•  

ಬೆಂಗ್ಳೂರಿನ ಗುಟ್ಟು ಬಾನುಲಿಯಲಿ ರಟ್ಟು

ಬುಧವಾರ, ನವೆಂಬರ್ 21, 2007, 15:39 [IST]

column Enguruಇತ್ತೀಚಿನ ಬಾನುಲಿ ಕೇಳುಗರ ಸಮೀಕ್ಷೆಯಲ್ಲಿ ಬೆಂಗಳೂರಲ್ಲಿ ಮೂಂಚೂಣಿಯಲ್ಲಿರೋ ಎಫ್ ಎಂ ವಾಹಿನಿಗಳ ಪಟ್ಟಿ ಬಿಡುಗಡೆ ಆಗಿದೆ. ಹೆಚ್ಚಾಗಿ ಕನ್ನಡದಲ್ಲೇ ಪ್ರಸಾರ ಮಾಡೋ ಬಿಗ್ ಎಫ್.ಎಂ., ರೇಡಿಯೋ ಮಿರ್ಚಿ, ಎಸ್ ಎಫ್.ಎಂ. ಮತ್ತು ರೇಡಿಯೋ ಒನ್ - ಇವುಗಳು ಈ ಪಟ್ಟೀಲಿ ಪ್ರಮುಖ ಸ್ಥಾನದಲ್ಲಿದ್ದು ಬೆಂಗಳೂರಲ್ಲಿ ಕನ್ನಡಿಗ ಕೇಳುಗರೇ ಹೆಚ್ಚಿನ ಸಂಖ್ಯೆಯಲ್ಲಿರೋದು ಅನ್ನೋದು ಇದರಿಂದ ಸ್ಪಷ್ಟವಾಗಿ ಹೊರಗೆ ಬಂದಿದೆ. ಬೆಂಗ್ಳೂರಲ್ಲಿ ಕನ್ನಡಿಗರು ಇಲ್ಲವೇ ಇಲ್ಲ, ಇರೋರೂ ಕನ್ನಡದ ಹಾಡು ಕೇಳಲ್ಲ ಅಂತ ಅನ್ಕೊಂಡಿರೋರ ಮುಖಕ್ಕೆ ಈ ಪಟ್ಟಿ ಮಂಗಳಾರತಿ ಎತ್ತಿದೆ ಗುರು!

ಈ ಸಮೀಕ್ಷೆಯಲ್ಲಿ ಬೆಂಗಳೂರಿನ ಮನೆ ಮಾತಾಗಿರುವ ಆಕಾಶವಾಣಿ ಕೇಳುಗರ ಗಣನೆಗೆ ತೊಗೊಂಡಿಲ್ಲ ಅನ್ನೋದನ್ನ ಮರೀಬೇಡಿ! ಇವರನ್ನೂ ಸೇರಿಸಿಕೊಂಡರೆ ಶೇಕಡ 90ಕ್ಕೂ ಹೆಚ್ಚು ಬಾನುಲಿ ಕಾರ್ಯಕ್ರಮ ಕೇಳುಗರು ಕನ್ನಡ ಪ್ರಸಾರ ಮಾಡುವ ಬಾನುಲಿ ವಾಹಿನಿಗಳ ಜೊತೆಗೇ ಇರೋದು ಅನ್ನೋ ಅಂಕಿ-ಅಂಶ ಹೊರಗೆ ಬರತ್ತೆ.

ಈ ವಿವರಗಳು ಸಾರಿ ಸಾರಿ ಹೇಳ್ತಿರೋದು ಬೆಂಗಳೂರಲ್ಲಿ ಇರೋ ಮಾರುಕಟ್ಟೆ ಕನ್ನಡದ್ದು ಅನ್ನೋದನ್ನೇ. ಹಿಂದಿ ಹಾಡುಗಳ್ನ ಪ್ರಸಾರ ಮಾಡ್ಕೊಂಡು ಶುರುವಾಗಿದ್ದ ರೇಡಿಯೋ ಮಿರ್ಚಿಗೆ ರಂಗು ಬಂದಿದ್ದು ಅವರು ಕನ್ನಡದ ಮಾರುಕಟ್ಟೇನ ಅರ್ಥ ಮಾಡ್ಕೊಂಡ ಮೇಲೆ ಮಾತ್ರ ಅಂತ ಈಗಾಗ್ಲೇ ತೋರಿಸಿಕೊಟ್ಟಾಗಿದೆ.

