ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಬಡಪಾಯಿ 'ಗಂಡ' ಕಾರ್ಮಿಕರ ದಿನಾಚರಣೆ!

By ಪ್ರಶಾಂತ ಕೆ. ಅಡೂರ, ಹುಬ್ಬಳ್ಳಿ
|
Google Oneindia Kannada News

ಇವತ್ತ ಮುಂಜಾನೆ (ನವೆಂಬರ್ 19), internation men's dayಕ್ಕ world worried husbands' associationದವರು ನನಗ ಮುಖ್ಯ ವಕ್ತಾರ ಅಂತ ಕರದಾಗ ನಾ ಅಲ್ಲೆ ಮಾತಾಡಿದ ಭಾಷಣ. ಹಂಗ ನಾ ಒಂದ ಸ್ವಲ್ಪ ಹೆಂಡ್ತಿನ್ನ ಜಾಸ್ತಿ ಟಾರ್ಗೆಟ್ ಮಾಡಿ ಬರೇತಿನಿ ಅಂತ ಅವರ ನನಗ ಚೀಫ್ ಗೆಸ್ಟ್ ಮಾಡಿದ್ದರು.

ನಾ ಅಲ್ಲೆ ಬರೇ ಗಂಡಸರು, ಅದರಾಗ ಗಂಡಂದರ ಜಾಸ್ತಿ ಇದ್ದದ್ದ ನೋಡಿ ಭಾಳ್ ಖುಷ್ ಆಗಿದ್ದೆ. ಅದರಾಗ ಟಾಪಿಕ್ ಬ್ಯಾರೆ woes of husbands' in wives world ಅಂತ ಇತ್ತ, ಇದರ ಬಗ್ಗೆ ಎಷ್ಟ ದುಃಖ ತೊಡ್ಕೊಂಡರು ಕಡಿಮಿನ ತಡಿ ಅಂತ ಅವರ ನನ್ನ ಹೆಸರ ಒದರೊ ಪುರಸತ್ತ ಇಲ್ಲದ ನನ್ನ ಭಾಷಣ ಶುರು ಮಾಡಿದೆ.

"ಬಂಧುಗಳೇ, ಇವತ್ತ ನಾವೆಲ್ಲಾ ಇಲ್ಲೆ ಯಾಕ ಸೆರೇವಿ ಅಂತ ನಿಮಗೇನ್ ನಾ ಹೇಳೊ ಅವಶ್ಯಕತೆ ಇಲ್ಲಾ, ಹಂಗ ನೀವೆಲ್ಲಾ ಇವತ್ತ ನಿಮ್ಮ ನಿಮ್ಮ ಹೆಂಡಂದರದ ಪರ್ಮಿಶನ್ ತೊಗೊಂಡs ಅಂತಾರಾಷ್ಟ್ರೀಯ ಪುರುಷರ ದಿನ ಕಾರ್ಯಕ್ರಮಕ್ಕ ಬಂದಿರಿ ಅಂತನೂ ನನಗ ಗೊತ್ತ. ಅದು ನಮ್ಮ ದುರ್ದೈವ. ಇವತ್ತ ಒಂದೊಂದ ಹೆಂಡತಿ ಕಟಗೊಂಡ ನಮಗ ಹಿಂತಾ ಕೆಟ್ಟ ಪರಿಸ್ಥಿತಿ ಯಾಕ ಬಂತ ಅನ್ನೋದ ಆ ಹದಿನಾರ ಸಾವಿರ ಹೆಂಡಂದರನ ಕಟಗೊಂಡ ಶ್ರೀಕೃಷ್ಣ ಪರಮಾತ್ಮಗ ಗೊತ್ತ.

Hello, world worried husbands!

ನನ್ನ ಪ್ರಕಾರ ಇದು international men's day ಅಲ್ಲಾ, ಇದನ್ನ ನಾವು ವಿಶ್ವ 'ಗಂಡ' ಕಾರ್ಮಿಕ ದಿನಾಚರಣೆ ಅಂತ ಆಚರಿಸಬೇಕು ಅಂತ ಅನಸ್ತದ. ಇವತ್ತ ಗಂಡಾ ಅನ್ನೊ ಪ್ರಾಣಿ ಹಗಲು ರಾತ್ರಿ ದುಡದ ದುಡದ ಬಡ ಕಾರ್ಮಿಕನಗಿಂತ ಕಡಿ ಆಗ್ಯಾನ ಅಂದರ ಅದು ಅತಿಶಯೋಕ್ತಿ ಆಗಲಾರದು...." ಜನಾ ಜೋರಾಗಿ ಕ್ಯಾಕಿ ಹಾಕಲಿಕತ್ತರು.

