ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನೈಶ್ಚರ ಜಯಂತಿ ಕುರಿತ ವಿಶೇಷ ಲೇಖನ

ಶನಿಗೆ ವಿರೋಧ ಮಾತನಾಡಿದ್ದರಿಂದ ಅವರನ್ನಂತೂ ಶನಿರಾಜನು ಅರಳು ಹುರಿದಂಗೆ ಜೀವನದಲ್ಲಿ ಹುರಿಯಲಾರಂಭಿಸುತ್ತಾನೆ. ಸಾಡೇಸಾತಿ ಹೊಡೆತಕ್ಕೆ ಸಿಕ್ಕು ವಿಲವಿಲನೇ ಒದ್ದಾಡುತ್ತಾ ಕ್ಷಮೆ ಕೇಳಲು ಕೂಡ ಅವರಿಗೆ ಜ್ಞಾನವಿಲ್ಲದಂಗೆ ಆಗುವುದಂತೂ ಶತಸಿದ್ಧ.

By ನಾಗನೂರಮಠ ಎಸ್.ಎಸ್.
|
Google Oneindia Kannada News

ಮಹಾಮಹಿಮ ಮಹಾತ್ಮ ಶನಿದೇವನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಹಿಂದೂ ಧರ್ಮದವರಲ್ಲದವರು ಕೂಡ ಶನಿದೇವನ ಪ್ರಭಾವದ ಬಗ್ಗೆ ತಿಳಿದುಕೊಂಡಿದ್ದಾರೆ. ಅಷ್ಟೇ ಅಲ್ಲ ಅವರು ಕೂಡ ಶನಿಶಾಂತಿಗಾಗಿ ಹೋಮ, ತೈಲಾಭಿಷೇಕ ಮಾಡಿಸುತ್ತಾರೆ ಎಂದರೆ ಸಾಹೇಬನ ಪ್ರಭಾವ ಅಷ್ಟೊಂದು ಜಗಜ್ಜಾಹೀರಾಗಿದೆ. ಈ ಹಿಂದೆಯೇ ಸಾಡೇಸಾತಿ ಸರಣಿಯಲ್ಲಿ ಮಹಾತ್ಮನ ಜನ್ಮದ ಬಗ್ಗೆ ತಿಳಿಸಲಾಗಿದೆ.

ಮೇ 25 ಶನಿರಾಯನ ಜಯಂತಿ. ಹೀಗಾಗಿ ರಾಜ್ಯದೆಲ್ಲೆಡೆ ಮಹಾತ್ಮರ ದೇವಸ್ಥಾನದಲ್ಲಿ ಶನಿಕಾಟದಿಂದ ಪರದಾಡುತ್ತಿರುವವರು ಎಳ್ಳೆಣ್ಣೆ ಅಭಿಷೇಕ ಮಾಡಿಸುತ್ತಿರುವುದನ್ನು ನಾವು ಕಾಣಬಹುದು. [ಜೂನ್ 21ರಂದು ವೃಶ್ಚಿಕಕ್ಕೆ ಶನಿ ವಕ್ರೀ ಪ್ರವೇಶ, ಯಾವ ರಾಶಿಗೆ ಏನು ಫಲ]

"ಶನಿದೇವರ ಪ್ರಭಾವವೇನೂ ಇಲ್ಲಾರಿ, ಎಲ್ಲಾ ಬೊಗಳೆ" ಎನ್ನುತ್ತ, ಮಹಾತ್ಮನ ಪ್ರಭಾವ ಹೇಳುವವರು ಶನಿದೇವರ ಏಜೆಂಟ್ರಂತಿದ್ದಂತೆ ಎಂದು ಕೆಲವರು ಹೇಳುತ್ತಿರುತ್ತಾರೆ. ಇಂಥ ಶನಿವಿರೋಧಿಗಳು ಇಂದು ಮಹಾತ್ಮನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಸಂಕಟದಿಂದ ಒದ್ದಾಡುತ್ತ ಮಹಾತ್ಮನ ಕೃಪೆ ಕೋರಿ ಬಂದವರನ್ನು ಮಾತನಾಡಿಸಿಕೊಂಡು ಬಂದರೆ ಗೊತ್ತಾಗುತ್ತದೆ ಮಹಾತ್ಮನು ಯಾರನ್ನೂ ಬಿಡುವುದಿಲ್ಲ ಎಂಬುದು. [ಶನಿಕಾಟ ಶುರುವಾದರೆ ಆಗೋದು ಹೀಗೆ!]