ಇನ್ನು ಕನ್ನಡ ಕಡೆಗಣಿಸಿರೋ "ರೇಡಿಯೋ ಸಿಟಿ" ನ ಇಡೀ ಸಿಟೀನೇ ಕಡೆಗಣಿಸಿದೆ ಅನ್ನೋದೂ ಇದೇ ಸಮೀಕ್ಷೆಯಿಂದ ಹೊರಕ್ಕೆ ಬಂದಿದೆ. ಹಿಂದಿ ಜ್ವರ ಹತ್ತಿರೋ ಫೀವರ್ ಎಫ್. ಎಂ. ಗಂತೂ ಆ ಜ್ವರದಿಂದ ಲಕ್ವಾ ಹೊಡೆಯೋ ಮುಂಚೆ ಕನ್ನಡದ ಮಾತ್ರೆ ತೊಗೊಂಡು ಚೇತರಿಸಿಕೊಳ್ಳಬೇಕು ಅನ್ನೋ ಉಪದೇಶಾನ ಈ ಸಮೀಕ್ಷೆ ಬಿಟ್ಟಿಯಾಗಿ ಕೊಟ್ಟಿದೆ! ಬುದ್ಧಿವಂತ್ರು ಅರ್ಥ ಮಾಡ್ಕೋಬೇಕು, ಅಷ್ಟೆ.

ವಾಹಿನಿಗಳಲ್ಲಿ ಹಿಂದೀಲಿ, ಇಂಗ್ಲೀಷಲ್ಲಿ ಜಾಹೀರಾತು ಕೊಟ್ಟಿರೋನಿಗೆ ಯಾಕೆ ನಾನಿನ್ನೂ ಬೆಂಗಳೂರಲ್ಲಿ ಹೆಚ್ಚು ವ್ಯಾಪಾರ ಮಾಡಕ್ಕಾಗಿಲ್ಲ ಅಂತ ನಿದ್ದೆ ಬರದೇ ಇರಬಹುದು. ಅವನಿಗೂ ಈ ಸಮೀಕ್ಷೆಯಲ್ಲೇ ಪಾಠ ಇದೆ. ಬುದ್ದಿವಂತನಾದೋನು ಆ ಪಾಠ ಕಲ್ತು, ಕನ್ನಡದಲ್ಲೇ ಜಾಹೀರಾತುಗಳ್ನ ಮಾಡಿ ತನ್ನ ವ್ಯಾಪಾರ ಹೆಚ್ಚುಸ್ಕೋತಾನೆ. ಈ ಬುದ್ಧಿವಂತಿಕೆ ತೋರಿಸೋರೂ ಸಕ್ಕತ್ ಜನ ಇದಾರೆ, ಇಲ್ಲದೆಯೇನಿಲ್ಲ. ಅವರು ಮಾರುಕಟ್ಟೇಲಿ ಹೆಚ್ಚುಹೆಚ್ಚು ಜನರನ್ನ ಮುಟ್ತಾರೆ, ಪೆದ್ದರು ಸೋಲ್ತಾರೆ, ಅಷ್ಟೆ.

ಇದೆಲ್ಲಾ ಓದುದ್ರೆ ಬೆಂಗ್ಳೂರಲ್ಲಿ ಮತ್ತೊಮ್ಮೆ ಕನ್ನಡಿಗರ ಸಂಖ್ಯೆ ಹೆಚ್ತಾ ಇದೆ ಅಂತ ಯಾರಿಗಾದರೂ ಅನ್ನಿಸಬಹುದು. ಆದ್ರೆ ನಿಜಾಂಶ ಏನಪ್ಪಾ ಅಂದ್ರೆ - ಆ ಪ್ರಾಬಲ್ಯ ಹೋಗೇ ಇರಲಿಲ್ಲ. ಹೋದಂಗೆ ಮಾಧ್ಯಮಗಳು ಮಾಡಿದ್ವು, ಅಷ್ಟೆನೆಯಾ.