"ಇವತ್ತ ನಮ್ಮ ದೇಶದೊಳಗ ಅಲ್ಲಲ್ಲೇ ರೇಪ ನಡದಾಗ ಈಡಿ ದೇಶ ಒಂದಾಗಿ ಲಿಂಗ ಭೇದ ಮರತ ರೇಪ ವಿರುದ್ಧ ಉಗ್ರ ಪ್ರತಿಭಟನೆ ನಡಸತು. ಆದರ ನಮ್ಮ ದುರ್ದೈವಕ್ಕ ರೇಪ ಮಾಡಿದೊರೇಲ್ಲಾ ಗಂಡಸರ ಇದ್ದದ್ದಕ್ಕ ಇವತ್ತ ಸಮಸ್ತ ಸ್ತ್ರೀಕುಲಾ ಸಕಲ ಗಂಡಸರ ಪೀಳಿಗೆಯನ್ನ ರೇಪಿಸ್ಟರು ಅನ್ನೋ ಭಾವನೆ ಇಂದ ನೋಡ್ತದ, ಅದು ನಿಜವಾಗಿಯೂ ಖಂಡನೀಯ."

"ಹಂಗ ಇವತ್ತ ಸಮಾಜದಾಗ ಮಹಿಳಾ ಸಬಲೀಕರಣದ ಹೆಸರಿಲೆ ಪ್ರತಿದಿನ ಪುರುಷರ ಅತ್ಯಾಚಾರ ನಡಿಲಿಕತ್ತದ ಅಂತ ನನಗ ಅನಸ್ತದ, ಬಹುಶಃ ಅದಕ್ಕ ನಮಗ ಮರ್ದ (MARD - men are raped daily) ಅಂತಾರ. ನನಗಂತೂ ಇತ್ತೀಚಿಗೆ ಯಾವದು ಪರಸ್ಪರ ಒಪ್ಪಂದದ್ದು, ಯಾವದು ರೇಪ ಅನ್ನೋದ ಕನಫ್ಯೂಸ್ ಆಗಿ ಬಿಟ್ಟದ, ಅದರಾಗ ಒಂದಿಷ್ಟ ಫಾಲ್ಸ್ ರೇಪ ಸುದ್ದಿ ಕೇಳಿದ ಮ್ಯಾಲೆ ಅಂತು ಹೆಂಡ್ತಿ ಮೈ ಮುಟ್ಟಲಿಕ್ಕು ಮೈ ಜುಮ್ ಅಂತದ. ಈಗ ಹಿಂಗ ಆಗೇದಲಾ ಪ್ರತಿ ರಾತ್ರಿ ಬೆಡ್ ರೂಮಿಗೆ ಹೋಗಬೇಕಾರ ಒಂದ ಇಪ್ಪತ್ತ ರೂಪಾಯಿದ್ದ ಬಾಂಡ ಪೇಪರ್ ತೊಗೊಂಡ 'ಇದ consensual' ಅಂತ ಸಹಿ ಮಾಡಿಸಿಗೊಂಡ ಪಲ್ಲಂಗ ಹತ್ತೊ ಪ್ರಸಂಗ ಬಂದ ಬಿಟ್ಟದ" ಜನಾ ಜೋರಾಗಿ ನಗಲಿಕ್ಕೆ ಹತ್ತಿದರು.