Worship the lord on Shani jayanti

ಅವರಿಗೂ ಶುರುವಾಗುತ್ತದೆ ಶನಿಕಾಟ ತಪ್ಪಿದ್ದಲ್ಲ. ಆದರೆ ಶನಿಗೆ ವಿರೋಧ ಮಾತನಾಡಿದ್ದರಿಂದ ಅವರನ್ನಂತೂ ಶನಿರಾಜನು ಅರಳು ಹುರಿದಂಗೆ ಜೀವನದಲ್ಲಿ ಹುರಿಯಲಾರಂಭಿಸುತ್ತಾನೆ. ಸಾಡೇಸಾತಿ ಹೊಡೆತಕ್ಕೆ ಸಿಕ್ಕು ವಿಲವಿಲನೇ ಒದ್ದಾಡುತ್ತಾ ಕ್ಷಮೆ ಕೇಳಲು ಕೂಡ ಅವರಿಗೆ ಜ್ಞಾನವಿಲ್ಲದಂಗೆ ಆಗುವುದಂತೂ ಶತಸಿದ್ಧ. ಇದನ್ನಂತೂ ಅವರು ಅನುಭವಿಸಿಯೇ ಸಾಯಬೇಕು.

ಇಂದಿಗೂ ಕೂಡ ಮಹಾರಾಷ್ಟ್ರದ ಶನಿಸಿಂಗನಾಪುರದಲ್ಲಿ ಮಹಾತ್ಮನು ಕಲ್ಲಿನ ರೂಪದಲ್ಲಿ ಜೀವಂತವಿದ್ದಾನೆ ಎನ್ನಲಾಗುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಆ ಕಲ್ಲನ್ನೇನಾದರೂ ಉಗುರಿನಿಂದ ಕೆಬರಿದರೆ ರಕ್ತ ಜಿನುಗುತ್ತದೆ ಎಂಬುದು ಅಲ್ಲಿನವರ ಮಾತು. ಇದಕ್ಕೆಂದೇ ಇಡೀ ಊರಿನಲ್ಲಿ ಎಲ್ಲಿಯೂ ಬಾಗಿಲುಗಳಿಗೆ ಕೀಲಿ ಹಾಕುವುದಿಲ್ಲ. ಇಡೀ ಜಗತ್ತಿನಾದ್ಯಂತ ಕಳ್ಳರಿದ್ದಾರೆ. ಇದೂವರೆಗೂ ಶನಿಸಿಂಗನಾಪೂರದಲ್ಲಿ ಕಳ್ಳತನ ಮಾಡುವಂತಹ ದುರುಳ ಹುಟ್ಟಿಲ್ಲ ಎಂದರೆ ಶನಿದೇವರ ಪ್ರಭಾವ ಹೆಂಗಿದೆ ಎಂಬುದು ಗೊತ್ತಾಗುತ್ತದೆ. ಮಹಾತ್ಮನ ಪ್ರಭಾವಕ್ಕೆ ಇನ್ನೇನೂ ಸಾಕ್ಷಿ ಬೇಕು?

