•  

ಕೆಂಡಸಂಪಿಗೆ ಬ್ಲಾಗ್ ಪುನರಾರಂಭ

ಮಂಗಳವಾರ, ಜನವರಿ 5, 2010, 12:13 [IST]
Abdul Rasheed, Kendasampige editor (Courtesy : sotosay.wordpress.com)
ಕೆಲ ಕಾಲ ಸ್ಥಬ್ಧವಾಗಿದ್ದ ಕೆಂಡಸಂಪಿಗೆ ಕನ್ನಡ ಆನ್ ಲೈನ್ ಪುರವಣಿ ಮತ್ತೆ ಆರಂಭವಾಗುತ್ತಿದೆ. ಇದೇ ಸಂಕ್ರಾಂತಿ ಹಬ್ಬದ ದಿನ ಜನವರಿ 14ರ ಗುರುವಾರದಿಂದ ಸಂಪಿಗೆ ಪುನಃ ಪರಿಮಳ ಬೀರಲು ಸಜ್ಜಾಗಿದೆ ಎಂದು ಅಂತರ್ ಜಾಲ ತಾಣದ ಸಂಪಾದಕ ಅಬ್ದುಲ್ ರಶೀದ್ ಹೇಳಿದ್ದಾರೆ.

ವ್ಯಾಪಾರಿ ಉದ್ದೇಶವಿಲ್ಲದೆ ಕೇವಲ ಕನ್ನಡ ಬರಹಗಳ ಮಮತೆಯಿಂದ ಆರಂಭವಾದ ಪತ್ರಿಕೆ ಕೆಂಡಸಂಪಿಗೆ. ಅದೇ ಮಮತೆಯಿಂದಾಗಿಯೇ ಪ್ರಕಟಣೆಯನ್ನು ನಿಲ್ಲಿಸಬೇಕಾಗಿ ಬಂದ ಪತ್ರಿಕೆಯೂ ಹೌದು. ಈ ಆನ್ ಲೈನ್ ಪತ್ರಿಕೆಯನ್ನು ಹತ್ತಿರ ಹತ್ತಿರ ಎರಡುವರ್ಷ ನಡೆಸಿದ ಕನ್ನಡಧೀರ, ಉದ್ಯಮಿ ಶಶಿಕಿರಣ್ ಮುಳ್ಳೂರ್. ಅವರಿಗೆ ಮತ್ತು ಲೆಮನ್ ಟ್ರೀ ಮೀಡಿಯಾ ಪ್ರೈವೇಟ್ ಲಿಮಿಟೆಡ್ ತಂಡಕ್ಕೆ ಹೊಸ ವರ್ಷ 2010ರ ಹಾರ್ದಿಕ ಶುಭಾಶಯಗಳು.