"ಬಂಧುಗಳೆ ಇದು ನಗೋ ವಿಷಯ ಅಲ್ಲಾ, ಇನ್ನೊಂದ ಸ್ವಲ್ಪ ದಿವಸದಾಗ marital sex ಇದ್ದದ್ದ marital rape ಆಗಿ ಅದು ಐಪಿಸಿ ಸೆಕ್ಷನ್ ಒಳಗ ಹೋತಂದರ ನಾವೆಲ್ಲಾ ಮುಂದಿನ ವರ್ಷ ಅಂತಾರಾಷ್ಟ್ರೀಯ ಪುರುಷರ ದಿನ ಪರಪ್ಪನ ಅಗ್ರಹಾರದಾಗ ಮಾಡೊ ಪ್ರಸಂಗ ಬಂದರು ಬರಬಹುದು" ಅಷ್ಟರಾಗ ನನ್ನ ಫೋನ 'ಹಾಯಾಗಿ ಮಲಗಿರು ನೀನು ರಾಣಿಯ ಹಾಗೆ, ಮಹಾರಾಣಿಯ ಹಾಗೆ, ಎಲ್ಲಾ ಕೆಲಸಾ ಮಾಡಿ ಮುಗಿಸುವೆ..ಪರರಂ..ಪಂ'ಅಂತ ಹೋಯ್ಕೊಳ್ಳಿಕತ್ತ. ನಾ ಕಿಸೆದಾಗ ಕೈಹಾಕಿ ಕಟ್ ಮಾಡಿ ನನ್ನ ಭಾಷಣ ಕಂಟಿನ್ಯು ಮಾಡಿದೆ.

"ಇವತ್ತ ಗಂಡ ಜಾತಿ ವಿರುದ್ಧ ನಮ್ಮ ಸರ್ಕಾರ ಸೆಕ್ಶುವಲ್ ಹರಾಸ್ಮೆಂಟ್ ಆನ್ ವುಮೆನ್ ಅಟ್ ವರ್ಕ್ ಪ್ಲೇಸ್, ಐಪಿಸಿ 498ಎ (ವರದಕ್ಷಿಣೆ ವಿರೋಧಿ), ಐಪಿಸಿ 376 (ಅತ್ಯಾಚಾರ), ಡೊಮೆಸ್ಟಿಕ್ ವಯೋಲೆನ್ಸ್ ಆಕ್ಟ್, ವುಮೆನ್ಸ್ ರೈಟ್ ಟು ಮ್ಯಾರೈಟಲ್ ಪ್ರಾಪರ್ಟಿ ಬಿಲ್ ಅಂತ ಒಂದ ಎರಡ ನೂರಾ ಎಂಟ ಪುರುಷ ವಿರೋಧಿ ಕಾನೂನ ಮಾಡ್ಯಾರ. ಇನ್ನೊಂದ ಸ್ವಲ್ಪ ದಿವಸಕ್ಕ 'ಸ್ಯಾಲರಿ ಫಾರ್ ವೈವ್ಸ್ ಬಿಲ್' ಒಂದ ಬರೋದದ. ಇವನ್ನೆಲ್ಲಾ ನೋಡಿ ಬಿಟ್ಟರ feminism is male genocide ಅಂತಾರಲಾ ಅದ ಗ್ಯಾರಂಟಿ ಅನಸಲಿಕತ್ತದ."

ಜನಾ ಮತ್ತ ಚಪ್ಪಾಳೆ ತಟ್ಟಲಿಕತ್ತರು. ಇತ್ತಲಾಗ ನನ್ನ ಫೋನ ಮತ್ತ ರಿಂಗ ಆಗಿ 'ಹಾಯಾಗಿ ಮಲಗಿರು ನೀನು ಮಹಾರಾಣಿಯ ಹಾಗೆ' ಅಂತ ಒದರಲಿಕತ್ತ. ನಾ ಫೋನ ಎತ್ತಿ ಯಾರದು ಅಂತ ನೋಡಿದರ ಅದ ನನ್ನ ಹೆಂಡತಿದ ಇತ್ತ, ಅರ್ರೆ... ಬಾಪರೆ ಇಕಿ ಯಾಕ ಫೊನ ಮಾಡಿದ್ಲು, ಯಾರೊ ನನ್ನ ಭಾಷಣಾ ಲೈವ ಸ್ಟ್ರೀಮಿಂಗ ಮಾಡಲಿಕತ್ತಿರಬೇಕ ತಡಿ ಅಂತ ಫೋನ್ ಕಟ್ ಮಾಡಿದೆ.