ಪೌರಾಣಿಕ ಕಥೆ : ಜಗತ್ತಿನ ಉದಯವಾಗುತ್ತಿದ್ದಂತೆ ಬ್ರಹ್ಮದೇವನು ಲೋಕದ ಸೃಷ್ಟಿಯ ಜವಾಬ್ದಾರಿಯನ್ನು ಹೊತ್ತುಕೊಂಡನು. ಮಹಾವಿಷ್ಣುವು ಲೋಕವನ್ನು ಬೆಳಗಿಸುತ್ತ ಅದರ ಬೆಳವಣಿಗೆಯನ್ನು ಮಾಡಲು ಸಿದ್ಧನಾದನು. ಶಂಭೋಲಿಂಗನು ಲೋಕದಲ್ಲಿ ಅಸಮತೋಲನವಾಗದಂತೆ ಅಳಿವಿನ ಜವಾಬ್ದಾರಿಯನ್ನು ನಿಭಾಯಿಸಲಾರಂಭಿಸಿನು.

ಲೋಕದಲ್ಲಿ ತನಗೊಬ್ಬನಿಗೇ ಈ ಕೆಲಸ ಭಾರವೆನಿಸಿದ್ದರಿಂದ ಮಹಾದೇವನು, ತನ್ನ ಕೆಲ ಕೆಲಸಗಳನ್ನು ಯಮ ಮತ್ತು ಶನಿಗೆ ನೀಡಿದನು. ಸ್ವತಃ ಈಶ್ವರನ ಕೃಪಾಕಟಾಕ್ಷವೇ ಶನಿದೇವನ ಮೇಲಿದೆ ಎಂದರೆ ಶನಿಯನ್ನು ಎದುರು ಹಾಕಿಕೊಂಡವರು ಈಶನನ್ನೇ ಎದುರು ಹಾಕಿಕೊಂಡಂತೆ. ಹೀಗಾಗಿ ಶನಿಗೆ ವಿರೋಧವಾಗಿ ಅಹಂಕಾರದ ಮಾತನ್ನಾಡಿದವರು ತಿಥಿಯೂಟ ಮಾಡಿಸುವುದು ಗ್ಯಾರಂಟಿ ಅವರ ಮನೆಯಲ್ಲಿ ಎನ್ನಬಹುದು.

ಇನ್ನು ಶನಿದೇವನ ಉಗ್ರತೆಯನ್ನು ಕಡಿಮೆ ಮಾಡಿಕೊಳ್ಳಲು ಈ ಹಿಂದೆ ತಿಳಿಸಿದಂತೆ ಹನುಮಾನ್ ಚಾಲೀಸಾ, ಮಹಾಮೃತ್ಯುಂಜಯ ಮಂತ್ರ ಪಠಣ ಮಾಡಬಹುದು. ಅಲ್ಲದೇ ಸ್ವತಃ ಜಾತಕವನ್ನು ಪರೀಕ್ಷಿಸಿಕೊಂಡು ಮುಂಬರುವ ಸಂಕಟಗಳನ್ನು ಕಂಡುಕೊಂಡು ಕೂಡಲೇ ಪರಿಹಾರಕ್ಕೆ ಯತ್ನಿಸಬೇಕು. ಇನ್ನು ಕೆಲವೇ ದಿನಗಳಲ್ಲಿ ಶನಿದೇವನ ಸಾಡೇಸಾತಿಯಲ್ಲಿ ಧನು ರಾಶಿಯವರು ಸಿಕ್ಕಿಕೊಳ್ಳಲಿದ್ದಾರೆ. ಹಾಗೆಯೇ ಕನ್ಯಾ ರಾಶಿಯವರು ಮಹಾತ್ಮನ ಬಿಗಿಮುಷ್ಠಿಯಿಂದ ಶೀಘ್ರ ಬಿಡುಗಡೆಯಾಗಲಿದ್ದಾರೆ.

English summary
Never try to test the power of Lord Shani. He is capable of construct or destruct life of anyone. But, if you bow to him, he will shower blessings and troubles you less. So, do not forget to worship him on Shani jayanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X