ. ಆದರೆ. ಭಾಷೆ ಮತ್ತು ನಿರೂಪಣೆಯಲ್ಲಿ ಸೋತ ಅನೇಕ ಬರಹಗಳನ್ನು ತಿರಸ್ಕರಿಸಿದ್ದೇನೆ.

ನಾನು ಮತ್ತು ನಮ್ಮ ಸಂಪಾದಕೀಯ ಬಳಗ ಮೆಚ್ಚಿಕೊಂಡ ಹಾಗೂ ಅತಿಹೆಚ್ಚು ಓದುಗರನ್ನು ಆಕರ್ಷಿಸಿದ ಐದು ಬರಹಗಳು ಹೀಗಿವೆ.

* ಶಿಶಿರ್, ಪುತ್ತೂರು
* ಅಂಜಲಿ ರಾಮಣ್ಣ, ಬೆಂಗಳೂರು
* ಗಿರೀಶ್ ಕುಲಕರ್ಣಿ
* ಶಿವಕುಮಾರ್, ಹೊಸಂಗಡಿ
* ವಿದ್ಯಾಶಂಕರ್ ಹರಪನಹಳ್ಳಿ, ಫ್ರಾನ್ಸ್

ಸ್ಪರ್ಧೆಯಲ್ಲಿ ನಮ್ಮ ಮೆಚ್ಚುಗೆ ಗಳಿಸಿದ ಮೇಲಿನ ಲೇಖಕ ಲೇಖಕಿಯರಿಗೆ ನಮ್ಮ ಪ್ರೀತಿಯ ಉಡುಗೊರೆಗಳನ್ನು ಕಳಿಸಲಾಗುತ್ತದೆ. ಉಡುಗೊರೆ ಗೆದ್ದವರಿಗೆ ಮತ್ತು ಲೇಖನ ಕಳಿಸಿದವರಿಗೆ ಅಭಿನಂದನೆ ಮತ್ತು ಧನ್ಯವಾದಗಳು. ನಮ್ಮ ನಿಮ್ಮ ಕನ್ನಡ ಪ್ರೀತಿ ಹೀಗೇ ಮುಂದುವರಿಯಲಿ.

ನಲ್ಮೆಯ ಓದುಗರಿಗೆ ಸಂಪಾದಕರ ಪ್ರೀತಿಯ ನುಡಿ


User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article