"ಬಂಧುಗಳೆ ಹಿಂಗಾಗಿ ಇವತ್ತ ನಮ್ಮ ದೇಶದಾಗ ಎಂಟ ನಿಮಿಷಕ್ಕ ಒಬ್ಬ ಗಂಡ ಆತ್ಮಹತ್ಯೆ ಮಾಡ್ಕೊಳ್ಳಿಕತ್ತಾನ, ದಿವಸಕ್ಕ ಎರಡನೂರ ಗಂಡಂದರ ಆತ್ಮಹತ್ಯೆ ಮಾಡ್ಕೊಂಡ ಸಾಯಿಲಿಕತ್ತಾರ. ಇದರ ಅರ್ಥ ನಾವ ಹೆದರಬೇಕು ಅಂತ ಅಲ್ಲಾ, ಇದರ ವಿರುದ್ಧ ಹೋರಾಡಬೇಕು ಅನ್ನೋದನ್ನ ಮರಿ ಬ್ಯಾಡರಿ, ಮನಿಗೆ ಹೋಗಿ ಹೆಂಡ್ತಿ ಸೀರಿ ಒಳಗ ಹೊಕ್ಕಂಡ ಕೂಡಲೇ ನಾ ಹೇಳಿದ್ದನ್ನ ಮರಿಬ್ಯಾಡರಿ ಮತ್ತ...." ಅಂತ ಹೇಳಿದವನ ನನ್ನ ಭಾಷಣಾ ಅಷ್ಟಕ್ಕ ಮುಗಿಸಿ ಇಮ್ಮಿಡಿಯೇಟ್ ನನ್ನ ಹೆಂಡತಿಗೆ ಫೋನ್ ಮಾಡಿ...

"ಬಂದೆ, ಬಂದೆ, ಸಾರಿ.. ಸಾರಿ.. ಏ ಮುಗಿತ.... ಬಂದ ಬಿಟ್ಟೆ" ಅಂತ ಅಂದ ಫೋನ ಇಟ್ಟೆ.

ಅದೇನ ಆಗಿತ್ತಂದರ ನಾ ಎಲ್ಲೆ ಕಾರ್ಯಕ್ರಮಕ್ಕ ಗೆಸ್ಟ ಅಂತ ಹೊಂಟರು ನನ್ನ ಹೆಂಡತಿ ಬಾಲಂಗಸಿಗತೆ ನನ್ನ ಜೊತಿ ಯಾವಾಗಲೂ ಬರೋಕಿ, ಅಕಿಗೆ ನೀ ಈ ಕಾರ್ಯಕ್ರಮಕ್ಕ ಬರಬ್ಯಾಡಾ, ಇದ ಗಂಡಸರ ಕಾರ್ಯಕ್ರಮ ಅದರಾಗು exclusively ಗಂಡಂದರ ಕಾರ್ಯಕ್ರಮ, ಹಂತಾದರಾಗ ನೀ ಮುಂದ ಕೂತರ ನಂಗ ಮಾತಾಡಲಿಕ್ಕೆ ಧೈರ್ಯ ಬರಂಗಿಲ್ಲಾ ಅಂತ ರಮಿಸಿ ಹೇಳೋದರಾಗ ನಂಗ ಸಾಕ ಸಾಕಾಗಿ ಹೋಗಿತ್ತ.

ಹಂಗ ಅಕಿ "ಲಗೂನ ಬರ್ರಿ, ಬರಬೇಕಾರ ಸಂತಿ ತೊಗೊಂಡ ಬರ್ರಿ, ದಾರಿ ಒಳಗ ಆ ಟೇಲರ ಕಡೆ ಬ್ಲೌಸ್ ಹೊಲೀಲಿಕ್ಕೆ ಕೊಟ್ಟೇನಿ ಅದನ್ನ ತೊಗೊಂಡ ಬರ್ರಿ" ಅಂತ ಬ್ಯಾರೆ ಹೇಳಿದ್ಲು. ಹಿಂಗಾಗಿ ಅಕಿ ಒಂದ ಹತ್ತ ಸರತೆ ಫಾಲೊ ಅಪ್ ಮಾಡಿಲಿಕ್ಕೆ ಫೋನ ಮಾಡಿದ್ಲು ಪಾಪ, ಇನ್ನ ನಾ ಲಗೂನ ಹೋಗಲಿಲ್ಲಾಂದರ ಮುಗದ ಹೋತ, ಕನ್ಸೆಶುವಲ್ ಸೆಕ್ಸ್ ಒಂದ ವಾರ ಮರತ ಬಿಡೋದ ಅಂತ ಅಲ್ಲಿಂದ ಕಾಲಕಿತ್ತೀದೆ.

English summary
Hello, world worried husbands! Have you taken permission from your wife to celebrate World (International) Men's Day? If not please get back to your home, take permission and read this humorous write up by Prashant Adur, Hubli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X