•  

ಟ್ವಿಟ್ಟರ್.ಕಾಂನಲ್ಲಿ ದಟ್ಸ್ ಕನ್ನಡ

ಮಂಗಳವಾರ, ಡಿಸೆಂಬರ್ 30, 2008, 17:40 [IST]
Follow thatsKannada.com on Twitter
ಅಂತರ್ಜಾಲದ ಬೃಹತ್ ಮರದಲ್ಲಿ ಕುಳಿತು ಇನ್ನೊಂದು ಟೊಂಗೆಯಲ್ಲಿ ಕುಳಿತಿರುವ ಸ್ನೇಹಿತ, ಕುಟುಂಬದ ಸದಸ್ಯ, ಸಹೋದ್ಯೋಗಿಗಳೊಡನೆ ಉಭಯ ಕುಶಲೋಪರಿ ವಿಚಾರಿಸುವ, ನೀವೇನು ಮಾಡುತ್ತಿದ್ದೀರೆಂದು ತಿಳಿಸುವ ಉತ್ತಮ ವೇದಿಕೆ ಈಗ ಟ್ವಿಟ್ಟರ್.ಕಾಂನಲ್ಲಿ ಲಭ್ಯವಾಗಿದೆ. ಅತಿ ವೇಗವಾಗಿ ಬೆಳೆಯುತ್ತಿರುವ ಈ ಸೋಷಿಯಲ್ ನೆಟ್ವರ್ಕಿಂಗ್ ವೆಬ್ ಸೈಟ್ ನಲ್ಲಿ ಕುಳಿತಲ್ಲಿಂದಲೇ ವೆಬ್ ಜಗತ್ತಿನಲ್ಲಿ ಏನೇನಾಗುತ್ತಿದೆ ಎಂದು ಅಷ್ಟೇ ವೇಗವಾಗಿ ತಿಳಿಯಬಹುದು.

ಸಂತಸದ ಸಂಗತಿಯೆಂದರೆ, ನಿಮ್ಮ ಅಚ್ಚುಮೆಚ್ಚಿನ ಕನ್ನಡ ಪೋರ್ಟಲ್ ದಟ್ಸ್ ಕನ್ನಡ.ಕಾಂ ಕೂಡ ಟ್ವಿಟ್ಟರ್ ನಲ್ಲಿ ಲಭ್ಯವಿದೆ. ಪ್ರಾದೇಶಿಕ ಭಾಷಾ ಮಾಹಿತಿಯನ್ನು ಟ್ವಿಟ್ಟರ್.ಕಾಂನಲ್ಲಿ ನೀಡುವ ತಾಣಗಳಲ್ಲಿ ದಟ್ಸ್ ಕನ್ನಡವೇ ಮೊದಲಿನದು. ದಟ್ಸ್ ಕನ್ನಡದಲ್ಲಿ ಪ್ರಕಟವಾಗುವ ಮಾಹಿತಿ ಕಣಜವನ್ನು ಟ್ವಿಟ್ಟರ್ ನಲ್ಲಿ ನೋಡಲು ಕೆಳಕೊಂಡಿಗಳನ್ನು ಕ್ಲಿಕ್ಕಿಸಿ : http://www.twitter.com/thatsKannada

ದಟ್ಸ್ ಕನ್ನಡದಲ್ಲಿ ಪ್ರಕಟವಾಗುವ ಲೇಖನಗಳನ್ನು ಪಡೆಯಲು ಇಲ್ಲಿ ಎರಡು ವಿಧಗಳಿವೆ.

1) ಟ್ವಿಟ್ಟರ್ ಅಂತರ್ಜಾಲ ತಾಣದ ಮುಖಾಂತರ : ಟ್ವಿಟ್ಟರ್ ಅಂತರ್ಜಾಲ ತಾಣದಲ್ಲಿ ನೀವು ಖಾತೆ ತೆರೆದಿದ್ದರೆ ನೇರವಾಗಿ ದಟ್ಸ್ ಕನ್ನಡದಲ್ಲಿ ಪ್ರಕಟವಾಗುವ ಇತ್ತೀಚಿನ ಲೇಖನಗಳನ್ನು ಓದಬಹುದು. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೆ. ದಟ್ಸ್ ಕನ್ನಡ ಅಂತ ಹುಡುಕಿ twitter these results ಕ್ಲಿಕ್ಕಿಸಿದರೆ ದಟ್ಸ್ ಕನ್ನಡದ ಹೊಸ ಲೇಖನಗಳೆಲ್ಲವೂ ಟ್ವಿಟ್ಟರ್ ನಲ್ಲಿ ಲಭ್ಯ.

2) ಮೊಬೈಲ್ ಮುಖಾಂತರ : ಟ್ವಿಟ್ಟರ್ ತಾಣದಲ್ಲಿ ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿ ಉಚಿತವಾಗಿ ಎಸ್ಎಮ್ಎಸ್ ಪಡೆಯಬಹುದು.

ಟ್ವಿಟ್ಟರ್ ತಾಣದಲ್ಲಿ ದಟ್ಸ್ ಕನ್ನಡದ ಮಾಹಿತಿಯನ್ನು ಪಡೆಯುವುದು ಅತ್ಯಂತ ಸುಲಭ ಮತ್ತು ಸರಳ. ದಟ್ಸ್ ಕನ್ನಡದಲ್ಲಿ ಪ್ರಕಟವಾಗುತ್ತಿದ್ದಂತೆ ಟ್ವಿಟ್ಟರ್ ನಲ್ಲಿಯೂ ಈ ಲೇಖನಗಳು ಲಭ್ಯವಾಗಲಿವೆ. ಹೀಗಾಗಿ ಅನೇಕ ಓದುಗರು ಟ್ವಿಟ್ಟರ್ ಮೂಲಕ ದಟ್ಸ್ ಕನ್ನಡ ಓದಲು ಪ್ರಾರಂಭಿಸಿದ್ದಾರೆ.

User Comments
ಪ್ರದೀಪ್ 25 Mar 2010 12:33 am
ಥತ್ಸಕನ್ನದಕ್ಕೆ ನಮ್ಮೂರಿನ suddhi kalisodu hege..?
ಫಯಾಜ್ 24 Mar 2010 04:46 pm
ಸಂತೋಷದ ಸುದ್ದಿ.
[ ಅಭಿಪ್ರಾಯ ಬರೆಯಿರಿ ]
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article