ಮೂರು ಕಾಸು ಉತ್ಪತ್ತಿ ಇಲ್ಲದೆ ಕನ್ನಡ ಅಕ್ಷರ ಸೇವೆ ಮಾಡುವ ಶಶಿಕಿರಣ್ ಅವರ ಸಾಹಸ ಮೆಚ್ಚಬೇಕಾ ಬೇಡವಾ ನನಗಂತೂ ತಿಳಿಯದು. ಆದರೆ, ಕೆಂಡಸಂಪಿಗೆ ನಿಂತು ಹೋದದ್ದರಿಂದ ಅನೇಕ ಬರಹಗಾರರಿಗೆ, ಚಾರಣಿಗರಿಗೆ ನಿರಾಶೆ ಆಗಿದ್ದು ಅವರೆಲ್ಲರ ಒತ್ತಾಯದ ಮೇರೆಗೆ ಮತ್ತೆ ಪತ್ರಿಕೆ ಆರಂಭವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಆನ್ ಲೈನ್ ಪತ್ರಿಕೆಯ ಸಂಪಾದಕ ರಶೀದ್ ಅವರು ಭಾವಜೀವಿ ಮತ್ತು ಅಕ್ಷರ ಜೀವಿ. ಕಥೆ ಕವಿತೆ ಬರೆಯುವುದರಲ್ಲಿ ಪಳಗಿದ ಲೇಖನಿ. ಕೇಂದ್ರ ಸರಕಾರದ ಒಡೆತನದ ಆಕಾಶವಾಣಿ ಮಡಿಕೇರಿ ಕೇಂದ್ರದಲ್ಲಿ ಉದ್ಯೋಗ. ಸೇವಾ ನಿಯಮಗಳ ಪ್ರಕಾರ ಅವರು ಇನ್ನೊಂದು ಲಾಭದಾಯಕ ವೃತ್ತಿಯನ್ನು ಕೈಗೊಳ್ಳುವಂತಿಲ್ಲ. ಸರಕಾರಿ ನೌಕರಿಯ ಸಂಬಳ ಹೊರತುಪಡಿಸಿದರೆ ಕನ್ನಡ ಪತ್ರಿಕೋದ್ಯಮವನ್ನು ವಾಣಿಜ್ಯ ಉದ್ದೇಶಗಳೊಂದಿಗೆ ಸರಿದೂಗಿಸಿ ಪತ್ರಿಕೆ ಸ್ವಾವಲಂಬಿಯನ್ನಾಗಿಸುವ ಕೌಶಲ್ಯವನ್ನು ಅವರು ಪ್ರದರ್ಶಿಸುವಂತಿಲ್ಲ. ಅವರೇ ಒಪ್ಪಿಕೊಳ್ಳುವ ಪ್ರಕಾರ ಆ ವಿದ್ಯೆ ಅವರ ಜಾಯಮಾನಕ್ಕೆ ಒಗ್ಗಿಬರುವುದಿಲ್ಲ.

ಅಂತೂ ಕೆಂಡಸಂಪಿಗೆಯ ಸೆಕೆಂಡ್ ಇನಿಂಗ್ಸ್ ಆರಂಭವಾಗುತ್ತಿದೆ. ಅಕ್ಷರ ಸಮಾರಾಧನೆ ಆಗಲಿ. ಸೋಲು ಗೆಲುವಿನ ಪ್ರಶ್ನೆ ಬೇಕಿಲ್ಲ. ಪಂದ್ಯ ಡ್ರಾ ಆಗುತ್ತದೆಂಬ ಎಣಿಕೆಯಲ್ಲಿ ನಿಮ್ಮ ಇಂಟರ್ನೆಟ್ ವಿಶ್ವಾಸಿ, ಶಾಮ್. [ರಶೀದ್ ಅವರ ಭಾವಚಿತ್ರ ಕೃಪೆ sotosay.wordpress.com/]

User Comments
ನಾಗ್ರಾಜ್ ರಾವ್ 21 Jan 2010 10:32 am
ಭೈರಪ್ಪನವರನ್ನು ಟೀಕಿಸುವ ಒಂದಂಶದ ಅಜೆಂಡಾ ಹೊಂದಿರುವ ಗಬ್ ಸೈಟ್ ಮತ್ತೆ ಕ್ಯಾತೆ ಬರಹಗಳನ್ನು ಶುರು ಮಾಡಲಿದೆ ಒದ್ರಪ್ಪಾ ಓದ್ರಿ. ಜಾಯಿಂಟ್ಲಿ ಸ್ಪಾನ್ಸರ್ದ್ ಬೈ ಅಲ ಕೈದಾ - ಕೋ ಸೌ ವೇ
ದಟ್ಸ್ ಕನ್ನಡ 12 Jan 2010 04:46 pm
ಆಯ್ತು, ಸಂತೋಷ, ತೊಂದರೆ ಇಲ್ಲ. ಐ ಮೀನ್ ನೋ ಪ್ರಾಂಬ್ಸ್
[ ಅಭಿಪ್ರಾಯ ಬರೆಯಿರಿ ]
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article