ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಮಂ ಸಹಾಯಕನ ಬ್ರಿಲಿಯಂಟ್ ಐಡಿಯಾ : ಕೇಶ ಭಾಗ್ಯ

By ಚಾರುಕೇಶ, ವರ್ಜಿನಿಯ, ಅಮೇರಿಕ
|
Google Oneindia Kannada News

ಮುಖ್ಯಮಂತ್ರಿಗಳು ಸೀಲಿಂಗ್ ನೋಡುತ್ತ ಚಿಂತಿಸುತ್ತಿದ್ದರು, ಆಗ ಅವರ ಆಪ್ತ ಸಹಾಯಕ ಕೇಶ್ ಗುಪ್ತ ಕಚೇರಿ ಒಳಬಂದರು.

"ಏನ್ ಸಾರ್, ಡೀಪ್ ಥಿಂಕಿಂಗೂ.."

"ಅದೇರೀ, ಶಾದಿ ಭಾಗ್ಯ"

"ಅದು ಅಯ್ತಲ್ಲಾ ಸಾರ್"

"ಅದು ಸರಿ, ಆದ್ರೂ ಎನೋ ಮಿಸ್ಸಿಂಗೂ, ಎಲ್ಲೋ ಮೆಜಾರಿಟಿ ಜನನ್ನ ಮರೆತಿದೀವಿ ಅನ್ನಿಸ್ತಾಯಿದೆ"

"ನನಗೂ ಹಂಗೆ ಅನ್ನಿಸ್ತಾಯಿದೆ, ಸಾರ್, ಒಂದು ಕ್ಯಾಬಿನೆಟ್ ಮೀಟಿಂಗ್ ಕರೀಲಾ, ಬ್ರೇನ್ ಸ್ಟಾರ್ಮ್ ಮಾಡಬೋದು"

"ರಾಜಕಾರಿಣಿಗಳಿಗೆ ಬ್ರೇನ್ ಎಲ್ಲಿ ಇರತ್ತ್ರಿ ಸ್ಟಾರ್ಮ್ ಮಾಡಕ್ಕೆ" ಅಂದರು ಮುಖ್ಯಮಂತ್ರಿ.

"ಆಹ್ " ಹೆದರಿದ ಅಸಹಾಯಕ(ಆಪ್ತ ಸಹಾಯಕ)

"ಜೋಕ್ ರಿ, ಹೆದರಬೇಡಿ!. ಗುಡ್ ಐಡಿಯಾ! ಇವತ್ತೇ ಸಂಜೆ ಕರೀರಿ"

Brilliant idea to attract voters

ಸಚಿವರೆಲ್ಲಾ ಬಂದು ಸೇರಿದರು, ಗುಜು ಗುಜು ಗಲಾಟೆ.

ಮುಖ್ಯಮಂತ್ರಿಗಳು ಶುರುಮಾಡಿದರು. "ಚುನಾವಣೆ ಹತ್ತಿರ ಬರ್ತಾಯಿದೆ, ಎಲ್ಲಾ ಧರ್ಮ, ಜಾತಿಯ ಜನರನ್ನ ಆಕರ್ಷಿಸುವ ಒಂದು ಭಾಗ್ಯ ಮಾಡಬೇಕು, ಎದುರಾಳಿಗಳನ್ನು ಧೂಳಿಪಟ ಮಾಡಬೇಕು, ಯೋಚನೆ ಮಾಡಿ."

"ಹೌದು, ಹೌದು" ಎಲ್ಲಾರು ತಲೆ ಕೆರೆಯಲು ಶುರು ಮಾಡಿದರು, ತೋಚಿದ್ದು ಹೇಳಿದರು. ಇನ್ನೊಬ್ಬರು ಅದನ್ನು ತಳ್ಳಿಹಾಕಿದರು.

ಎರಡು ಗಂಟೆ ಆಯಿತು, ಯಾವುದೇ ಹೊಸ ಐಡಿಯಾಗಳು ಹೊರಬರಲೇ ಇಲ್ಲ.

ಆಪ್ತ ಸಹಾಯಕ ಕೇಶ್ ಗುಪ್ತ ಎದ್ದು ನಿಂತು ಬೋಳು ತಲೆ ಸವರುತ್ತಾ ಶುರುಮಾಡಿದರು. "ನಾವು ಮದ್ಯಮ ವರ್ಗದವರನ್ನು ಟಾರ್ಗೆಟ್ ಮಾಡಬೇಕು"

ಎಲ್ಲರೂ "ಹೌದು, ಹೌದು"

ಕೇಶ್ ಗುಪ್ತ ಮುಂದುವರೆದು - "ಈಗಿನ ಮದ್ಯಮ ವರ್ಗ ಮುಕ್ಕಾಲುವಾಸಿ ಮಾಡೋ ಕೆಲಸ - ಐಟಿ. ನೀವೇ ನೋಡಿದಹಾಗೆ, ಈ ಐಟಿ ಜನಕ್ಕೆ ಕೆಲಸ ಜಾಸ್ತಿ, ಅದರಲ್ಲೂ ಅವೇಳೆಯಲ್ಲೇ ಕೆಲಸ. ಒಂದೊಂದು ದೇಶದಲ್ಲಿ, ಒಂದೊಂದು ಟೈಮು. ಡೆಡ್ ಲೈನ್, ಕ್ರಂಚ್ ಟೈಮ್, ಸ್ಲೋಡೌನ್ ಮಣ್ಣು ಮಸಿ ಅಂತ ಯುವ ಐಟಿ ತಲೆ ಗೊಬ್ರ ಆಗಿದೆ, ಆದ್ರೆ... ತಲೇಲಿ ಕೂದಲು ಮಾತ್ರ ಇಲ್ಲ, ಎಲ್ಲರಿಗು premature baldness. ಇನ್ನೊಂದು ವಿಷಯಾಂದ್ರೆ, ಹುಡುಗೀರು ಕಮ್ಮಿಯಾಗಿ ಮದ್ವೆ ಲೇಟೂ, ಡಬಲ್ ಸ್ಪಿನ್ ಅಟ್ಯಾಕ್ ಅಂತಾರಲ್ಲಾ ಹಂಗೆ. ನಾವು ಈ ಪರಿಸ್ಥಿತಿಯನ್ನ ನಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳಬೇಕು."

