•  

ದಿ ಟೈಮ್ಸ್ ಆಫ್ ಇಂಡಿಯಾ ಪ್ರಕಟಣೆ ರದ್ದು!

ಗುರುವಾರ, ಮಾರ್ಚ್ 11, 2010, 15:28 [IST]
Kannada Times of India shut down
ನೀವು ನೋಡಿದ್ದಿರೋ, ಓದಿದ್ದೀರೋ ಅಥವಾ ಅದರ ಹೆಸರೇ ಕೇಳಿಲ್ಲವೋ ಹೇಳಲಾರೆವು. ಬೆನೆಟ್ ಕೋಲ್ ಮನ್ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾಗುತ್ತಿದ್ದ ಕನ್ನಡ ದಿನ ಪತ್ರಿಕೆಯೊಂದು ಮಾರುಕಟ್ಟೆಯಲ್ಲಿತ್ತು. 'ದಿ ಟೈಮ್ಸ್ ಆಫ್ ಇಂಡಿಯಾ' ಶೀರ್ಷಿಕೆಯಲ್ಲಿ ಚಲಾವಣೆಯಲ್ಲಿದ್ದ ಆ ಪತ್ರಿಕೆ ನಿನ್ನೆ, ಅಂದರೆ ಮಾರ್ಚ್ 10ರಿಂದ ತನ್ನ ಪ್ರಕಟಣೆಯನ್ನು ನಿಲ್ಲಿಸಿತು. ಇದರೊಂದಿಗೆ, ಟೈಮ್ಸ್ ಸಮೂಹದ ಕನ್ನಡ ದಿನಪತ್ರಿಕೆಯ ಒಂದು ಶೈಲಿಯ ಪ್ರಯೋಗ ಅಂತ್ಯಕಂಡಿತು.

ಹಿರಿಯ ಪತ್ರಕರ್ತ ಈಶ್ವರ ದೈತೋಟ ಅವರ ಸಂಪಾದಕತ್ವದಲ್ಲಿ ಇಂಗ್ಲಿಷ್ ಪತ್ರಿಕೆಯ [Times of India] ಕನ್ನಡ ರಿಮೇಕ್ 'ದಿ ಟೈಮ್ಸ್ ಆಫ್ ಇಂಡಿಯಾ' ಪ್ರಕಟವಾಗುತ್ತಿತ್ತು. 2007ರ ಜನವರಿಯಲ್ಲಿ ಆರಂಭವಾದ ಈ ಪ್ರಯತ್ನ ಮೂರು ವರ್ಷಗಳ ಕಾಲ ಉಳಕೊಂಡಿತ್ತು. ತೀರಿಕೊಂಡ ಪತ್ರಿಕೆಯಲ್ಲಿ ಅಕ್ಷರ ನೌಕರಿ ಮಾಡುತ್ತಿದ್ದ ಪತ್ರಕರ್ತರನ್ನು ಟೈಮ್ಸ್ ಬಳಗದಲ್ಲೇ ಉಳಿಸಿಕೊಂಡು ದುಡಿಸಿಕೊಳ್ಳುವ ಆಲೋಚನೆಗಳಿವೆ ಎಂದು ಗೊತ್ತಾಗಿದ್ದರೂ ಯಾವುದೇ ಖಾತರಿ ಇಲ್ಲ.

ಪತ್ರಿಕೆ ಮುಚ್ಚಲು ಕಾರಣ ಏನು ಎಂದು ನಾವು ಒತ್ತಿ ಹೇಳಬೇಕಾದ ಅಗತ್ಯ ಇಲ್ಲ. ಇಂಗ್ಲಿಷ್ ಟೈಮ್ಸ್ ವರದಿಗಳನ್ನು ಮಕ್ಕಿಕಾಮಕ್ಕಿ ಅನುವಾದ ಮಾಡಿ ಓದುಗರಿಗೆ, ಅದೂ, ಬೆಂಗಳೂರಿನ ಓದುಗರಿಗೆ ಉಣಬಡಿಸುತ್ತಿದ್ದುದು ಪತ್ರಿಕೆ ಫೇಲ್ ಆಗುವುದಕ್ಕೆ ಮುಖ್ಯ ಕಾರಣ. ತನ್ನದೇ ಆದ ಓದುಗರು, ತನ್ನದೇ ಆದ ಸಂಪಾದಕೀಯ ಧೋರಣೆ, ತನ್ನದೇ ಆದ ಜಾಹಿರಾತುದಾರರ ಜಾಲ ರೂಪಿಸಿಕೊಳ್ಳಲು ನಿರಾಕರಿಸಿದ ಪತ್ರಿಕಾ ಮಾಲಿಕರ ನಿಲುವಿನಿಂದಾಗಿ ಅವಸಾನ ಎದುರಾಯಿತು. ಕನ್ನಡ ಚಲನಚಿತ್ರ ಪ್ರಪಂಚದಲ್ಲಿ ರಿಮೇಕ್ ಚಿತ್ರಗಳು ಕೆಲವು ನಿರ್ಮಾಪಕರ ಜೇಬು ಭರ್ತಿ ಮಾಡುತ್ತಿರಬಹುದು. ಆದರೆ ಕನ್ನಡ ದಿನ ಪತ್ರಿಕೆ ವಿಚಾರದಲ್ಲಿ ಈ ಲಾಜಿಕ್ ಮ್ಯಾಜಿಕ್ ಮಾಡುವುದಿಲ್ಲ.