( ಸ್ನೇಹ ಸೇತು : ಏನ್ ಗುರು ? )
User Comments
ಆನಂದ್ 22 Nov 2007 07:22 pm
ಖಾಸಗಿ ಚಾನೆಲ್ ಗಳು ಕನ್ನಡ ಹಾಡುಗಳ ಪ್ರಸಾರ ಮಾಡಲು ಮುಂದಾಗಿದ್ದರಿಂದ ಕನ್ನಡ ಚಿತ್ರರಂಗ ಪ್ರಕಾಶಿಸಿದ್ದೂ ನಿಜ,ಅದೇ ರೀತಿಯಲ್ಲಿ ಕನ್ನಡ ಹಾಡುಗಳನ್ನು ಪ್ರಸಾರ ಮಾಡುವ ಮೂಲಕ ಎಫ್.ಎಂಗಳು ಯಶಸ್ವಿಯಾಗಿದ್ದೂ ನಿಜ. ಇದೊಂಥರಾ ಇಬ್ಬರು ನಡೆಯಲಾಗದವರು ಒಬ್ಬರಿಗೊಬ್ಬರು ಆಸರೆಯಾಗುವ ಮೂಲಕ ನೂರಾರು ಮೈಲಿ ಸಾಗಿದ ಕಥೆಯಂತೆ. ಹೊಂದಾಣಿಕೆಯ ಈ ಪಯಣದಲ್ಲಿ ಕೊನೆಗೆ ಗೆದ್ದಿರೋದು ಕನ್ನಡ ಮತ್ತು ಕನ್ನಡಿಗರು.ಇಂದಿನ ಈ ಸ್ಥಿತಿಗೆ ಕಾರಣರಾದ ಸಂಘಟನೆಗಳಿಗೆ ಸಾವಿರ ಸಲಾಮು. ನಾವು ಇದರಿಂದ ಕಲಿಯಬೇಕಾದ್ದು ಒಂದಿದೆ, ಒಗ್ಗಟ್ಟಾದರೆ ಸಾಧಿಸುವುದು ಸುಲಭ. ಸಂಘಟಿತರಾಗುವುದೊಂದೇ ಕನ್ನಡಿಗರ ಎಲ್ಲ ಸಮಸ್ಯೆಗಳ ಪರಿಹಾರ ಮತ್ತು ಏಳಿಗೆಯ ಏಣಿ. ಕನ್ನಡ ಬಾಳಲಿ, ಕನ್ನಡ ಆಳಲಿ, ಕನ್ನಡ ಬಾಳಲಿ.
gururaj K 22 Nov 2007 11:17 am
ನಿಜಕ್ಕೂ ಸ೦ತೋಷ ಅವರ ಮಾತನ್ನು ಒಪ್ಪಿಕೊಳ್ಳಬೇಕು.ಮು೦ಗಾರುಮಳೆ ಚಿತ್ರ ಮತ್ತು ಅದರ ಸ೦ಗೀತದ ಗೆಲುವಿನ ನ೦ತರ ಕನ್ನಡದಲ್ಲಿ ಮಧುರವಾದ ಸ೦ಗೀತದ ಅಲೆ ಬೀಸತೊಡಗಿತು.ಅದಕ್ಕೂ ಮೊದಲು ಬರುತ್ತಿದ್ದ ಅಸಭ್ಯ,ಅರ್ಥಹೀನ ಕೇವಲ ತಮಾಶೆಗಾಗಿ ಕೇಳಲ್ಪಡುವ ಹಾಡುಗಳು ನಿ೦ತುಹೋಗಿ ಅರ್ಥಗರ್ಭಿತ ಕಿವಿಗೆ ತ೦ಪೆನಿಸುವ೦ತಹ ಮಾಧುರ್ಯಪ್ರಧಾನ ಹಾಡುಗಳು ಕನ್ನಡದಲ್ಲಿ ಬರತೊಡಗಿದವು.ಅದಕ್ಕೇ ’ಚೆಲುವಿನ ಚಿತ್ತಾರ’,’ಹುಡುಗಾಟ’,’ಗೆಳೆಯ’,’ಮಿಲನ’ಚಿತ್ರಗಳೇ ಸಾಕ್ಷಿ.ಮುಖ್ಯವಾಗಿ ಜಯ೦ತ ಕಾಯ್ಕಿಣಿಯವರ ಹಾಡುಗಳು ಕನ್ನಡ ಸ೦ಗೀತಕ್ಕೆ ಜೀವಾಳ ಎನಿಸಿವೆ.
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 120 / 7, 20 Overs
Play stopped for innings.
1st Test , Lord's Cricket Ground, St John's Wood
West Indies: 83 / 2, 29 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article