ತಕ್ಷಣ ಅಬಕಾರಿ ಸಚಿವರು "ಸಾರ್, ಎಲ್ಲಾರ್ಗು ಅನೂಪ್ ಹೇರ್ ಆಯಿಲ್ ಕೊಟ್ರೆ?"

ಮುಖ್ಯಮಂತ್ರಿಗಳು "ಐಡಿಯ ಚೆನ್ನಾಗಿದೆ, ಆದ್ರೆ ರೆಗ್ಯೂಲರ್ ಸಪ್ಲೈ ಮಾಡಬೇಕು, ಎಣ್ಣೆ ಹಚ್ಕೊತಾರಾ ಅಂತ ಫಾಲೋಅಪ್ ಮಾಡಬೇಕು, ಕಷ್ಟ ಕಷ್ಟ ಕಷ್ಟ..."

ಕಂದಾಯ ಸಚಿವರು "ಸಾರ್, ಹೊಸ ಇಂಗ್ಲಿಷ್ ಮೆಡಿಸಿನ್ ಬಂದಿದೆ, ಒಳ್ಳೆ ಫೀಡ್ ಬ್ಯಾಕ್ ಇದೆ" ಎಂದರು ತಲೆ ಸವರಿಕೊಳ್ಳುತ್ತಾ.

ಮುಖ್ಯಮಂತ್ರಿಗಳು "ಬೇಡಾರಿ, ದುಡ್ಡು ಜಾಸ್ತಿ ಇರತ್ತೆ, ಮತ್ತೆ ಸೈಡ್ ಎಫೆಕ್ಟ್ಸ್ ಬೇರೆ, ಈವಾಗ ಓಟು ಬಂದ್ರೂ, ಮುಂದೆ ಕಷ್ಟ."

ನೀರಾವರಿ ಸಚಿವರು "ಸಾರ್, ಹೊಮಿಯೊಪತಿ?"

ಆರೋಗ್ಯ ಸಚಿವರು "ಬೇಡ ಸಾರ್, ದಿನಕ್ಕೆ ನಾಕಸತಿ ಪುಡಿ ತೆಗೊಬೇಕು, ಎರಡು ದಿನ ಮರೆತ್ರೆ, ಜೋಬೆಲ್ಲಾ ಪೊಟ್ಟಣ ಆಗಿ ಎನ್ ಮಾಡಬೇಕು ಅಂತ ಗೊತ್ತಾಗಲ್ಲ" (ಸ್ವಾನುಭವ..)

ಮುಖ್ಯಮಂತ್ರಿಗಳು "ಎನ್ರೀ ಇದು, ಬೆಣ್ಣೆಲಿ ಕೂದಲು ತೆಗೆದಹಾಗೆ ಆಗುತ್ತೆ ಅಂದ್ರೆ, ಸಿಕ್ಕಾಗ್ತಾಯಿದೆಯಲ್ಲ?"

ಕೇಶ್ ಗುಪ್ತ ಎದ್ದು "ಸಾರ್, ಎಲ್ಲಾರ್ಗು ವಿಗ್ ಕೊಡಣ - ಈ ಪ್ರೋಗ್ರಾಂಗೆ ಕೇಶಭಾಗ್ಯ ಅಂತ ಹೆಸರಿಡೋಣ"

ಮುಖ್ಯಮಂತ್ರಿಗಳು ದಬಕ್ಕನೆ ಎದ್ದರು - "ಬ್ರಿಲಿಯಂಟ್ ಕೇಶ್! One time giving! Immediate results! Satisfied voters! No followup! WOW! ಎಲ್ಲಿಇಟ್ಟಿದ್ರೀ ಇಂಥಾ ತಲೆ!"

ಮುಜರಾಯಿ ಸಚಿವರು - "ಸಾರ್, ಇಗ್ಲೇ ತಿರುಪತಿಗೆ ಕಾಲ್ ಮಾಡಿ ಕೂದಲು ಬುಕ್ ಮಾಡಬೇಕು."

"ಸಾರ್, ನಮ್ಮ ಅಳಿಯಂಗೆ wig ಕಾಂಟ್ರಾಕ್ಟ್ ಕೊಡಬೇಕು" ಅಂದ್ರು ಯಾರೊ.

"ಸಾರ್, ಹೆಲ್ಮೆಟ್ ಮೇಲೆ wig ಹಾಕಿದ್ರೆ two wheeler driversನೂ attract ಮಾಡಬಹುದು" ಅಂದ್ರು ನಗರಭಿವೃದ್ದಿ ಸಚಿವರು.

ಮುಖ್ಯಮಂತ್ರಿಗಳು - "ಸೈಲೆನ್ಸ್! let us keep things simple. upgrades ಮುಂದೆ ಮಾಡಣ."

"ಕೇಶ ಭಾಗ್ಯ ಇದರ ಹೆಸರು, let us start, victory be with us."

English summary
Chief Minister's assistance gives brilliant idea to attract all sects of people in the society, keeping election in mind. That was none other than wig to all the bald people. Political satire by Charukesha, Virginia, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X