ಕನ್ನಡ 'ದಿ ಟೈಮ್ಸ್ ಆಫ್ ಇಂಡಿಯಾ' ತರಿಸುತ್ತಿದ್ದ ಮನೆಗಳಿಗೆ ಪತ್ರಿಕೆಯ ಜತೆಗೆ ಬೆನೆಟ್ ಕೋಲ್ ಮನ್ ಒಡೆತನದ ಇನ್ನೊಂದು ಪತ್ರಿಕೆ 'ವಿಜಯ ಕರ್ನಾಟಕ'ವನ್ನು ಮುಫತ್ ಆಗಿ ಕೊಡುವ ಪ್ರಸಾರ ಯೋಜನೆ ಕಳೆದ ವಾರ ಜಾರಿಯಲ್ಲಿತ್ತು. ಒಂದು ತೆಗೆದುಕೊಂಡರೆ ಇನ್ನೊಂದು ಉಡುಗೊರೆ ಆಫರ್ ನಿಂದಾಗಿ ಕೆಲವು ಚಂದಾದಾರರು ಚಕಿತಗೊಂಡರೂ ಉದ್ಯಮದಲ್ಲಿರುವವರಿಗೆ 'ಕನ್ನಡ ಟೈಮ್ಸ್ ' ಮುಚ್ಚಬಹುದು ಎಂಬ ಗುಮಾನಿ ಬಂದಿತ್ತು. ಏಕೆಂದರೆ, ಸೀರೆ ತೆಗೆದುಕೊಂಡರೆ ರವಿಕೆ ಫ್ರೀ ಕೊಡುವ ಆಫರ್ ನಂಬಬಹುದು. ಆದರೆ, ರವಿಕೆ ಖರೀದಿಸಿದರೆ ಸೀರೆ ಕೊಡುವ ಆಫರುಗಳನ್ನು ಗ್ರಾಹಕ ನಂಬುವುದು ಕಷ್ಟ.

User Comments
ಅವಿನಾಶ ಕನ್ನಮ್ಮನವರ 21 Mar 2010 08:08 pm
ಈ ಸುದ್ದೀ ಓದಿ ಭಾಳ ಖುಷೀ ಆತು,, ಬರೀ ಜಾಹೀರಾತಿಗೆ ಕೊಟ್ಟ ಇ೦ಪಾರ್ಟೆನ್ಸ್ ಸುದ್ದೀಗೂ ಕೊಟ್ಟದ್ರ ಈ ಪರಿಸ್ತಿತಿ ಬರ್ತಿದಿಲ್ಲ ಕಾಣಿಸ್ತದ,, ನಮ್ಮ ಹೆಮ್ಮೆಯ "ವಿಜಯ ಕನಾ೯ಟಕ" ನು ಸತ ಬರೀ ಜಾಹೀರಾತಿನಿ೦ದ ತು೦ಬಿಸಾಕತ್ತಾರ (ಟೈಮ್ಸಾಪ್ ಇ೦ಡಿಯಾದೋರು),, ಹಿ೦ಗ ಮು೦ದುವರಿತ೦ದ್ರ ಭಾಳ ಕಷ್ಟ ಆಕೆತಿ...
ಅಬ್ಬಾಸ್ ಗೌಡ 13 Mar 2010 09:54 pm
h t t p : / / k n . W I k I p e d I a . O r g / w I k I / % E0 % B2 % B5 % E0 % B2 % BE % E0 % B2 % A4 % E0 % B2 % BE % E0 % B3 % AF_ % E0 % B2 % AD % E0 % B2 % BE % E0 % B2 % B0 % E0 % B2 % A4 % E0 % B2 % BF
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Kings XI Punjab: 31 / 0, 3.2 Overs
1st Test , Lord's Cricket Ground, St John's Wood
West Indies: 83 / 2, 29 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article