•  

ಮೀನರಾಶಿಯವರಿಗೆ ಹಿಂದಿನ ಜನ್ಮದ ರಹಸ್ಯ ತಿಳಿಯಲಿದೆಯೇ?

ಬುಧವಾರ, ಫೆಬ್ರವರಿ 22, 2012, 10:29 [IST]
Pisces
ಮೀನರಾಶಿಯವರಿಗೆ ಹಿಂದಿನ ಜನ್ಮದ ರಹಸ್ಯ ತಿಳಿಯಲಿದೆಯೇ? ಈ ರೀತಿಯ ವಿಷಯವನ್ನು ಟಿವಿ9 ಕಾರ್ಯಕ್ರಮವೊಂದರಲ್ಲಿ ಜ್ಯೋತಿಷಿಯೊಬ್ಬರು ಹೊರಹಾಕಿದ್ದಾರೆ. ಬರುವ ಫೆಬ್ರವರಿ 24 ಅಂದರೆ ಇದೇ ಶುಕ್ರವಾರ ರಾಶಿಗಳ ಮೇಲೆ ಪಂಚಗ್ರಹ ಪ್ರವೇಶವಾಗಲಿದೆಯಂತೆ..

ದ್ವಾದಶಿ ರಾಶಿಗಳ ಮೇಲೆ ಶುಕ್ರವಾರ ಬೆಳಗ್ಗೆ 10.07 ರಿಂದ ಪಂಚಗ್ರಹಗಳು ಎಂಟ್ರಿ ಕೊಡಲಿವೆ. ರವಿ, ಬುಧ, ಶುಕ್ರ, ಚಂದ್ರ ಮತ್ತು ಗುರು ಈ ಪಂಚಗ್ರಹಗಳು ಪ್ರವೇಶವಾಗಲಿರುವುದರಿಂದ ಮೇಷ, ವೃಷಭ, ಮಿಥುನ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನಾ ರಾಶಿಯವರ ಮೇಲೆ ಬದಲಾವಣೆಯಾಗಲಿದೆ ಎನ್ನುವುದು ಜ್ಯೋತಿಷ್ಯರ ಲೆಕ್ಕಾಚಾರ.

ಉದಾಹರಣೆಗೆ ಮೇಷ ರಾಶಿಯವರ ಮೇಲೆ ಗುರು ಪ್ರಭಾವ, ಕುಂಭ ರಾಶಿಯವರ ಮೇಲೆ ಶನಿ ಮತ್ತು ಬುಧನ ಪ್ರಭಾವ, ಕನ್ಯಾ ಮತ್ತು ತುಲಾ ರಾಶಿಯವರ ಮೇಲೆ ಶನಿಯ ಪ್ರಭಾವ, ಮೀನಾ ರಾಶಿಯವರ ಮೇಲೆ ಶುಕ್ರ ಮತ್ತು ಚಂದ್ರನ ಪ್ರಭಾವ ಹೆಚ್ಚಾಗಲಿದೆ ಎನ್ನುವುದು ಜ್ಯೋತಿಷ್ಯರ ಅಂಬೋಣ. ಇದರ ಪ್ರಭಾವ ಫೆಬ್ರವರಿ 24 ರಿಂದ ಒಂದು ತಿಂಗಳು ಇರಲಿದೆ.

ಬಹಳಷ್ಟು ರಾಶಿಯವರಿಗೆ ಉದ್ಯೋಗದಲ್ಲಿ ಉನ್ನತಿ, ಹಿನ್ನಡೆ, ಮದುವೆ ಯೋಗ, ಆರ್ಥಿಕ ಬಿಕ್ಕಟ್ಟು ಅಥವಾ ಸದೃಡತೆ, ಸಂಸಾರದಲ್ಲಿ ತಾಪತ್ರಯ ಅಥವಾ ಅನ್ಯೋನ್ಯತೆ, ದೈಹಿಕ ಸಮಸ್ಯೆ, ಮನಸಿಗೆ ನೆಮ್ಮದೆ ಇಲ್ಲದಿರುವುದು, ಲವ್ ಫೈಲ್ಯೂರ್, ಅಪಘಾತ ಇತ್ಯಾದಿ ಮಿಶ್ರಫಲಗಳು ಈ ಅವಧಿಯಲ್ಲಿ ಆಯಾಯ ರಾಶಿಯವರಿಗೆ ಲಭಿಸಲಿದೆ ಎನ್ನುವುದು ಜ್ಯೋತಿಷ್ಯರ ಲೆಕ್ಕಾಚಾರ.

ಈ ಕಾರ್ಯಕ್ರಮದಲ್ಲಿ ಜ್ಯೋತಿಷಿಯವರು ಹೇಳಿದ ಒಂದು ಮಾತನ್ನು ಹೈಲೈಟ್ ಮಾಡುವುದಾದರೆ ಮೀನ ರಾಶಿಯವರು ( ಎಲ್ಲರಿಗೂ ಅಲ್ಲ, ಈ ರಾಶಿಯವರ ಕೆಲವರಿಗೆ) ತಮ್ಮ ಹಿಂದಿಂದ ಜನ್ಮದ ರಹಸ್ಯ ತಿಳಿಯಲಿದ್ದಾರೆನ್ನುವ ಕುತೂಹಲಕಾರಿ ಸಂಗತಿ. ಹಿಂದಿನ ಜನ್ಮದಲ್ಲಿ ತಾನು ಏನಾಗಿದ್ದೆ, ಜೀವನಶೈಲಿ ಹೇಗಿತ್ತು ಮುಂತಾದ ವಿಷಯ ತಿಳಿದು ಈ ರಾಶಿಯವರು ಹೊಸ ಉತ್ಸಾಹ ಪಡೆಯಬಹುದು ಎನ್ನುವುದು ಜ್ಯೋತಿಷಿಯವರ ಲೆಕ್ಕಾಚಾರ.

ಒಟ್ಟಿನಲ್ಲಿ ಮೀನ ರಾಶಿಯವರಿಗೆ ಹೆಚ್ಚುಕಮ್ಮಿ ಈ ಅವಧಿಯಲ್ಲಿ ಒಳಿತಾಗಲಿದೆ ಎನ್ನುವ ಜ್ಯೋತಿಷಿಯವರ ಹೇಳಿಕೆ ಮೂಲಕ ಈ ಲೇಖನಕ್ಕೆ ಮಂಗಳ ಹಾಡುತ್ತಿದ್ದೇವೆ. "ಹುಟ್ಟಿಸಿದ ಶಿವ, ಹುಲ್ಲು ಮೇಯ್ಸದೆ ಇರ್ತಾನ" ಎನ್ನುವ ಗಟ್ಟಿ ಮನಸ್ಸಿನವರು ಚಿಂತೆ ಮ್ಯಾಡ್ ಬೇಡ್ರೀ..

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article